- ಅಧ್ಯಕ್ಷ : ಡಾ.ಅಮೃತಾ ಕೆ.ಪ್ರಸಾದ, ಕಾರ್ಯದರ್ಶಿ: ಡಾ.ಶಿವಾನಂದ ಎಚ್., ಕೋಶಾಧಿಕಾರಿ: ಡಾ.ಚರಣ್ ಕಜೆ
ಪುತ್ತೂರು : ಭಾರತೀಯ ದಂತ ವೈದ್ಯಕೀಯ ಸಂಘ ಪುತ್ತೂರು ಶಾಖೆ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಬೊಳ್ವಾರು IDA ಭವನದಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ಪುತ್ತೂರಿನ ದಂತವೈದ್ಯ ಡಾ.ಅಮೃತಾ ಕೆ.ಪ್ರಸಾದ, ಕಾರ್ಯದರ್ಶಿಯಾಗಿ ಡಾ.ಶಿವಾನಂದ ಎಚ್., ಕೋಶಾಧಿಕಾರಿಯಾಗಿ ಡಾ.ಚರಣ್ ಕಜೆರವರನ್ನು ಆಯ್ಕೆ ಮಾಡಲಾಯಿತು. ಡಾ.ರಾಘವೇಂದ್ರ ಪಿ. ಪ್ರಮಾಣ ವಚನ ಭೋದಿಸಿದರು.



ಈ ಸಂದರ್ಭದಲ್ಲಿ ಹಿರಿಯ ಸದಸ್ಯರುಗಳಾದ ಡಾ.ಎಮ್.ಎಮ್.ದಯಾಕರ ಮತ್ತು ಡಾ.ರಾಜರಾಮ ಕೆ.ಬಿ. ರವರನ್ನು ಸನ್ಮಾನಿಸಲಾಯಿತು. ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ನರಸಿಂಹ ಶರ್ಮ ಕಾನಾವು ಉಪಸ್ಥಿತರಿದ್ದರು. ನಿಕಟಪೂರ್ವ ಅಧ್ಯಕ್ಷೆ ಡಾ.ಶ್ರುತಿ ಹೆಗಡೆ ಸ್ವಾಗತಿಸಿ ಡಾ.ಶಿವಾನಂದ ವಂದಿಸಿದರು. ಡಾ.ಶ್ರೀಪ್ರಕಾಶ ಕಾರ್ಯಕ್ರಮ ನಿರ್ವಹಿಸಿದರು.