ಕುಂಬ್ರ ಮೂರ್ತೆದಾರರ ಸೇವಾ ಸಹಕಾರಿ ಸಂಘ ಸ್ಥಳಾಂತರಗೊಂಡು ನೂತನ ಕಛೇರಿ ಅಕ್ಷಯ ಆರ್ಕೇಡ್‌ನಲ್ಲಿ ಶುಭಾರಂಭ

0

  • ಸಹಕಾರಿ ಸಂಘಗಳ ಅಭಿವೃದ್ಧಿಯಲ್ಲಿ ಗ್ರಾಹಕರ ಪಾತ್ರ ಮಹತ್ತರವಾದದ್ದು ಆಗಿದೆ: ಜಯಂತ ನಡುಬೈಲ್

 

ಪುತ್ತೂರು: ಯಾವುದೇ ಒಂದು ಸಹಕಾರಿ ಸಂಘ ಅಭಿವೃದ್ಧಿಯಾಗಬೇಕಾದರೆ ಗ್ರಾಹಕರ ಪಾತ್ರ ಮಹತ್ತರವಾದದ್ದು ಆಗಿದೆ. ಗ್ರಾಹಕರಿಲ್ಲದೆ ಯಾವುದೇ ಅಭಿವೃದ್ಧಿ ಸಾಧ್ಯವಿಲ್ಲ. ಗ್ರಾಹಕರಿಗೆ ತೃಪ್ತಿದಾಯಕ ಸೇವೆ ನೀಡಿದಾಗ ಸಹಕಾರಿ ಸಂಘಗಳ ಅಭಿವೃದ್ಧಿ ಸಾಧ್ಯವಿದೆ. ಈ ನಿಟ್ಟಿನಲ್ಲಿ ಕುಂಬ್ರ ಮೂರ್ತೆದಾರರ ಸೇವಾ ಸಹಕಾರಿ ಸಂಘವು ಉತ್ತಮ ಆಡಳಿತ ವರ್ಗ, ಸಿಬ್ಬಂದಿ ವರ್ಗವನ್ನು ಒಳಗೊಂಡಿದ್ದು ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಾ ಬಂದಿದ್ದು ವಾರ್ಷಿಕ ಸುಮಾರು ರೂ.೨೫ ಕೋಟಿಗೂ ಹೆಚ್ಚಿನ ವ್ಯವಹಾರವನ್ನು ನಡೆಸುತ್ತಾ ಬಂದಿದೆ. ಇದೀಗ ಸಂಘದ ಕಛೇರಿಯು ಅಕ್ಷಯ ಆರ್ಕೇಡ್‌ನಲ್ಲಿ ಆರಂಭಗೊಂಡಿದ್ದು ಮುಂದಿನ ದಿನಗಳಲ್ಲಿ ಸಂಘದ ವ್ಯವಹಾರವು ಅಕ್ಷಯವಾಗುತ್ತಾ ಸಾಗಲಿ ಎಂದು ಅಕ್ಷಯ ಆರ್ಕೇಡ್‌ನ ಮಾಲಕ, ಉದ್ಯಮಿ ಜಯಂತ ನಡುಬೈಲ್ ಹೇಳಿದರು.


ಅವರು ಜ.೨೪ ರಂದು ಕುಂಬ್ರ ಅಕ್ಷಯ ಆರ್ಕೇಡ್‌ನಲ್ಲಿ ನಡೆದ ಕುಂಬ್ರ ಮೂರ್ತೆದಾರರ ಸೇವಾ ಸಹಕಾರಿ ಸಂಘದ ನೂತನ ಕಛೇರಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ಒಟ್ಟು ೫ ಮೂರ್ತೆದಾರರ ಸಹಕಾರಿ ಸಂಘಗಳಿದ್ದು ಇದರಲ್ಲಿ ಕುಂಬ್ರ ಮೂರ್ತೆದಾರರ ಸಹಕಾರಿ ಸಂಘವು ಒಟ್ಟು ೧೪ ಗ್ರಾಮಗಳ ವ್ಯಾಪ್ತಿಯನ್ನು ಒಳಗೊಂಡಿದ್ದು ಉತ್ತಮ ವ್ಯವಹಾರದೊಂದಿಗೆ ಪ್ರತಿವರ್ಷ ಲಾಭಾಂಶದ ಕಡೆಗೆ ಮುನ್ನಡೆಯುತ್ತಿದೆ ಎಂದರು. ಪುತ್ತೂರು ಜಿಲ್ಲೆ ಆಗುವ ಸಂದರ್ಭದಲ್ಲಿ ಕುಂಬ್ರ ತಾಲೂಕು ಆಗುವ ನಿರೀಕ್ಷೆ ಇದ್ದು ಈ ಸಮಯದಲ್ಲಿ ಕುಂಬ್ರದ ಹೃದಯ ಭಾಗದಲ್ಲಿ ಸಂಘದ ಕಛೇರಿ ಆರಂಭವಾಗಿರುವುದು ಎಲ್ಲಾ ವಿಧದಲ್ಲೂ ಉತ್ತಮವಾಗಿದೆ. ಸಹಕಾರಿ ಸಂಘದಿಂದ ಇನ್ನಷ್ಟು ಅಭಿವೃದ್ಧಿ ಕೆಲಸಗಳು ಮೂಡಿಬರಲಿ ಎಂದು ಜಯಂತ ನಡುಬೈಲ್ ಹೇಳಿ ಶುಭ ಹಾರೈಸಿದರು. ಕುಂಬ್ರ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಆರ್.ಸಿ.ನಾರಾಯಣ ರೆಂಜ ಸಭಾಧ್ಯಕ್ಷತೆ ವಹಿಸಿದ್ದರು.


ನೂತನ ಕಛೇರಿಯನ್ನು ಪುತ್ತೂರು ಶಾಸಕ ಸಂಜೀವ ಮಠಂದೂರುರವರು ರಿಬ್ಬನ್ ತುಂಡರಿಸಿ ಉದ್ಘಾಟಿಸಿ ಶುಭ ಹಾರೈಸಿದರು. ನೂತನ ಲಾಕರ್ ವ್ಯವಸ್ಥೆಯನ್ನು ದ.ಕ ಜಿಲ್ಲಾ ಮೂರ್ತೆದಾರರ ಸಹಕಾರ ಮಹಾಮಂಡಲದ ಅಧ್ಯಕ್ಷ ಸಂಜೀವ ಪೂಜಾರಿ ಬೊಳ್ಳಾಯಿ ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ತಾ.ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿಯವರು ಮಾತನಾಡಿ, ಸಹಕಾರಿ ಸಂಘದ ಬೆಳವಣಿಗೆಯ ಹಿಂದೆ ಸಮಾಜದ ಎಲ್ಲಾ ಬಾಂಧವರ ಪಾತ್ರ ಇದೆ. ಎಲ್ಲರೂ ಸಹಕಾರ ನೀಡಿದಾಗ ಸಂಘದ ಅಭಿವೃದ್ಧಿ ಸಾಧ್ಯವಿದೆ. ಕುಂಬ್ರ ಮೂರ್ತೆದಾರರ ಸೇವಾ ಸಹಕಾರಿ ಸಂಘವು ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದು ಹೇಳಿ ಶುಭ ಹಾರೈಸಿದರು. ಕೆದಂಬಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ರತನ್ ರೈ ಕುಂಬ್ರ ಮಾತನಾಡಿ, ಕುಂಬ್ರ ಮೂರ್ತೆದಾರರ ಸೇವಾ ಸಹಕಾರಿ ಸಂಘವು ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಿದೆ. ನಗುಮೊಗದ ಸಿಬ್ಬಂದಿ ವರ್ಗ, ಆಡಳಿತ ಮಂಡಳಿಯನ್ನು ಹೊಂದಿರುವ ಸಂಘವು ಮುಂದಿನ ದಿನಗಳಲ್ಲಿ ೧೦೦ ಕೋಟಿ ರೂ.ವ್ಯವಹಾರವನ್ನು ಮಾಡುವ ಸಂಘವಾಗಿ ಹೊರಹೊಮ್ಮಲಿ ಎಂದು ಶುಭ ಹಾರೈಸಿದರು. ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಮಾತನಾಡಿ, ಉತ್ತಮ ರೀತಿಯಲ್ಲಿ ಗ್ರಾಹಕರಿಗೆ ಸೇವೆಯನ್ನು ನೀಡುತ್ತಿರುವ ಕುಂಬ್ರ ಮೂರ್ತೆದಾರರ ಸೇವಾ ಸಹಕಾರಿ ಸಂಘವು ಮುಂದಿನ ದಿನಗಳಲ್ಲಿ ನಂಬರ್ ೧ ಸಂಘವಾಗಿ ಬೆಳೆಯಲಿ ಎಂದು ಹೇಳಿ ಶುಭಹಾರೈಸಿದರು.

ಗೌರವಾರ್ಪಣೆ
ವಿವಿಧ ರೀತಿಯ ಕೆಲಸ ನಿರ್ವಹಿಸಿದವರನ್ನು ಹಾಗೂ ಸಂಘಕ್ಕೆ ಠೇವಣಿ ಇರಿಸಿದವರನ್ನು ಈ ಸಂದರ್ಭದಲ್ಲಿ ಶಾಲು ಹಾಕಿ ಗೌರವಿಸಲಾಯಿತು. ನವೀನ್ ಪಟ್ಲ, ವೆಂಕಟೇಶ್ ನಿಡ್ಪಳ್ಳಿ, ರಮೇಶ್ ಸಂಟ್ಯಾರ್, ಸುರೇಶ್ ಸಾಲಿಯಾನ್ ಪರ್ಪುಂಜ, ಹರಿಣಾಕ್ಷಿ ತ್ಯಾಗರಾಜನಗರ, ಮೊದುಕುಂಞರವರುಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

ಸಹಕಾರಿ ಸಂಘದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಕೋಟ
ಸಭಾ ಕಾರ್ಯಕ್ರಮದ ಬಳಿಕ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆಗಮಿಸಿದರು. ಕಛೇರಿಯ ವ್ಯವಸ್ಥೆಗಳ ಬಗ್ಗೆ ಮಾಹಿತಿ ಪಡೆದುಕೊಂಡ ಇವರು ಶ್ಲಾಘನೆ ವ್ಯಕ್ತಪಡಿಸಿದರು. ಸಹಕಾರಿ ಸಂಘವು ಗ್ರಾಹಕರಿಗೆ ಒಳ್ಳೆಯ ಸೇವೆಯನ್ನು ನೀಡುವ ಮೂಲಕ ಅಭಿವೃದ್ಧಿಯನ್ನು ಕಾಣಲಿ ಎಂದು ಹೇಳಿ ಶುಭ ಹಾರೈಸಿದರು. ಸಭಾ ಕಾರ್ಯಕ್ರಮದ ಮೊದಲು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಶಶಿಕುಮಾರ್ ಬಾಲ್ಯೊಟ್ಟು, ಮುಕ್ರಂಪಾಡಿ ಆಕರ್ಷಣ್ ಇಂಡಸ್ಟ್ರೀಸ್ ಮಾಲಕ ಕೆ.ಪಿ ಸಾದಿಕ್ ಕುಂಬ್ರ ಆಗಮಿಸಿ ಶುಭ ಹಾರೈಸಿದರು. ಶುತಿ ಪಲ್ಲತ್ತಾರು ಪ್ರಾರ್ಥಿಸಿದರು. ಸಹಕಾರಿ ಸಂಘದ ನಿರ್ದೇಶಕ ನಿತೀಶ್ ಕುಮಾರ್ ಶಾಂತಿವನ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಕಾಂತ ಶಾಂತಿವನ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಅಧ್ಯಕ್ಷರುಗಳಾದ ಮೋನಪ್ಪ ಪೂಜಾರಿ ಕೆರೆಮಾರು, ವಸಂತ ಪೂಜಾರಿ ಬಂಬಿಲ, ನಿರ್ದೇಶಕರುಗಳಾದ ಕೊರಗಪ್ಪ ಪೂಜಾರಿ ಕಾವು, ಗಿರಿಜಾ ಧನಂಜಯ ಪೂಜಾರಿ ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಸಂಘದ ಉಪಾಧ್ಯಕ್ಷ ನಾರಾಯಣ ಪೂಜಾರಿ ಕುರಿಕ್ಕಾರ ವಂದಿಸಿದರು. ಶಶಿಧರ ಕಿನ್ನಿಮಜಲು ಕಾರ್ಯಕ್ರಮ ನಿರೂಪಿಸಿದರು. ಆಡಳಿತ ಮಂಡಳಿಯ ಸದಸ್ಯರು, ಸಿಬ್ಬಂದಿ ವರ್ಗದವರು ಸಹಕರಿಸಿದ್ದರು.

`ಸಹಕಾರಿ ಸಂಘಗಳ ಬೆಳವಣಿಗೆಯಲ್ಲಿ ಗ್ರಾಹಕರ ಪಾತ್ರ ಪ್ರಮುಖವಾದದ್ದು ಆಗಿದೆ. ಕುಂಬ್ರ ಮೂರ್ತೆದಾರರ ಸೇವಾ ಸಹಕಾರಿ ಸಂಘದಲ್ಲಿ ಸಮಾಜದ ಎಲ್ಲಾ ವರ್ಗದ ಗ್ರಾಹಕರು ವ್ಯವಹಾರ ನಡೆಸುತ್ತಿದ್ದು ಸಂಘದ ಬೆಳವಣಿಗೆಯಲ್ಲಿ ಪಾಲುದಾರರಾಗಿದ್ದಾರೆ. ಮುಂದಿನ ದಿನಗಳಲ್ಲಿ ಕೆಯ್ಯೂರು, ಬೆಟ್ಟಂಪಾಡಿ ಮತ್ತು ಈಶ್ವರಮಂಗಲದಲ್ಲಿ ಶಾಖೆಗಳನ್ನು ತೆರೆಯುವ ಯೋಜನೆ ಇದೆ. ಪಿಗ್ಮಿ ಸಂಗ್ರಹ ಆಗುತ್ತಿದೆ. ಗ್ರಾಹಕರಿಗೆ ತೃಪ್ತಿದಾಯಕ ಸೇವೆ ನೀಡುವುದೇ ಸಂಘದ ಧ್ಯೇಯವಾಗಿದೆ. ಸಂಘದ ಬೆಳವಣಿಗೆ ಸಮಸ್ತ ಜನತೆಯ ಸಹಕಾರವನ್ನು ಬಯಸುತ್ತೇವೆ’ ಆರ್.ಸಿ.ನಾರಾಯಣ ರೆಂಜ, ಅಧ್ಯಕ್ಷರು, ಕುಂಬ್ರ ಮೂರ್ತೆದಾರರ ಸೇವಾ ಸಹಕಾರಿ ಸಂಘ

ಕುಂಬ್ರ ಮೂರ್ತೆದಾರರ ಸೇವಾ ಸಹಕಾರಿ ಸಂಘದಲ್ಲಿ ಉಳಿತಾಯ ಠೇವಣಿ, ದ್ಯೆನಿಕ ಠೇವಣಿ, ನಿರಖು ಠೇವಣಿ, ಸುವರ್ಣ ನಗದು ಪತ್ರ, ಮಾಸಿಕ ಠೇವಣಿ, ಸಂಚಯ ಖಾತೆಗಳಲ್ಲಿ ಬಂಡವಾಳವನ್ನು ತೊಡಗಿಸಬಹುದು. ಚಿನ್ನಾಭರಣ ಈಡಿನ ಸಾಲ, ಠೇವಣಿ ಆಧಾರಿತ ಸಾಲ, ಜಾಮೀನು ಸಾಲ, ಆದಾರ ಸಾಲ, ಅಲ್ಪಾವಧಿ ಸಾಲ, ದೀರ್ಘಾವಧಿ ಸಾಲ, ಹೊಸ ದ್ವಿಚಕ್ರ ವಾಹನ ಸಾಲ, ಸೋಲಾರ್ ಆಳವಡಿಸಲು ಸಾಲವನ್ನು ನೀಡಲಾಗುತ್ತಿದೆ. ಮೂರ್ತೆದಾರಿಕೆ ಮಾಡುವ ಸದಸ್ಯರಿಗೆ ಉತ್ತಮದಾರಣೆ, ಪ್ರೋತ್ಸಾಹ ಧನ, ವಿಮೆ, ಮಕ್ಕಳಿಗೆ ವಿದ್ಯಾರ್ಥಿ ವೇತನ, ಸಣ್ಣ ಪ್ರಮಾಣದ ಸಾಲವನ್ನು ನೀಡಲಾಗುತ್ತಿದೆ. ಎಲ್ಲಾ ತರದ ಮೊಬೈಲ್ ಮತ್ತು ಟಿ.ವಿ ರಿಚಾರ್ಜ್, ಇ-ಸ್ಟ್ಯಾಂಪ್, ಪಾನ್‌ಕಾರ್ಡ್, ಆರ್.ಟಿ.ಸಿ ತೆಗೆದು ಕೊಡುವ ವ್ಯವಸ್ಥೆ ಅಲ್ಲದೆ ಗ್ರಾಹಕರ ಅನುಕೂಲಕ್ಕಾಗಿ ಸೇಫ್ ಲಾಕರ್ ವ್ಯವಸ್ಥೆ ಸಂಘದಲ್ಲಿದೆ.

LEAVE A REPLY

Please enter your comment!
Please enter your name here