ಸಂಟ್ಯಾರು : ಕಲ್ಲಕಟ್ಟ ಶ್ರೀ ರಾಜಗುಳಿಗ ದೈವದ ಪ್ರತಿಷ್ಠಾ ಕಲಶ, ಆಮಂತ್ರಣ ಪತ್ರಿಕೆ ಬಿಡುಗಡೆ

0

ಪುತ್ತೂರು: ಸಂಟ್ಯಾರು ಕಲ್ಲಕಟ್ಟ ಶ್ರೀ ರಾಜಗುಳಿಗ ದೈವದ ಸನ್ನಿಧಿಯು ಜೀರ್ಣೋದ್ಧಾರಗೊಂಡು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಶ್ರೀ ರಾಜಗುಳಿಗ ದೈವದ ಪ್ರತಿಷ್ಠಾ ಕಲಶವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಫೆ.2 ರಂದು ನಡೆಯಲಿದೆ. ಇದರ ಆಮಂತ್ರಣ ಪತ್ರಿಕೆ ಬಿಡುಗಡೆಯು ಜ.23 ರಂದು ಶ್ರೀ ಸನ್ನಿಧಿಯಲ್ಲಿ ನಡೆಯಿತು. ಮೊದಲಿಗೆ ಕುರಿಯ ಉಳ್ಳಾಲ ಶ್ರೀ ಕ್ಷೇತ್ರ, ಕಾರ್ಪಾಡಿ ಶ್ರೀ ಕ್ಷೇತ್ರ ಹಾಗೂ ಪುತ್ತೂರು ಶ್ರೀ ಮಹಾಲಿಂಗೇಶ್ವರನ ಸನ್ನಿಧಿಯಲ್ಲಿ ಪೂಜೆ ನಡೆದು ಬಳಿಕ ಕಲ್ಲಕಟ್ಟ ಗುಳಿಗ ಸನ್ನಿಧಿಯಲ್ಲಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.

 

ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಕುರಿಯ ಏಳ್ನಾಡುಗುತುಮನೆಯ ರಾಧಾಕೃಷ್ಣ ರೈ, ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಚಂದ್ರಹಾಸ ರೈ ಮಲಾರು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರುಗಳು, ಜೀರ್ಣೋದ್ಧಾರ ಸಮಿತಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಸದಸ್ಯರುಗಳು, ಊರಿನ ಹತ್ತು ಸಮಸ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here