ಉಪ್ಪಿನಂಗಡಿ : ಇಲ್ಲಿನ ಇಂದ್ರಪ್ರಸ್ಥ ವಿದ್ಯಾಲಯದ 9ನೇ ತರಗತಿಯ ವಿದ್ಯಾರ್ಥಿಗಳಾದ ಅಲೋಕ್ ನೂಜಿಬೈಲ್ ಹಾಗೂ ಆಶಿಶ್ ಎ ಎಸ್ ಇವರ A multipurpose cleanser from tranfat – A novel approach to sustainable living ಎನ್ನುವ ವಿಜ್ಞಾನ ಮಾದರಿ ಹಾಗೂ 6 ನೇ ತರಗತಿಯ ವಿದ್ಯಾರ್ಥಿನಿ ಚಿನ್ಮಯಿ ಜಿ.ಆರ್ ಹಾಗೂ 7ನೇ ತರಗತಿ ವಿದ್ಯಾರ್ಥಿನಿ ಫಾಮಿಯಾ ಇವರ An efficient management of tender coconut waste as organic laboratory stain ಎನ್ನುವ ವಿಜ್ಞಾನ ಮಾದರಿಯು ರಾಷ್ಟ್ರಮಟ್ಟದ NCSCಗೆ ಆಯ್ಕೆಯಾಗಿರುತ್ತದೆ ಎಂದು ಸಂಸ್ಥೆಯ ಮುಖ್ಯಗುರುಗಳಾದ ವೀಣಾ ಆರ್ ಪ್ರಸಾದ್ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.




ಈ ವಿದ್ಯಾರ್ಥಿಗಳಿಗೆ ಸಂಸ್ಥೆಯ ವಿಜ್ಞಾನ ಶಿಕ್ಷಕಿಯರಾದ ನಿಶಿತಾ ಕೆ ಕೆ, ಆಶಾಲತ ಹಾಗೂ ವಿಜ್ಞಾನ ಯೋಜನೆಗಳ ಸಂಯೋಜಕಿಯಾಗಿರುವ ಜ್ಯೋತಿ ಕಿರಣ್ ಇವರು ಮಾರ್ಗದರ್ಶನ ನೀಡಿರುತ್ತಾರೆ. ವಿದ್ಯಾರ್ಥಿಗಳಾದ ಅಲೋಕ್ ನೂಜಿಬೈಲ್ ಇವರು ನೂಜಿಬೈಲ್ ನಿವಾಸಿಗಳಾದ ರವಿನಾರಾಯಣ ಮತ್ತು ಪೂರ್ಣಿಮ ರವಿ ದಂಪತಿಗಳ ಪುತ್ರ, ಆಶಿಶ್ ಎ ಎಸ್ ಇವರು ಇಳಂತಿಲ ನಿವಾಸಿಗಳಾದ ಶಾಮರಾಜ್ ಶರ್ಮ ಮತ್ತು ಗಂಗಾವೇಣಿ ದಂಪತಿಗಳ ಪುತ್ರ, ಚಿನ್ಮಯಿ ಜಿ. ಆರ್ ಇವರು ಅಳಿಕೆ ವಿಟ್ಲ ನಿವಾಸಿಗಳಾದ ಜಿ ರಾಘವ ಬಲ್ಲಾಳ್ ಮತ್ತು ಹರಿಣಾಕ್ಷಿ ಪಿ ಆರ್ ದಂಪತಿಗಳ ಪುತ್ರಿ ಹಾಗೂ ಫಾಮಿಯ ಇವರು ಕರಾಯ ನಿವಾಸಿಗಳಾದ ಜಾಕಿರ್ ಹುಸೈನ್ ಮತ್ತು ಆಸ್ಮಾ ಎಂ ಜಿ ದಂಪತಿಗಳ ಪುತ್ರಿ .