ಕರ್ನೂರು ನಡುಮನೆ ತರವಾಡಿನ ಪ್ರತಿಷ್ಠಾ ವಾರ್ಷಿಕೋತ್ಸವ , ದೈವಗಳಿಗೆ ತಂಬಿಲ ಸೇವೆ, ನೂತನ ರಸ್ತೆ , ನೀರು ಶುದ್ದೀಕರಣ ಯಂತ್ರಕ್ಕೆ ಚಾಲನೆ, ಸಾಧಕರಿಗೆ ಸನ್ಮಾನ

0

 

ಪುತ್ತೂರು : ನೆಟ್ಟಣಿಗೆ ಮೂಡ್ನರು ಗ್ರಾಮದ ಕರ್ನೂರು ನಡುಮನೆ ತರವಾಡಿನ ದೈವಗಳ ವಾರ್ಷಿಕ ಕಾರ್ಯಕ್ರಮ ತರವಾಡಿನ ಹಿರಿಯರ ಸಮ್ಮುಖದಲ್ಲಿ ಜನವರಿ 25ರಂದು ನಡೆಯಿತು.

 

 

ಬೆಳಗ್ಗೆ ದೇವತಾ ಪ್ರಾರ್ಥನೆ, ಮಹಾಗಣಪತಿ ಹೋಮ, ವೆಂಕಟರಮಣ ಮುಡಿಪು ಸೇವೆ ನಡೆದು ಮಧ್ಯಾಹ್ನ ತರವಾಡಿನ ಅರಾಧ್ಯ ದೈವಗಳಾದ ರಾಜನ್ ದೈವ ಹುಲಿಭೂತ, ಧರ್ಮದೈವ ಜುಮಾಧಿ ,ಕೊರತಿ , ಗುಳಿಗ ದೇವಗಳಿಗೆ ವಾರ್ಷಿಕ ತಂಬಿಲ ಸೇವೆ ನಡೆಯಿತು. ಸೇರಿದಂತಹ ಭಕ್ತರಿಗೆ ಅನ್ನಸಂತರ್ಪಣೆಯೂ ನೆರವೇರಿತು.

ನೂತನ ರಸ್ತೆ, ನೀರು ಶುದ್ದೀಕರಣ ಯಂತ್ರಕ್ಕೆ ಚಾಲನೆ ;
ತರವಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದೆಗೆಟ್ಟು ಸಂಚಾರಿಸಲು ಅಸಾಧ್ಯವಾಗಿತ್ತು. ಈ ರಸ್ತೆಯನ್ನು ತರವಾಡಿನ ವತಿಯಿಂದಲೇ ಕೆಲಸ ನಡೆಸಿ ಸಂಚರಿಸಲು ಯೋಗ್ಯವಾಗುವ ರೀತಿಯಲ್ಲಿ ಕಾಮಗಾರಿ ನಡೆಸಿ ವಾರ್ಷಿಕ ಕಾರ್ಯಕ್ರಮದಂದು ಉದ್ಘಾಟಿಸಲಾಯಿತು. ಇದೇ ಸಂದರ್ಭದಲ್ಲಿ ಕುಡಿಯುವ ನೀರಿನ ಶುದ್ದೀಕರಣಕ್ಕಾಗಿ ತರವಾಡಿನಲ್ಲಿ ನೂತನ ನೀರು ಶುದ್ದೀಕರಣ ಯಂತ್ರವನ್ನು ಗೌರವಾಧ್ಯಕ್ಷ ಶಂಕರ ಆಳ್ವರ ಮುಂದಾಳತ್ವದಲ್ಲಿ ಚಾಲನೆ ನೀಡಲಾಯಿತು.

ತರವಾಡಿನ ಸಾಧಕರಿಗೆ ಸನ್ಮಾನ ;

ನಡುಮನೆ ತರವಾಡಿನ ವಾರ್ಷಿಕ ಕಾರ್ಯಕ್ರಮ ದಲ್ಲಿ ವಿವಿಧ ಕೇತ್ರದಲ್ಲಿ ಸಾಧನೆ ಮಾಡಿರುವ ತರವಾಡಿನ ಸಾಧಕರನ್ನು ಸನ್ಮಾನಿಸಲಾಯಿತು. ನಾಟಿವೈದ್ಯ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿ ಜನ ಮನ್ನಣೆ ಗಳಿಸಿರುವ ನಳಿನ್ ಶೆಟ್ಟಿ, ಮುಂಬಯಿಯಲ್ಲಿ ಹೋಟೆಲ್ ಉದ್ಯಮ ಜೊತೆಗೆ ಹಲವು ಸಂಘಟನೆಗಳ ಮುಂದಾಳತ್ವ ವಹಿಸಿರುವ ತರವಾಡಿನ ಗೌರವಾಧ್ಯಕ್ಷ ಉದ್ಯಮಿ ಶಂಕರ ಆಳ್ವ ಹಾಗೂ ನಡುಮನೆ ತರವಾಡಿನ ಎಲ್ಲ ಕೆಲಸ ಕಾರ್ಯಗಳಿಗೆ ಹಿರಿಯರಾಗಿ ಮಾರ್ಗದರ್ಶಕರಾಗಿರುವ ಹಿತೈಷಿ ಬಂಧು ಗೋಪಾಲ ಕೃಷ್ಣ ಕೊನಿಬೈಲ್ ಬಾಳಿಕೆ ಸೇರಿದಂತೆ ಮೂವರು ಸಾಧಕರಿಗೆ ನಡುಮನೆ ತರವಾಡ್ ವತಿಯಿಂದ ಸನ್ಮಾನಿಸಲಾಯಿತು. ಜೊತೆಗೆ ತರವಾಡ್ ನ ದೈವಗಳ ದೀಪ ಇಡುವ ಮತ್ತು ದೈವದ ಸೇವೆ ಮಾಡುವವರನ್ನು ಶಾಲು ಹೊದಿಸಿ ಗೌರವಿಸಲಾಯಿತು.


ಈ ಸಂದರ್ಭದಲ್ಲಿ ನಡುಮನೆ ತರವಾಡ್ ನ ಯಜಮಾನರಾದ ಶೀನಪ್ಪ ರೈ , ನಾರಯಣ ಶೆಟ್ಟಿ , ರಾಮ ಶೆಟ್ಟಿ ಮಾರ್ಗದರ್ಶನ ನೀಡಿದರು. ಟ್ರಸ್ಟ್ ಅಧ್ಯಕ್ಷ ಬಾಲಕೃಷ್ಣ ಆಳ್ವ ಪ್ರಸ್ತಾವಿಕ ಮಾತುಗಳನ್ನಾಡಿದರು. ಖಜಾಂಚಿ ಸುಭಾಶ್ಚಂದ್ರ ರೈ ಸ್ವಾಗತಿಸಿ. ಕಾರ್ಯದರ್ಶಿ ನಾಗೇಶ್ ಶೆಟ್ಟಿ ವಂದಿಸಿದರು. ಟ್ರಸ್ಟ್ ನ ಉಪಾಧ್ಯಕ್ಷ ಮಧುಸೂದನ್ ರೈ , ಲೀಲಾವತಿ , ವೇದಾವತಿ , ರತ್ನ ಟೀಚರ್, ನವೀನ್ ಮಂಗಳೂರು ರಮೇಶ್ ಶೆಟ್ಟಿ ಮೋಹನ್ ಶೆಟ್ಟಿ, ಕರಿಯಪ್ಪ ಆಳ್ವ , ಸೇರಿದಂತೆ ಕುಟುಂಬದ ಸದಸ್ಯರು ,ಟ್ರಸ್ಟ್‌ ನ ಪದಾಧಿಕಾರಿಗಳು, ಊರಿನ ಸಮಸ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here