ನೆಟ್ಟಣಿಗೆ ಮುಡ್ನೂರು ಗ್ರಾಪಂನಲ್ಲಿ ಗಣರಾಜ್ಯೋತ್ಸವ ಆಚರಣೆ, ಲಂಚ ಭ್ರಷ್ಟಾಚಾರ ಪ್ರತಿಕೃತಿ ದಹನ

0

ಪುತ್ತೂರು: ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್‌ನಲ್ಲಿ ೭೩ ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಗ್ರಾಪಂ ಅಧ್ಯಕ್ಷ ರಮೇಶ್ ರೈ ಸಾಂತ್ಯ ಧ್ವಜಾರೋಹಣ ಮಾಡುವ ಮೂಲಕ ಆಚರಿಸಿ ನಾಡಿನ ಜನತೆಗೆ ಶುಭ ಕೋರಿದರು. ಈ ಸಂದರ್ಭದಲ್ಲಿ ಸುದ್ದಿ ಜನಾಂದೋಲನ ವೇದಿಕೆ ಹಮ್ಮಿಕೊಂಡಿರುವ ಲಂಚ ಭ್ರಷ್ಟಾಚಾರಕ್ಕೆ ಬಹಿಷ್ಕಾರ, ಉತ್ತಮ ಸೇವೆಗೆ ಪುರಸ್ಕಾರ ಎಂಬ ಆಂದೋಲನದ ಅಂಗವಾಗಿ ಲಂಚ ಭ್ರಷ್ಟಾಚಾರದ ಪ್ರತಿಕೃತಿ ದಹನ ಕಾರ್ಯಕ್ರಮ ನಡೆಯಿತು.

 

ಗ್ರಾಪಂ ಅಧ್ಯಕ್ಷ ರಮೇಶ್ ರೈ ಸಾಂತ್ಯರವರು ಪ್ರತಿಕೃತಿಗೆ ಬೆಂಕಿ ಹಚ್ಚುವ ಮೂಲಕ ಲಂಚ ಭ್ರಷ್ಟಾಚಾರ ಮುಕ್ತ ಗ್ರಾಮ ನಮ್ಮದಾಗಬೇಕು ಎಂಬ ಧ್ಯೇಯದೊಂದಿಗೆ ಕೆಲಸ ಮಾಡುತ್ತಿದ್ದೇವೆ. ಸುದ್ದಿ ಹಮ್ಮಿಕೊಂಡಿರುವ ಒಂದು ಒಳ್ಳೆಯ ಕಾರ್ಯಕ್ರಮ ಇದಾಗಿದೆ ಎಂದು ಹೇಳಿದರು. ಲಂಚ ಕೊಡುವುದು ಮತ್ತು ತೆಗೆದುಕೊಳ್ಳುವುದು ಎರಡೂ ಅಪರಾಧ. ಲಂಚ ಕೊಡುವುದನ್ನು ನಾವು ಕಡಿಮೆ ಮಾಡಬೇಕು,ನಾವು ಕೊಟ್ಟರೆ ಮಾತ್ರ ಅವರು ತೆಗೆದುಕೊಳ್ಳುವುದು ಆದ್ದರಿಂದ ಇದು ಎರಡೂ ನಿಲ್ಲುವಲ್ಲಿ ನಾವು ಪ್ರಯತ್ನ ಪಡೋಣ ಎಂದು ಹೇಳಿದರು. ನಿವೃತ್ತ ಶಿಕ್ಷಕ, ಒಕ್ಕಲಿಗ ಗೌಡ ಸಂಘದ ಮಾಜಿ ಅಧ್ಯಕ್ಷ ನಾಗಪ್ಪ ಗೌಡ ಬೊಮ್ಮೆಟ್ಟಿ ಮಾತನಾಡಿ, ಲಂಚ ಭ್ರಷ್ಟಾಚಾರ ಬಹಿಷ್ಕರಿಸುವ ಒಂದು ಒಳ್ಳೆಯ ಕಾರ್ಯಕ್ರಮವನ್ನು ಸುದ್ದಿ ಜನಾಂದೋಲನ ಹಮ್ಮಿಕೊಂಡಿರುವುದು ಶ್ಲಾಘನೀಯ. ಲಂಚ ತೆಗೆದುಕೊಳ್ಳುವುದು ಒಂದು ಶಾಪ. ಇದೊಂದು ಶಾಪದ ಹಣವಾಗಿದೆ. ಲಂಚ ಎನ್ನುವುದು ಸರಕಾರಿ ಕಛೇರಿಗೆ ಹಿಡಿದ ಬಂದನಿಕೆ ಆಗಿದೆ. ಲಂಚ ಮುಕ್ತ ಗ್ರಾಮ ನಮ್ಮದಾಗಬೇಕು ಎನ್ನವುದು ನಮ್ಮೆಲ್ಲರ ಗುರಿಯಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರತಿಜ್ಞಾ ವಿಧಿ ಸ್ವೀಕಾರ ಹಾಗೂ ಘೋಷಣೆ ಕೂಗಲಾಯಿತು.

 

ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರುಗಳಾದ ರಾಮ ಮೇನಾಲ, ಪ್ರದೀಪ್ ರೈ ಕರ್ನೂರು, ಚಂದ್ರಹಾಸ ಈಶ್ವರಮಂಗಲ, ಲಲಿತಾ ಸಾಂತ್ಯ, ನೆ.ಮುಡ್ನೂರು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ದೀಪಕ್ ಕುಮಾರ್ ಮುಂಡ್ಯ, ಕಾವು ಕೃಷಿಪತ್ತಿನ ಸಹಕಾರಿ ಸಂಘದ ನಿರ್ದೇಶಕ ರಾಮಣ್ಣ ನಾಯ್ಕ, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖಾ ಸಹಾಯಕಿ, ಸಂಜೀವಿನಿ ಸದಸ್ಯರು, ಕಂದಾಯ ಇಲಾಖಾ ಸಿಬ್ಬಂದಿ, ಗ್ರಾಪಂ ಸಿಬ್ಬಂದಿಗಳಾದ ಶೀನಪ್ಪ, ಚಂದ್ರಶೇಖರ, ಮಲ್ಲೇಶ್, ಅಬ್ದುಲ್ ರಹೀಮಾನ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here