`ಲಂಚ, ಭ್ರಷ್ಟಾಚಾರಕ್ಕೆ ಬಹಿಷ್ಕಾರ-ಉತ್ತಮ ಸೇವೆಗೆ ಪುರಸ್ಕಾರ ‘ ಸುದ್ದಿ ಜನಾಂದೋಲನ

0

  • ಜ.26ಕ್ಕೆ ಲಂಚ, ಭ್ರಷ್ಟಾಚಾರವನ್ನು ದಹಿಸುವ ಜಾಗೃತಿಗೆ ಜನಸಾಮಾನ್ಯರು ಸಹಕಾರ ಕೊಡಬೇಕು

ಪುತ್ತೂರು: ಪುತ್ತೂರಿನ ಸುದ್ದಿ ಪತ್ರಿಕೆ ಮೂಲಕ, ಇವತ್ತು ದೇಶದಲ್ಲಿ ವ್ಯಾಪಕವಾಗಿರುವ ಭ್ರಷ್ಟಾಚಾರವನ್ನು ಕೊನೆಗಾಣಿಸಬೇಕೆಂಬ ಆಂದೋಲನಕ್ಕೆ ಸಂಬಂಧಿಸಿ ಜ.26ಕ್ಕೆ ಸಂಜೆ 5 ಗಂಟೆಗೆ ಪುತ್ತೂರು ಗಾಂಧಿಕಟ್ಟೆಯ ಬಳಿ ನಡೆಯಲಿರುವ `ಲಂಚ ಭ್ರಷ್ಟಾಚಾರವನ್ನು ಬೆಂಕಿ ಹಾಕಿ ಸುಡುವ’ ಜಾಗೃತಿಗೆ ಜನಸಾಮಾನ್ಯರು ಸಹಕಾರ ಕೊಡಬೇಕೆಂದು ಶಾಸಕ ಸಂಜೀವ ಮಠಂದೂರು ಕರೆ ನೀಡಿದ್ದಾರೆ.

ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಆಗಿ ಆಝಾದಿಕಾ ಅಮೃತ ಮಹೋತ್ಸವ ಆಚರಣೆ ಮಾಡುವ ಸಂದರ್ಭದಲ್ಲಿ ದೇಶದಲ್ಲಿ ಭ್ರಷ್ಟಾಚಾರ ಮುಕ್ತವಾದಂತಹ ವ್ಯವಸ್ಥೆ ಇರಬೇಕು. ಈ ನಿಟ್ಟಿನಲ್ಲಿ ಪುತ್ತೂರಿನ ಸುದ್ದಿ ಪತ್ರಿಕೆ ಮೂಲಕ ಇವತ್ತು, ದೇಶದಲ್ಲಿ ವ್ಯಾಪಕವಾಗಿರುವ ಭ್ರಷ್ಟಾಚಾರವನ್ನು ಕೊನೆಗಾಣಿಸಬೇಕು. ಜ.26ಕ್ಕೆ ಭ್ರಷ್ಟಾಚಾರವನ್ನು ನಾಡಿನಿಂದ ತೊಲಗಿಸಲು ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಮಾಡಲು ಭ್ರಷ್ಟಾಚಾರವನ್ನು ಬೆಂಕಿ ಹಾಕಿ ಸುಡುವ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸ ಪುತ್ತೂರಿನಲ್ಲಿ ಆಗಬೇಕಾದರೆ ಇಡೀ ಪುತ್ತೂರಿನ ಎಲ್ಲಾ ಜನಸಾಮಾನ್ಯರು ಆಂದೋಲನಕ್ಕೆ ಸಹಕಾರ ಕೊಡುವ ಮೂಲಕ ರಾಜ್ಯದಲ್ಲಿ ಪುತ್ತೂರು ತಾಲೂಕು ಒಂದು ಭ್ರಷ್ಟಾಚಾರ ಮುಕ್ತ ಸಮಾಜ ಆಗಬೇಕು.ಈ ನಿಟ್ಟಿನಲ್ಲಿ ಭ್ರಷ್ಟಾಚಾರವನ್ನು ಬೆಂಕಿ ಹಾಕಿ ಸುಡುವ ಮೂಲಕ ಇಡೀ ಸಮಾಜದಲ್ಲಿ ಮತ್ತೊಮ್ಮೆ ಜಾಗೃತಿ ಆಗಬೇಕು ಎಂದರು.

ಗಣರಾಜ್ಯೋತ್ಸವದ ಸಂಭ್ರಮದ ದಿನ ಜನಪ್ರತಿನಿಧಿಗಳು, ಅಧಿಕಾರಿಗಳು ಭ್ರಷ್ಟಾಚಾರದಿಂದ ದೂರ ನಿಂತು ಜನರ ಹಿತವನ್ನು ಬಯಸಬೇಕು: ಜನಸಾಮಾನ್ಯರು ಇವತ್ತು ಸರಕಾರದ ಎಲ್ಲಾ ವ್ಯವಸ್ಥೆಗಳನ್ನು ಪಡೆದುಕೊಳ್ಳುವಾಗ ಸರಕಾರಿ ಅಧಿಕಾರಿಗಳು ಕೂಡಾ ಇವತ್ತು ಭ್ರಷ್ಟಾಚಾರದಿಂದ ದೂರ ನಿಂತು ಜನಸೇವೆಗೆ ಒತ್ತು ಕೊಡುವ ಸಂಗತಿಯನ್ನು ಮಾಡಬೇಕು.ಮಹಾತ್ಮ ಗಾಂಧೀಜಿಯವರು ಸ್ವಾತಂತ್ರ್ಯ ಬಂದಾಗ ಈ ದೇಶದ ಹಳ್ಳಿಯ ಜನ ಗ್ರಾಮ ಸ್ವರಾಜ್ಯದ ರಾಮರಾಜ್ಯ ಕಾಣಬೇಕೆಂದು ಕನಸು ಕಂಡಿದ್ದರು. ಆ ಗ್ರಾಮ ಸ್ವರಾಜ್ಯ ಇವತ್ತು ಹಳ್ಳಿಯಿಂದ ಅಗಬೇಕಾದರೆ ಭ್ರಷ್ಟಾಚಾರ ನಿರ್ಮೂಲನ ವ್ಯವಸ್ಥೆ ಕೂಡಾ ಹಳ್ಳಿಯಿಂದ ಆರಂಭಗೊಳ್ಳಬೇಕು.ಅದಕ್ಕೆ ಪ್ರಮುಖವಾಗಿ ದೇಶವನ್ನು ಆಳುತ್ತಿರುವ ಜನಪ್ರತಿನಿಧಿಗಳು, ಸರಕಾರಿ ಅಧಿಕಾರಿಗಳು ತಾವು ಪ್ರಮಾಣ ಮಾಡಿ ತನ್ನ ಕರ್ತವ್ಯದ ಅವಧಿ ಮತ್ತು ಜನಪ್ರತಿನಿಧಿಯ ಕಾಲಘಟ್ಟದಲ್ಲಿ ನಾನು ಭ್ರಷ್ಟಾಚಾರ ಮುಕ್ತವಾಗಿ ಕೆಲಸ ಮಾಡುತ್ತೇನೆ.ಜನರ ಹಿತವನ್ನು ಬಯಸುತ್ತೇನೆಂಬ ಬದ್ದತೆಯನ್ನು ತಮ್ಮಲ್ಲಿ ಅಳವಡಿಸಿಕೊಂಡಾಗ ಖಂಡಿತವಾಗಿಯೂ ಭ್ರಷ್ಟಾಚಾರವನ್ನು ತೊಲಗಿಸಬಹುದು.ಅದೇ ರೀತಿ ಸುದ್ದಿ ಪತ್ರಿಕೆ ಹಾಕಿಕೊಂಡ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಕಾರ್ಯಕ್ರಮ ಜನ ಸಾಮಾನ್ಯರನ್ನು ತಲೆ ಎತ್ತಿ ಸ್ವಾಭಿಮಾನದಿಂದ ಬದುಕುವ ವ್ಯವಸ್ಥೆ ಮಾಡಿಕೊಟ್ಟಿದೆ. ಅದೇ ರೀತಿ ಭ್ರಷ್ಟಾಚಾರ, ಲಂಚವನ್ನು ನಿರ್ಮೂಲನೆ ಮಾಡುವ ಮೂಲಕ ಈ ಸಮಾಜ ಮತ್ತೊಮ್ಮೆ ಭ್ರಷ್ಟಾಚಾರ ಮುಕ್ತ ಸಮಾಜ ಆಗಲಿ ಎಂದು ಹಾರೈಸುತ್ತೇನೆ ಎಂದು ಮಠಂದೂರು ಹೇಳಿದ್ದಾರೆ.

ಶಾಸಕ ಸಂಜೀವ ಮಠಂದೂರು ಕರೆ

  • ಜನಪ್ರತಿನಿಧಿಗಳು, ಅಧಿಕಾರಿಗಳು ಭ್ರಷ್ಟಾಚಾರದಿಂದ ದೂರ ನಿಂತು ಜನರ ಹಿತವನ್ನು ಬಯಸಬೇಕು:
  • ಸುದ್ದಿ ಆಂದೋಲನ ಜನಸಾಮಾನ್ಯರು ತಲೆ ಎತ್ತಿ ಸ್ವಾಭಿಮಾನದಿಂದ ಬದುಕುವ ವ್ಯವಸ್ಥೆ ಮಾಡಿಕೊಟ್ಟಿದೆ

5ಮಂದಿ ಉತ್ತಮ ಸೇವಕರನ್ನು ಗುರುತಿಸಿ
ಲಂಚ, ಭ್ರಷ್ಟಾಚಾರಕ್ಕೆ ಬಹಿಷ್ಕಾರ-ಉತ್ತಮ ಸೇವೆಗೆ ಪುರಸ್ಕಾರ ಎಂಬ ಜನಜಾಗೃತಿಯಲ್ಲಿ ಸರಕಾರಿ ಅಧಿಕಾರಿಗಳ ಪೈಕಿ ಉತ್ತಮ ಸೇವೆಗೆ ಪುರಸ್ಕಾರ ನೀಡುವ ನಿಟ್ಟನಲ್ಲಿ, ಲಂಚ ಭ್ರಷ್ಟಾಚಾರವನ್ನು ಬೆಂಕಿ ಹಾಕಿ ಸುಡುವ ವೇಳೆ ೫ ಮಂದಿ ಉತ್ತಮ ಸೇವೆ ನೀಡಿದ ಅಧಿಕಾರಿಗಳನ್ನು ಗುರುತಿಸುವ ಕಾರ್ಯಕ್ರಮ ಮಾಡುವುದು ಬಹಳ ಉತ್ತಮ ವಿಚಾರ.ಇದು ಸರಕಾರಿ ಅಧಿಕಾರಿಗಳ ಪ್ರಾಮಾಣಿಕ ಕರ್ತವ್ಯಕ್ಕೆ ಮತ್ತಷ್ಟು ಜವಾಬ್ದಾರಿ ನೀಡಿದಂತಾಗುತ್ತದೆ ಎಂದು ಶಾಸಕ ಮಠಂದೂರು ಹೇಳಿದರು.

LEAVE A REPLY

Please enter your comment!
Please enter your name here