ಪುತ್ತೂರು: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಗಳು ಜಂಟಿಯಾಗಿ ಜಿಲ್ಲಾಮಟ್ಟದಲ್ಲಿ ಆಯೋಜಿಸಿದ್ದ ೨೯ನೇ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಸುದಾನ ಶಾಲೆಯ ೯ನೇ ತರಗತಿಯ ವಿದ್ಯಾರ್ಥಿಗಳಾದ ಅಚಲ್ ಕೆ( ಆಪ್ತೇಶ್ ಕುಮಾರ್ ಹಾಗೂ ಚಂದ್ರಾವತಿ ರೈ ಅವರ ಪುತ್ರ) ಹಾಗೂ ಸತ್ಯ ಪ್ರಸಾದ್ ( ರಾಘವೇಂದ್ರ ನಾಯಕ್ ಹಾಗೂ ಲಕ್ಷ್ಮೀ ನಾಯಕ್ ಅವರ ಪುತ್ರ) ಇವರು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಇವರು ಬಾಳೆನಾರಿನಿಂದ ಮೈದಾ ಹುಡಿಯ ಮೌಲ್ಯ ವರ್ಧನೆ ಎಂಬ ವಿಚಾರದಲ್ಲಿ ಪ್ರಬಂಧವನ್ನು ಮಂಡಿಸಿದ್ದರು. ಇವರಿಗೆ ಶಾಲಾ ವಿಜ್ಞಾನ ಶಿಕ್ಷಕಿಯರಾದ ನಿವೇದಿತಾ ಭಂಡಾರಿ ಹಾಗೂ ಸಾಧನಾ ಹೆಬ್ಬಾರ್ರವರು ಮಾರ್ಗದರ್ಶನ ನೀಡಿರುತ್ತಾರೆ. ಮುಖ್ಯ ಶಿಕ್ಷಕಿ ಶೋಭಾ ನಾಗರಾಜ್ ಮತ್ತು ಆಡಳಿತ ಮಂಡಳಿಯವರು ಶುಭ ಹಾರೈಸಿದ್ದಾರೆ.