ನೆಲ್ಯಾಡಿ: ಮಿಲೇನಿಯಂ ಬ್ರದರ್ಸ್ ಕೋಲ್ಪೆ ಹಾಗೂ ಕರುನಾಡ ಸಾರಥಿಗಳ ಸೈನ್ಯ ಟ್ರೇಡ್ ಯೂನಿಯನ್ ದ.ಕ. ಇದರ ವತಿಯಿಂದ ಸೌಹಾರ್ದ ಟ್ರೋಫಿ-2022 ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಜ.26ರಂದು ಕೊಣಾಲು ಶಾಲಾ ಮೈದಾನದಲ್ಲಿ ನಡೆಯಲಿದೆ. ಬೆಳಿಗ್ಗೆ ೯.೩೦ಕ್ಕೆ ಪಂದ್ಯಾಟವನ್ನು ಕೊಣಾಲು ಶಾಲಾ ಎಸ್ಡಿಎಂಸಿ ಅಧ್ಯಕ್ಷ ಕೆ.ಇ.ಮೊಹಮ್ಮದ್ ರಫೀಕ್ರವರು ಉದ್ಘಾಟಿಸಲಿದ್ದಾರೆ. ಕ್ರಿಕೆಟ್ ಪಂದ್ಯಾಟದಲ್ಲಿ ಪೊಲೀಸ್ ತಂಡ ಉಪ್ಪಿನಂಗಡಿ, ಅರಣ್ಯಾಧಿಕಾರಿಗಳ ತಂಡ ಕಡಬ ವಲಯ, ಮೆಸ್ಕಾಂ ತಂಡ ನೆಲ್ಯಾಡಿ ಕಡಬ, ಅಧ್ಯಾಪಕರ ತಂಡ, ವರ್ತಕರ ತಂಡ, ಬ್ಯಾಂಕ್ ಸಿಬ್ಬಂದಿಗಳ ತಂಡ, ಕೆಎಸ್ಎಸ್ಟಿಯು ಚಾಲಕರ ತಂಡ, ಸಂಘಸಂಸ್ಥೆ/ಜನಪ್ರತಿನಿಧಿಗಳ ತಂಡ ಭಾಗವಹಿಸಲಿದೆ. ಪ್ರಥಮ ವಿಜೇತ ತಂಡಕ್ಕೆ ೧೦ ಸಾವಿರ ರೂ.,ಹಾಗೂ ದ್ವಿತೀಯ ವಿಜೇತ ತಂಡಕ್ಕೆ ೫ ಸಾವಿರ ರೂ.,ನಗದು ಜೊತೆಗೆ ಟ್ರೋಫಿ ಸಿಗಲಿದೆ. ಅಲ್ಲದೇ ಪಂದ್ಯಶ್ರೇಷ್ಠ, ಸರಣಿ ಶ್ರೇಷ್ಠ ಪ್ರಶಸ್ತಿಯೂ ಇರಲಿದೆ. ಸಂಜೆ ಕೆಎಸ್ಎಸ್ಟಿಯು ದ.ಕ.ಜಿಲ್ಲಾ ಘಟಕದ ಅಧ್ಯಕ್ಷ ಮಹಮ್ಮದ್ ಆಲಿ ಮಂಗಳೂರು ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರೋಪದಲ್ಲಿ ವಿಜೇತ ತಂಡಕ್ಕೆ ಬಹುಮಾನ ವಿತರಣೆ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.