ಸಂಪ್ಯ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ

0


ಪುತ್ತೂರು:ಆರ್ಯಾಪು ಗ್ರಾಮದ ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಕ್ಷೇತ್ರದ ದೈವಗಳ ನೇಮೋತ್ಸವವು ಜ.೨೬ರಂದು ವಿವಿಧ ವೈಧಿಕ ಹಾಗೂ ತಾಂತ್ರಿಕ ವಿಧಾನಗಳೊಂದಿಗೆ ನೇರವೇರಿತು.


ವೇ.ಮೂ ಸುರೇಶ ನಕ್ಷತ್ರಿತ್ತಾಯರವರ ಉಪಸ್ಥಿತಿಯಲ್ಲಿ ಕುಕ್ಕಾಡಿ ತಂತ್ರಿ ಪ್ರೀತಂ ಪುತ್ತೂರಾಯರವರ ನೇತೃತ್ವದಲ್ಲಿ ನಡೆದ ಉತ್ಸವದಲ್ಲಿ ಬೆಳಿಗ್ಗೆ ದೇವತಾ ಪ್ರಾರ್ಥನೆ, ಗಣಪತಿಹೋಮ, ಶ್ರೀದೇವರಿಗೆ ಕಲಶ ಪೂಜೆ, ಕಲಶಾಭಿಷೇಕ, ನಾಗತಂಬಿಲ, ಶ್ರೀಸತ್ಯನಾರಾಯಣ ಪೂಜೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನೆರವೇರಿತು.

ಕಚೇರಿಗಳ ಉದ್ಘಾಟನೆ:
ದೇವಸ್ಥಾನದಲ್ಲಿ ನೂತನವಾಗಿ ನಿರ್ಮಿಸಲಾದ ಆಡಳಿತ ಕಚೇರಿ, ಕಾರ್ಯಾಲಯ ಹಾಗೂ ಸೇವಾ ಕೌಂಟರ್‌ನ್ನು ಪ್ರತಿಷ್ಠಾ ವಾರ್ಷಿಕೋತ್ಸವದಲ್ಲಿ ಉದ್ಘಾಟನೆಗೊಂಡಿತು. ಆಡಳಿತ ಕಚೇರಿಯನ್ನು ನಗರ ಸಭಾ ಅಧ್ಯಕ್ಷ ಜೀವಂಧರ್ ಜೈನ್, ಕಾರ್ಯಾಲಯವನ್ನು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ ಹಾಗೂ ಸೇವಾ ಕೌಂಟರ್‌ನ್ನು ಕೃಷಿ ಅಧಿಕಾರಿ ಕೃಷ್ಣಪ್ರಸಾದ್ ಭಂಡಾರಿ ಉದ್ಘಾಟಿಸಿದರು.


ಕಾರ್ಯಕ್ರಮದಲ್ಲಿ ಮುಕ್ರಂಪಾಡಿ ಸುಭದ್ರ ಮಹಿಳಾ ಭಜನಾ ಮಂಡಳಿ, ಬೊಳುವಾರು ವೈಷ್ಣವೀ ವೈದೇಹಿ ಭಜನಾ ಮಂಡಳಿ, ಬಲ್ನಾಡು ಶ್ರೀದುರ್ಗಾ ಭಜನಾ ಮಂಡಳಿ, ವಿಶ್ವ ಹಿಂದೂ ಪರಿಷತ್ ಮಹಿಳಾ ಭಜನಾ ಮಂಡಳಿ, ಶ್ರೀರಾಮ ಭಜನಾ ಮಂಡಳಿ ಕೆಮ್ಮಿಂಜೆ, ವಜ್ರಮಾತ ಭಜನಾ ಮಂಡಳಿ ಹಾಗೂ ಉಳ್ಳಾಲ್ತಿ ಭಜನಾ ಮಂಡಳಿ ಪುತ್ತೂರು ಇವರಿಂದ ಭಜನೆ, ಸಂಜೆ ಬಾಳಿಲ ವಿದ್ಯಾಬೋಧಿನಿ ಹಿ.ಪ್ರಾ ಶಾಲಾ ಮಕ್ಕಳ ಭಜನಾ ತಂಡದಿಂದ ಕುಣಿತ ಭಜನೆ ನಡೆಯಿತು. ಎಸ್.ಎಲ್.ವಿ ಬುಕ್ಸ್ ಇಂಡಿಯಾ ಲಿಮಿಟೆಡ್‌ನ ಮ್ಹಾಲಕ ದಿವಾಕರ ದಾಸ್ ನೇರ್ಲಾಜೆಯವರು ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವಕ್ಕೆ ಪುಷ್ಪಾಲಂಕಾರ ಸೇವೆಯನ್ನು ನೀಡಿದ್ದರು.

 

ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ರವೀಂದ್ರ ಶೆಟ್ಟಿ ನುಳಿಯಾಲು, ವೇದನಾಥ ಸುವರ್ಣ, ಹಿಂದು ಜಾಗರಣಾ ವೇದಿಕೆ ಜಿಲ್ಲಾ ಕಾರ್ಯದರ್ಶಿ ಅಜಿತ್ ರೈ ಹೊಸಮನೆ, ಸೋಮಶೇಖರ್ ರೈ, ಕೋಟಿ ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಅಶ್ವಿನಿ ಹೋಟೇಲ್ ಮ್ಹಾಲಕ ಕರುಣಾಕರ ರೈ, ಉತ್ಸವ ಸಮಿತಿ ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ ಇಳಂತಾಜೆ, ಗೌರವಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ, ಸದಸ್ಯರಾದ ಲಕ್ಷ್ಮಣ ಬೈಲಾಡಿ, ಜಯಕುಮಾರ್ ನಾಯರ್, ಸೀತಾರಾಮ ಶೆಟ್ಟಿ ಕಂಬಳತ್ತಡ್ಡ, ವಿನ್ಯಾಸ್ ಯು.ಎಸ್., ಜಗದೀಶ ಎಂ., ಪ್ರೇಮಾ ಶಿವಪ್ಪ ಸಪಲ್ಯ, ಶಶಿಕಲಾ ನಿರಂಜನ ಶೆಟ್ಟಿ, ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಉದಯ ಕುಮಾರ್ ರೈ ಎಸ್., ಜತೆ ಕಾರ್ಯದರ್ಶಿ ಹರಿಣಿ ಪುತ್ತೂರಾಯ, ಉಪಾಧ್ಯಕ್ಷ ಭೀಮಯ್ಯ ಭಟ್, ಗೌರವ ಸಲಹೆಗಾರರಾದ ವಿಜಯ ಬಿ.ಎಸ್., ಶಿವರಾಮ ಆಳ್ವ, ರಮೇಶ್ ರೈ ಮೊಟ್ಟೆತ್ತಡ್ಕ, ಕೆ.ಕೃಷ್ಣಪ್ಪ, ಶೀನಪ್ಪ ನಾಯ್ಕ, ವೇಣುಗೋಪಾಲ ಶೆಟ್ಟಿ ಸಂಪ್ಯ, ರಾಜೇಶ್ ರೈ ಸಂಪ್ಯದಮೂಲೆ, ನಾಗೇಶ್ ಸಂಪ್ಯ, ನಾರಾಯಣ ನಾಕ್ ಪಂಜಳ, ಮುರಳೀಧರ ಆಚಾರ್ಯ ಸಂಪ್ಯ, ನವೀನ್ ಕುಕ್ಕಾಡಿ, ವಸಂತ ಗೌಡ ಕುಕ್ಕಾಡಿ, ಉಮೇಶ್ ಆಚಾರ್ಯ ಕುಕ್ಕಾಡಿ, ರವಿಂದ್ರ ಸಂಪ್ಯ, ಉಮೇಶ್ ಸಂಪ್ಯ, ಸುಧಾಕರ ರೈ ಮೊಟ್ಟೆತ್ತಡ್ಕ, ರವೀಂದ್ರ ಬೈಲಾಡಿ, ರವಿಚಂದ್ರ ಆಚಾರ್ಯ ಸಂಪ್ಯ, ಸುರೇಶ ಪೂಜಾರಿ, ಉಮೇಶ್ ಎಸ್.ಕೆ., ಸೀತಾರಾಮ ಸಂಪ್ಯ, ಉದಯ ಬಲ್ಲಾಳ್, ಐತ್ತಪ್ಪ ರೈ, ಉಮೇಶ್ ರೈ, ಸುಧಾಕರ ಮೊಟ್ಟೆತ್ತಡ್ಕ ಸೇರಿದಂತೆ ಹಲವು ಮಂದಿ ಭಕ್ತಾದಿಗಳು ಪ್ರತಿಷ್ಠಾ ವಾರ್ಷಿಕೋತ್ಸವದಲ್ಲಿ ಭಾಗವಹಿಸಿದ್ದರು.

 


ಸಂಜೆ ನೇಮೋತ್ಸವ:
ಸಂಜೆ ಕ್ಷೇತ್ರದ ದೈವಗಳಾದ ಧೂಮಾವತಿ ಹಾಗೂ ಗುಳಿಗ ದೈಗಳ ಭಂಡಾರ ತೆಗೆದ ಬಳಿಕ ಧಾರ್ಮಿಕ ಸಭಾ ಕಾರ್ಯಕ್ರಮ, ರಾತ್ರಿ ದೇವರಿಗೆ ರಂಗಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪನೆ ನಡೆದ ಬಳಿಕ ಧೂಮಾವತಿ ಹಾಗೂ ಗುಳಿಗ ದೈವಗಳ ನೇಮೋತ್ಸವ ನಡೆಯಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಹಾಗೂ ಉತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here