ಪುತ್ತೂರು: ಜ. 12ರಂದು ನಿಧನರಾದ ಡಿಂಬ್ರಿಗುತ್ತು ಸಂಜೀವ ರೈ ಬಳ್ಳಮಜಲುರವರ ಉತ್ತರಕ್ರಿಯೆ ಜ.22 ರಂದು ಪಾಲ್ತಾಡಿ ಗ್ರಾಮದ ಕೆಳಗಿನ ಕುಂಜಾಡಿ ಮನೆಯಲ್ಲಿ ನಡೆಯಿತು. ಸಾಮಾಜಿಕ ಮುಂದಾಳು ಅಮೃತ್ ಕುಮಾರ್ ರೈರವರು ಮಾತನಾಡಿ ಸಂಜೀವ ರೈರವರು ವಿಜಯ ಬ್ಯಾಂಕ್ನಲ್ಲಿ ತಮ್ಮ ಸೇವಾವಧಿಯಲ್ಲಿ ಅತ್ಯುತ್ತಮವಾದ ಅಧಿಕಾರಿಯಾಗಿದ್ದರು, ಸರಳ ಸಜ್ಜನಿಕೆಯ ವ್ಯಕ್ತಿತ್ವದ ಮೂಲಕ ಎಲ್ಲರ ಅಚ್ಚು ಮೆಚ್ಚಿನ ಆದರ್ಶ ವ್ಯಕ್ತಿಯಾಗಿದ್ದರು ಎಂದು ನುಡಿ ನಮನ ಸಲ್ಲಿಸಿದರು. ಸಂಜೀವ ರೈಯವರ ಪತ್ನಿ ಕೆಳಗಿನ ಕುಂಜಾಡಿ ಸುಪ್ರಭಾ ಎಸ್.ರೈ, ಪುತ್ರಿ ಕೆಳಗಿನ ಕುಂಜಾಡಿ ರೀಮಾ ರೈ, ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್, ಕೆಳಗಿನ ಕುಂಜಾಡಿ ಮಂಜುನಾಥ ರೈ, ಕೆಳಗಿನ ಕುಂಜಾಡಿ ಪ್ರಕಾಶ್ಚಂದ್ರ ರೈ ಮುಗೇರುಗುತ್ತು, ಕೆಳಗಿನ ಕುಂಜಾಡಿ ಲತಾ ಯು ಶೆಟ್ಟಿ, ಕೆಳಗಿನ ಕುಂಜಾಡಿ ಪ್ರಪುಲ್ಲಚಂದ್ರ ರೈ, ಕೆಳಗಿನ ಕುಂಜಾಡಿ ಸಂಧ್ಯಾ ಆರ್ ಶೆಟ್ಟಿ ಮತ್ತು ಡಿಂಬ್ರಿಗುತ್ತು ಬಳ್ಳಮಜಲು ಹಾಗೂ ಕೆಳಗಿನ ಕುಂಜಾಡಿ ಕುಟುಂಬಸ್ಥರು ಹಾಗೂ ಹಿತೈಷಿಗಳು ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.