ಲಂಚ, ಭ್ರಷ್ಟಾಚಾರಕ್ಕೆ ಬಹಿಷ್ಕಾರ-ಉತ್ತಮ ಸೇವೆಗೆ ಪುರಸ್ಕಾರ – ಸುದ್ದಿ ಜನಾಂದೋಲನಕ್ಕೆ ಸಚಿವ ಅಂಗಾರ ಬೆಂಬಲ

0

  • ಜ. 26 ಕಾರ್‍ಯಕ್ರಮ ಯಶಸ್ವಿಗೊಳಿಸಲು ಜನರಿಗೆ ಕರೆ

ಪುತ್ತೂರು: ಜ.26ರಂದು ಪುತ್ತೂರು, ಸುಳ್ಯದಲ್ಲಿ ಮತ್ತು ದ.ಕ. ಜಿಲ್ಲೆಯಲ್ಲಿ ಸುದ್ದಿಯ ಮಾರ್ಗದರ್ಶನದಲ್ಲಿ ನಡೆಯಲಿರುವ `ಲಂಚ ಭ್ರಷ್ಟಾಚಾರಕ್ಕೆ ಬಹಿಷ್ಕಾರ – ಉತ್ತಮ ಸೇವೆಗೆ ಪುರಸ್ಕಾರ` ಜನಾಂದೋಲನ ಕಾರ್ಯಕ್ರಮಕ್ಕೆ ದ.ಕ. ಜಿಲ್ಳಾ ಉಸ್ತುವಾರಿ ಸಚಿವ ಎಸ್.ಅಂಗಾರ ಬೆಂಬಲ ನೀಡಿದ್ದಾರೆ.

ಸಚಿವ ಎಸ್. ಅಂಗಾರ ಮತ್ತು ಸುದ್ದಿ ಜನಾಂದೋಲನದ ರೂವಾರಿ ಡಾ. ಯು.ಪಿ. ಶಿವಾನಂದರು ಕಾರ್‍ಯಕ್ರಮದ ಕುರಿತು ಚರ್ಚಿಸುತ್ತಿರುವುದು.

ಲಂಚ ಭ್ರಷ್ಟಾಚಾರವು ದೇಶದ ಅಭಿವೃದ್ಧಿಗೆ ಮಾರಕವಾದ ವ್ಯವಸ್ಥೆ. ಇದನ್ನು ಪ್ರತಿಯೊಬ್ಬರೂ ಅರಿತುಕೊಂಡು ಲಂಚ ಭ್ರಷ್ಟಾಚಾರದಿಂದ ಮುಕ್ತರಾದರೆ ನಮ್ಮ ಆಡಳಿತ ವ್ಯವಸ್ಥೆಯ ಮೇಲೆ ವಿಶ್ವಾಸ ಬರಲು ಸಾಧ್ಯವಾಗುತ್ತದೆ. ಆ ದೃಷ್ಠಿಯಿಂದ ಈ ಜನಾಂದೋಲನ ಮಹತ್ವ ಪೂರ್ಣವಾದದು. ನಮ್ಮ ತಾಲೂಕಿನ ಗ್ರಾಮ ಗ್ರಾಮಗಳಲ್ಲಿ ಮತ್ತು ತಾಲೂಕು, ಜಿಲ್ಲೆಯಲ್ಲಿ ಈ ಆಂದೋಲನ ಏರ್ಪಡಿಸುತ್ತಿರುವುದು ಒಳ್ಳೆಯ ವಿಚಾರ. ಈ ಕಾರ್ಯ ಈ ಹಿಂದೆಯೇ ಮಾಡಬೇಕಾಗಿತ್ತು`’ ಎಂದು ಸುಳ್ಯ ಶಾಸಕರೂ ಆಗಿರುವ ಸಚಿವ ಅಂಗಾರರು ಹೇಳಿದ್ದಾರೆ.

ಮಂಗಳೂರಿನಲ್ಲಿ ಸಚಿವರಿಂದ ಚಾಲನೆ : ದ.ಕ. ಜಿಲ್ಲಾ ಕೇಂದ್ರವಾದ ಮಂಗಳೂರಿನಲ್ಲಿ ಜ.26ರಂದು ಪೂರ್ವಾಹ್ನ ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಅಂಗಾರರವರು “ಲಂಚ, ಭ್ರಷ್ಟಾಚಾರಕ್ಕೆ ಬಹಿಷ್ಕಾರ – ಉತ್ತಮ ಸೇವೆಗೆ ಪುರಸ್ಕಾರ” ಸುದ್ದಿ ಜನಾಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಲಂಚ ಭ್ರಷ್ಟಾಚಾರ ದಹನಕ್ಕೆ ನಾಂದಿ ಹಾಡಲಿದ್ದಾರೆ.

LEAVE A REPLY

Please enter your comment!
Please enter your name here