ನಗರಸಭೆ ವ್ಯಾಪ್ತಿಯ ಗುರುಂಪುನಾರ್‌ನಲ್ಲಿ ರಸ್ತೆಗಾಗಿ ಭೂ ಸ್ವಾಧೀನಕ್ಕೆ ಮನವಿ

0

  • ದಲಿತ್ ಸೇವಾ ಸಮಿತಿಯ ಹಲವು ವರ್ಷದ ಬೇಡಿಕೆಗಗಳಿಗೆ ನಗರಸಭೆ ಅಧ್ಯಕ್ಷರ ಸಾತ್

ಪುತ್ತೂರು: ನಗರಸಭೆ ವ್ಯಾಪ್ತಿಯ ಪಡ್ನೂರು ಗ್ರಾಮದ ಮೂವಪ್ಪಿನಿಂದ ಗುರುಂಪುನಾರ್ ತನಕ ಹೋಗುವ ಸುಮಾರು ೧ ಕಿ.ಮೀ ರಸ್ತೆ ನಿರ್ಮಾಣಕ್ಕೆ ಆ ಭಾಗದ ಜನರು ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದು, ಇದೀಗ ದಲಿತ್ ಸೇವಾ ಸಮಿತಿಯ ಮೂಲಕ ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರ ಉಪಸ್ಥಿತಿಯಲ್ಲಿ ಸಹಾಯಕ ಆಯುಕ್ತರಲ್ಲಿ ಮಾತುಕತೆ ನಡೆಸಲಾಗಿದೆ.

 


ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಮತ್ತು ದಲಿತ್ ಸೇವಾ ಸಮಿತಿ ಜಿಲ್ಲಾ ಸಂಚಾಲಕ ಶೇಷಪ್ಪ ಬೆದ್ರಕಾಡು ಮತ್ತು ಆ ಭಾಗದ ಜನರು ಜ.24ರಂದು ತಾಲೂಕು ಆಡಳಿತ ಸೌಧದಲ್ಲಿ ಸಹಾಯಕ ಕಮೀಷನರ್ ಡಾ. ಯತೀಶ್ ಉಳ್ಳಾಲ್ ಅವರೊಂದಿಗೆ ಮಾತುಕತೆ ನಡೆಸಿದರು. ಆ ಭಾಗದ ಜನರು ರಸ್ತೆಗಾಗಿ ಭೂ ಸ್ವಾಧೀನ ಮಾಡಿಕೊಂಡುವಂತೆ ಮನವಿ ಮಾಡಿದರು.

ಹಲವು ವರ್ಷಗಳ ಹೋರಾಟ:
ರಸ್ತೆ ನಿರ್ಮಾಣಕ್ಕೆ ಹಲವು ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದೇವೆ. ೨೦೧೦ರಲ್ಲಿ ಆಗಿನ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಈ ಸಂಪರ್ಕ ರಸ್ತೆಗಾಗಿ ಭೂಸ್ವಾಧೀನ ಕುರಿತು ನಿರ್ಣಯ ಆಗಿತ್ತು. ಈ ನಿಟ್ಟಿನಲ್ಲಿ ಕಂದಾಯ ಇಲಾಖೆಯಿಂದ ಸರ್ವೆ ಮಾಡಿ ನಕಾಶೆ ತಯಾರಿಸಲಾಗಿತ್ತು. ಬಳಿಕದ ನಗರಸಭೆ ಮತ್ತು ಕಂದಾಯ ಇಲಾಖೆಯಿಂದ ಯಾವುದೇ ಸ್ಪಂಧನೆ ಸಿಗಲಿಲ್ಲ. ಇದೀಗ ಮತ್ತೆ ರಸ್ತೆಗಾಗಿ ನಾವು ಹೋರಾಟ ಆರಂಭಿಸಿದ್ದೇವೆ. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರು ನಮ್ಮೊಂದಿಗೆ ರಸ್ತೆ ನಿರ್ಮಾಣಕ್ಕಾಗಿ ಸಹಾಯಕ ಕಮೀಷನರ್ ಜೊತೆ ಮಾತುಕತೆ ನಡೆಸಿದ್ದಾರೆ. ಮಂದಿನ ದಿನ ಸಹಾಯಕ ಕಮೀಷನರ್ ಅವರು ಸ್ಥಳ ಪರಿಶೀಲನೆ ನಡೆಸಲಿದ್ದಾರೆ ಎಂದು ದಲಿತ್ ಸೇವಾ ಸಮಿತಿ ಜಿಲ್ಲಾ ಸಂಚಾಲಕ ಶೇಷಪ್ಪ ಬೆದ್ರಕಾಡು ಅವರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ದಲಿತ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಚಂದ್ರಶೇಖರ್ ವಿಟ್ಲ, ತಾಲೂಕು ಪ್ರಧಾನ ಕಾರ್ಯದರ್ಶಿ ಸುಂದರ್, ಪೂವಪ್ಪ ಗುರುಂಪುನಾರ್, ಗಣೇಶ್ ಪಡ್ಡಾಯೂರು, ರೆಂಜಲ ರಮೇಶ್, ಶ್ರೀಧರ್ ಗುರುಂಪುನಾರ್, ಹೇಮಚಂದ್ರ, ಕೃಷ್ಣಪ್ಪ, ಶೀನ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here