ಗಣರಾಜ್ಯೋತ್ಸವ ಪರೇಡ್‌ನಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಸ್ತಬ್ದ ಚಿತ್ರಕ್ಕೆ ಅವಕಾಶ ನಿರಾಕರಣೆ – ಕೇಂದ್ರಸರಕಾರದ ನೀತಿಯನ್ನು ವಿರೋಧಿಸಿ ಕಾಂಗ್ರೆಸ್‌ವತಿಯಿಂದ ಗುರುಗೌರವ ಯಾತ್ರೆ, ಮೆರವಣಿಗೆ

0

ಬ್ರಹ್ಮಶ್ರೀ ನಾರಾಯಣಗುರುಗಳಿಗೆ ಬಿಜೆಪಿ ಸರಕಾರ ಮಾಡಿದ ಅವಮಾನವನ್ನು ಸಹಿಸುವುದಿಲ್ಲ: ಶಕುಂತಳಾ ಶೆಟ್ಟಿ

ಪುತ್ತೂರು: ಇಂದು ದೇಶಾದ್ಯಂತ ೭೩ ನೇ ಗಣರಾಜ್ಯೋತ್ವವನ್ನು ಆಚರಿಸಲಾಗುತ್ತದೆ. ದೇಶದಲ್ಲಿ ಇಂದು ಸಂಭ್ರಮದ ವಾತಾವರಣ ಪ್ರಜಾಪ್ರಭುತ್ವದ ಹಬ್ಬ ನಡೆಯುತ್ತಿದೆ. ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ದೇಶದ ವಿವಿಧ ರಾಜ್ಯಗಳ ಸ್ತಬ್ದ ಚಿತ್ರಗಳನ್ನು ಪ್ರದರ್ಶಿಸಿಸಿ ಆಯಾ ರಾಜ್ಯಗಳ ಸಂಸ್ಕೃತಿಯನ್ನು, ವೀರಪುರುಷರನ್ನು ದೇಶಕ್ಕೆ, ವಿಶ್ವಕ್ಕೆ ಪರಿಚಯಿಸುವ ಕಾರ್ಯಕ್ರಮ ನಡೆಯುತ್ತದೆ. ಈ ಕಾರ್ಯಕ್ರಮಕ್ಕೆ ಕೇರಳ ಸರಕಾರ ವಿಶ್ವಗುರು ಬ್ರಹ್ಮಶ್ರೀ ನಾರಾಯಣಗುರುಗಳ ಸ್ತಬ್ದ ಚಿತ್ರವನ್ನು ಕಳುಹಿಸಿತ್ತು ಆದರೆ ಅದನ್ನು ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ನಿರಾಕರಿಸುವ ಮೂಲಕ ಹಿಂದುಳಿದ ವರ್ಗಕ್ಕೆ ಮತ್ತು ನಾರಾಯಣ ಗುರುಗಳಿಗೆ ಅವಮಾನ ಮಾಡಿದ್ದು ಇದನ್ನು ಕಾಂಗ್ರೆಸ್ ಪಕ್ಷ ಸಹಿಸುವುದಿಲ್ಲ ಎಂದು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು.

ಅವರು ಪುತ್ತೂರು ಹಾಗೂ ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ದ ಚಿತ್ರಕ್ಕೆ ಕೇಂದ್ರ ಸರಕಾರ ಅವಕಾಶ ನಿರಾಕರಣೆ ಮಾಡಿರುವುದರ ವಿರುದ್ದ ನಡೆದ ಗುರುಗೌರವ ಯಾತ್ರೆಯನ್ನುದ್ದೇಶಿಸಿ ಮಾತನಾಡಿದರು.

ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಿಂದ ವಾಹನ ಜಾಥಾ ಉದ್ಘಾಟನೆಗೊಂಡು ಪುತ್ತೂರು ಬಸ್ ನಿಲ್ದಾಣದ ಗಾಂಧಿಕಟ್ಟೆಯ ಬಳಿ ಸಭಾ ಕಾರ್ಯಕ್ರಮ ನಡೆಯಿತು. ಗಾಂಧಿಪ್ರತಿಮೆಗೆ ಮಾರ್ಲಾರ್ಪಣೆ ಮಾಡಿದ ಬಳಿಕ ಮಾತನಾಡಿದ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಗಣರಾಜ್ಯೋತ್ಸವದ ಪೆರೇಡ್‌ನಲ್ಲಿ ದೇಶದ ವಿವಿಧ ರಾಜ್ಯಗಳ ಸ್ತಬ್ದ ಚಿತ್ರ ಪ್ರದರ್ಶನ ನಡೆಯುತ್ತದೆ, ಕೇರಳ ಸರಕಾರ ಕಳುಹಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ದ ಚಿತ್ರದ ಪ್ರದರ್ಶನವೂ ನಡೆಯಬೇಕಿತ್ತು. ಯಾವ ಕಾರಣಕ್ಕೆ ಕೇಂದ್ರದ ಬಿಜೆಪಿ ಸರಕರ ನಿರಾಕರಣೆ ಮಾಡಿದೆ ಎಂಬುದು ಗೊತ್ತಾಗುತ್ತಿಲ್ಲ. ಬಿಜೆಪಿ ನಾಯಕರುಗಳು ಘಟನೆಯ ಬಗ್ಗೆ ವ್ಯತಿರಿಕ್ತ ಹೇಳಿಕೆ ನೀಡುತ್ತಿದ್ದಾರೆ. ಮೂರು ವರ್ಷಕ್ಕೊಮ್ಮೆ ಮಾತ್ರ ರಾಜ್ಯಗಳಿಗೆ ಅವಕಾಶ ಎಂದು ರಾಜ್ಯದ ಮಂತ್ರಿ ಸುನಿಲ್‌ಕುಮಾರ್ ಹೇಳುತ್ತಿದ್ದಾರೆ ಇದು ಸುಳ್ಳು. ಕಳೆದ ೧೩ ವರ್ಷಗಳಿಂದ ಕರ್ನಾಟಕದ ಸತಬ್ದ ಚಿತ್ರ ನಿರಂತರವಾಗಿ ಪ್ರದರ್ಶನವಾಗುತ್ತಿದೆ. ಉದ್ದೆಶಪೂರ್ವಕವಾಗಿ ನಾರಾಯಣಗುರುಗಳಿಗೆ ಅವಮಾನ ಮಾಡಿದ್ದಾರೆ. ಒಂದೇ ಜಾತಿ, ಒಂದೇ ಮತ , ಒಂದೇ ದೇವರು ಎಂಬ ತತ್ವವನ್ನು ಪಸರಿಸಿದ್ದ ಅವರನ್ನು ಅರಗಿಸಿಕೊಳ್ಳಲು ಬಿಜೆಪಿಗೆ ಸಾಧ್ಯವಾಗಿಲ್ಲ. ನಮ್ಮ ಪ್ರತಿಭಟನೆಯಲ್ಲಿ ರಾಜಕೀಯ ಉದ್ದೇಶವಿಲ್ಲ. ಗುರುಗಳಿಗೆ ಮಾಡಿದ ಅವಮಾನದ ವಿರುದ್ದ ನಮ್ಮ ಪ್ರತಿಭಟನೆ ನಡೆಯುತ್ತಿದೆ. ಗುರುಗಳಿಗೆ ಮಾಡಿದ ಅವಮಾನ ಅದು ಹಿಂದುಳಿದ ವರ್ಗಕ್ಕೆ ಮಾಡಿರುವ ಅವಮಾನವಾಗಿದೆ ಇದನ್ನು ಕಾಂಗ್ರೆಸ್ ಸಹಿಸುವುದೇ ಇಲ್ಲ. ಕೇಂದ್ರ ಅವಕಾಶ ನಿರಾಕರಣೆ ಮಾಡಿರಬಹುದು ಆದರೆ ಗುರುಗಳ ಸ್ತಬ್ದ ಚಿತ್ರವನ್ನು ಗೌರವಯುತವಾಗಿ ನಾವು ಪುತ್ತೂರಲ್ಲಿ ಪ್ರದರ್ಶನ ಮಾಡಿದ್ದೇವೆ. ಅವರ ತತ್ವ ಸಿದ್ದಾಂತಗಳು ವಿಶ್ವಕ್ಕೆ ಮಾದರಿಎಂದು ಹೇಳಿದರು.

ಬಿಜೆಪಿ ಗುರುಗಳ ಸಿದ್ದಾಂತವನ್ನು ಒಪ್ಪುತ್ತಿಲ್ಲ: ಅಮಲ
ಬಿಜೆಪಿ ನಾರಾಯಣಗುರುಗಳ ತತ್ವ ಸಿದ್ದಾಂತವನ್ನು ಒಪ್ಪುತ್ತಿಲ್ಲ ಅದಕ್ಕೆ ಅವರ ಸ್ತಬ್ದ ಚಿತ್ರ ಪ್ರದರ್ಶನಕ್ಕೆ ಅವಕಾಶ ನಿರಕರಣೆ ಮಾಡಲಾಗಿದೆ. ಕೋಮು ರಾಜಕೀಯಕ್ಕೆ ಗೌರವ ಕೊಡುವ ಬಿಜೆಪಿಗೆ ಮಾನವೀಯ ಮೌಲ್ಯದ ಗುರುಗಳ ಸಿದ್ದಾಂತವನ್ನು ಬಿಜೆಪಿ ಒಪ್ಪಲು ಸಿದ್ದವಿಲ್ಲ ಎಂಬುದು ಈಗ ಗೊತ್ತಾಗಿದೆ. ಕೇಂದ್ರದ ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್ ಎಂಬುದು ಬರೇ ನಾಟಕವಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಹಲವರನ್ನು ತುಳಿಯುತ್ತಲೇ ಬಂದಿದೆ. ನಾನು ಮಾಡಿದ್ದೇ ಸರಿ ಎಂಬ ಅಹಂ ಅವರಲ್ಲಿದೆ. ಈ ಬರಿ ಗುರುಗಳನ್ನು ತುಳಿಯುವ ಕೆಲಸವನ್ನು ಮಾಡಿದೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಮಂದಿಯನ್ನು ತುಳಿಯುವ ಕೆಲಸವನ್ನು ಬಿಜೆಪಿ ಖಂಡಿತಾ ಮಾಡಲಿದೆ. ಯಾರನ್ನು ತುಳಿದರೂ ಏನೂ ಆಗಲ್ಲ ಎಂಬ ಧೈರ್ಯ ಬಿಜೆಪಿಗೆ ಬಂದೊದಗಿದೆ. ಬಿಜೆಪಿ ಪಕ್ಷಕ್ಕಾಗಿ ನೆತ್ತರು ಹರಿಸಿದವರು, ಪ್ರಾಣ ತ್ಯಾಗ ಮಾಡಿದ ಹಿಂದುಳಿದ ವರ್ಗದವರಿಗೆ ಸೇರಿದ ಮಹಾನ್ ನಾಯಕರನ್ನು ತುಳಿಯುವ ಕೆಲಸವನ್ನು ಬಿಜೆಪಿ ಸರಕಾರ ಮಾಡಿದೆ. ಹಿಂದುಳಿದ ವರ್ಗದ ಆರಾಧ್ಯ ದೇವವಾಗ ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಅವರೇ ಕಟ್ಟಿ ಬೆಳೆಸಿದ ಪಕ್ಷದಿಂದ ಅವಮಾನ ಮಾಡಿರುವುದು ಅಕ್ಷಮ್ಯವಾಗಿದೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮಲರಾಮಚಂದ್ರ ಹೇಳಿದರು.

ಉತ್ತರ ಭಾರತದಲ್ಲಿ ದಲಿತರ ಮೇಲೆ ದೌರ್ಜನ್ಯ, ಅತ್ಯಾಚಾರ ನಡೆಸುವ ಮೂಲಕ ಅವರನ್ನು ಧಮನಿಸುವ ಕೆಲಸವನ್ನು ಮಾಡಿದ ಬಿಜೆಪಿ ಇದೀಗ ನಾರಾಯಣ ಗುರುಗಳನ್ನು ತುಳಿಯುವ ಮೂಲಕ ಹಿಂದುಳಿದ ವರ್ಗದವರನ್ನು ಅಪಮಾನಿಸುವ ಕೆಲಸ ಮಾಡಿದೆ. ನಾರಾಯಣ ಗುರುಗಳು ದೇವರಿಗೆ ಸಮಾನರಾಗಿದ್ದಾರೆ. ಇವರ ಸಂದೇಶ , ತತ್ವ ಸಿದ್ದಾಂತ ಬಿಜೆಪಿಗೆ ಬೇಡವಾಗಿದೆ. ಓಟು ಪಡೆಯಲು ಬಿಜೆಪಿಗೆ ಕೋಮುಗಲಭೆ ಮಾಡಿದರೆ ಸಾಕಾಗ್ತದೆ ಎಂಬ ಬಲವಾದ ನಂಬಿಕೆ ಇದೆ. ಗುರುಗಳಿಗೆ ಮಾಡಿರುವ ಅನ್ಯಾಯದ ವಿರುದ್ದ ನಿರಂತರ ಹೋರಾಟ ಮುಂದುವರೆಯಲಿದೆ ಎಂದು ಹೇಳಿದರು.

ಫ್ಯಾಸಿಸ್ಟ್ ಶಕ್ತಿಗಳ ವಿರುದ್ದ ಹೋರಾಡಿದ್ದ ಗುರುಗಳು: ಬಡಗನ್ನೂರು
ಬ್ರಹ್ಮಶ್ರೀ ನಾರಾಯಣಗುರುಗಳು ಫ್ಯಾಸಿಸ್ಟ್ ಶಕ್ತಿಗಳ ವಿರುದ್ದ ಹೋರಾಡಿದವರು. ಮೇಲ್ವರ್ಗದವರಿಗೆ ಮಾತ್ರ ದೇವಸ್ಥಾನಕ್ಕೆ ಪ್ರವೇಶ ಇದ್ದ ಕಾಲದಲ್ಲಿ ಸ್ವತ ದೇವಸ್ಥಾನವನ್ನು ನಿರ್ಮಿಸಿ ಅದರಲ್ಲಿ ಹಿಂದುಳಿದ ವರ್ಗಕ್ಕೆ ಪುಜೆ ಸಲ್ಲಿಸಲು ಅವಕಾಶ ನೀಡಿದವರು, ದೇಶದಲ್ಲಿದ್ದ ಅಸ್ಪೃಶ್ಯತೆಯನ್ನು ಹೋಗಲಾಡಿಸಿದವರು, ಒಬ್ಬ ಧೀಮಂತ ಸಮಾಜ ಪರಿವರ್ತಕರಾಗಿ ವಿಶ್ವದಲ್ಲೆಡೆ ತನ್ನ ಮಾನವೀಯ ಮೌಲ್ಯಗಳನ್ನು ಭಿತ್ತರಿಸಿ ವಿಶ್ವಗುರುವಾಗಿದ್ದವರು ಅಂಥಹ ಮಹಾನುಬಾವರಿಗೆ ಕೇಂದ್ರ ಸರಕಾರ ಅವಮಾನ ಮಾಡಿರುವುದು ಖಂಡಿನೀಯ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಮಹಮ್ಮದ್ ಬಡಗನ್ನೂರು ಹೇಳಿದರು. ಬಿಜೆಪಿ ಹಲವರನ್ನು ತುಳಿಯುತ್ತಾ ಬಂದಿದೆ. ಇವತ್ತು ಗುರುಗಳನ್ನು ತುಳಿದಿದ್ದಾರೆ. ಮುಂದಿನ ದಿನಗಳಲ್ಲಿ ಗಾಂಧಿಯನ್ನು ಕೊಂದ ಗೋಡ್ಸಯ ಸ್ತಬ್ದ ಚಿತ್ರಕ್ಕೆ ಕೇಂದ್ರ ಅವಕಾಶ ನೀಡಿದರೆ ಅದರಲ್ಲಿ ಅಚ್ಚರಿಯಿಲ್ಲ. ನಾರಾಯಣ ಗುರುಗಳಿಗೆ ಮಾಡಿರುವ ಅವಮಾನವನ್ನು ಖಂಡಿಸಿ ನಾವು ಪ್ರತಿಭಟನೆಯನ್ನು ಮಾಡುವ ಮೂಲಕ ಕೇಂದ್ರ ಸರಕಾರವನ್ನು ಎಚ್ಚರಿಸುವ ಕೆಲಸವನ್ನು ಮಾಡಿದ್ದೇವೆ ಎಂದು ಹೇಳಿದರು.

ಶಾಂತಿಯುವ ಕ್ರಾಂತಿ ಮಾಡಿದವರು ನಾರಾಯಣ ಗುರುಗಳು: ಡಾ. ರಾಜಾರಾಂ ಕೆ ಬಿ
ಅಜ್ಞಾನ ,ಅಸಮಾನತೆ, ಅಸ್ಪೃಶ್ಯತೆಯ ವಿರುದ್ದ ಶಾಂತಿಯುತ ಕ್ರಾಂತಿ ಮಾಡಿದವರು , ಹಿಂದುಳಿದ ಸಮಾಜಕ್ಕೆ ಸ್ವಾಭಿಮಾನದ ಬದುಕು ಕಲ್ಪಿಸಿದವರು ಬ್ರಹ್ಮಶ್ರೀ ನಾರಾಯಣಗುರುಗಳಾಗಿದ್ದರು. ಅವರ ತತ್ವ , ಸಿದ್ದಾಂತ ಇಂದು ಜಗತ್ತಿಗೆ ಮಾದರಿಯಾಗಿದೆ. ವಿಶ್ವ ಗುರುವಾಗಿ ಗುರುತಿಸಿಕೊಂಡಿರುವ ಹಿಂದುಳಿದ ವರ್ಗದವರ ಆರಾಧ್ಯ ಧೈವವಾದ ನಾರಾಯಣ ಗುರುಗಳಿಗೆ ಕೇಂದ್ರ ಸರಕಾರ ಅವಮಾನ ಮಾಡಿದೆ ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಉಪ್ಪಿನಂಗಡಿ- ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಂ ಕೆ ಬಿ ಹೇಳಿದರು.

ಗುರುಗಳ ಸ್ತಬ್ದ ಚಿತ್ರವನ್ನು ನಿರಾಕರಿಸಿದರೆ ಅವರ ತತ್ವ ಸಿದ್ದಾಂತವನ್ನು ನಿರಾಕರಿಸಿದ ಹಾಗೆ, ಗುರುಗಳು ಎಂದಿಗೂ ಸಂಘರ್ಷದ ಹಾದಿ ಹಿಡಿದವರಲ್ಲ. ತುಳಿತಕ್ಕೊಳಗಾದ ಹಿಂದುಳಿದ ವರ್ಗವನ್ನು ಸಮಾಜದ ಮೇಲ್ಪಂಕ್ತಿಗೆ ತಂದು ಅವರಿಗೆ ಸ್ವಾಭಿಮಾನದ , ಸಮಾನತೆಯ ಸಿದ್ದಾಂತದಲ್ಲಿ ಮುನ್ನಡೆಸುವಂತೆ ಪ್ರೇರೇಪಿಸಿ ಆ ಸಮುದಾಯವನ್ನು ಸಬಲೀಕರಣ ಮಡಿದ ಮಹಾನ್ ಮೇಧಾವಿಯಾಗಿದ್ದವರು ಗುರುಗಳು. ಅವರ ಸಿದ್ದಾಂತವನ್ನು ಜಗತ್ತೇ ಒಪ್ಪಿಕೊಂಡರೆ ಕೇಂದ್ರ ಸರಕಾರ ಅವರು ಏನೂ ಅಲ್ಲ ಎಂಬಂತೆ ಬಿಂಬಿಸಿ ಸಮಾಜಕ್ಕೆ ಗುರುಗಳ ಬಗ್ಗೆ ತಪ್ಪು ಸಂದೇಶವನ್ನು ನೀಡಿದಂತಾಗಿದೆ. ಈ ಅವಮಾನವನ್ನು ನಾವು ಸಹಿಸಲು ಸಾಧ್ಯವಿಲ್ಲ. ಇಂದು ಅವರ ಭಾವ ಚಿತ್ರವನ್ನು ಮೆರವಣಿಗೆ ಮೂಲಕ ಸಾಗಿ ಗುರುಗಳು ಯಾರು ? ಏನು ಎಂಬುದನ್ನು ಜನತೆಗೆ ತಿಳಿಸುವ ಕೆಲಸವನ್ನು ಮಾಡಿದ್ದೇವೆ ಎಂದು ಹೇಳಿದರು.

ದುರುದ್ದೇಶದಿಂದ ಕೇಂದ್ರ ಅವಮಾನ ಮಾಡಿದೆ: ಎಂ ಬಿ ವಿಶ್ವನಾಥ
ಬ್ರಹ್ಮಶ್ರೀ ನಾರಾಯಣ ಗುರುಗಳ ಸಿದ್ದಾಂತದ ಮೇಲೆ ನಂಬಿಕೆ ಇಲ್ಲದ ಬಿಜೆಪಿ ಅವರನ್ನು ದುರುದ್ದೇಶಪೂರ್ವಕವಾಗಿ ಅವಮಾನಿಸುವ ಕೆಲಸವನ್ನು ಮಾಡಿದೆ. ಕೇರಳದಲ್ಲಿ ಬಿಜೆಪಿ ಸರಕಾರವಿಲ್ಲ ಎಂಬ ಕಾರಣಕ್ಕೆ ನಾರಾಯಣ ಗುರುಗಳಿಗೆ ಅವಮಾನ ಮಾಡಿದೆ. ದೇಶದಲ್ಲಿ ಎಲ್ಲೆಲ್ಲೆ ಬಿಜೆಪಿ ಅಧಿಕಾರದಲ್ಲಿಲ್ಲವೋ ಆ ರಾಜ್ಯಗಳ ಸ್ತಬ್ದ ಚಿತ್ರಕ್ಕೆ ಬ್ರೇಕ್ ಹಾಕುವ ಮೂಲಕ ಗಣರಾಜ್ಯೋತ್ಸವದಂತ ಮಹತ್ತರವಾದ ಕಾರ್ಯಕ್ರಮದಲ್ಲಿ ಬಿಜೆಪಿ ಸರಕಾರ ರಾಜಕೀಯ ಮಾಡುತ್ತಿರುವುದು ಹೇಸಿಗೆಯ ವಿಚಾರವಾಗಿದ್ದು ಇದನ್ನು ಜನ ಒಪ್ಪಲು ಸಿದ್ದರಿಲ್ಲ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ ಹೇಳಿದರು.

ಶೋಷಿತರ ಸ್ಥಿತಿ ಶೋಚನೀಯವಾಗಿದ್ದ ಕಾಲದಲ್ಲಿ ಸೂರ್ಯನಂತೆ ಉದಯಿಸಿಬಂದ ನಾರಾಯಣ ಗುರುಗಳು ಸಮಾಜಕ್ಕೆ ಬೆಳಕಾದರು. ಯಾರು ಸಾಮಾಜಿಕವಾಗಿ, ಆರ್ಥಕವಾಗಿ, ಶೈಕ್ಷಣಿಕವಾಗಿ ತುಳಿಯಲ್ಪಟ್ಟಿದ್ದರೋ ಅಂಥವರನ್ನು ಮೇಲಕ್ಕೆ ತಂದವರು. ಆದರೆ ಕೇಂದ್ರ ಸರಕಾರಕ್ಕೆ ಹಿಂದುಳಿದ ವರ್ಗದ ನಾಯಕರು ಬೇಡ, ಅವರ ಆರಾಧ್ಯ ದೇವರು ಬೇಡ, ಪಕ್ಷ ಕಟ್ಟಲು ಹಿಂದುಳಿದ ಯುವಕರು ಮಾತ್ರ ಬೇಕಾಗಿದೆ. ಜನ ಇದನ್ನು ಅರ್ಥ ಮಾಡಿಕೊಳ್ಳಬೇಕು. ಇವತ್ತು ನಾರಾಯಣ ಗುರುಗಳನ್ನು ತುಳಿದಿದ್ದಾರೆ ನಾಳೆ ಇನ್ನೊಬ್ಬ ನಾಯಕರನ್ನು ತುಳಿಯುತ್ತಾರೆ ಎಂಬುದು ನಿಶ್ಚಿತ. ದೇಶದಲ್ಲಿ ಸಮಾನತೆ ಮತ್ತು ಬಡವರ , ಹಿಂದುಳಿದ ವಗಧವರ ಸಮಾನತೆಯ ಬದುಕು ಬಿಜೆಪಿಗೆ ಬೇಕಾಗಿಲ್ಲ ಎಂಬುದು ನಾರಾಯಣ ಗುರುಗಳ ವಿಚಾರದಲ್ಲಿ ಬಹಿರಂಗವಾಗಿದೆ. ನಾವು ರಾಜಕೀಯ ಉದ್ದೇಶಕ್ಕಾಗಿ ಪ್ರತಿಭಟನೆ ಮಾಡಿಲ್ಲ, ಒಬ್ಬ ಮಹಾನ್ ವ್ಯಕ್ತಿಯ ತತ್ವ ಸಿದ್ದಾಂತವನ್ನು ಆಡಳಿತ ನಡೆಸುವ ಸರಕಾರ ಅವಮಾನ ಮಾಡಿದರೆ ಅದನ್ನು ಸಹಿಸಿ ಸುಮ್ಮನೆ ಕೂರಲು ನಮಗೆ ಸಾಧ್ಯವಿಲ್ಲ ಎಂದು ಹೇಳಿದರು.

ಗುರುನಾರಾಯಣ ಸ್ವಾಮಿ ಮಂದಿರದಲ್ಲಿ ಪ್ರಾರ್ಥನೆ
ಪ್ರತಿಭಟನಾ ಜಾಥಾ ಬ್ರಹ್ಮಶ್ರೀ ನಾರಾಯಣಗುರು ಮಂದಿರದ ಬಳಿ ಸಮಾಪ್ತಗೊಂಡಿತು. ಬಳಿಕ ಎಲ್ಲರೂ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಮಂದಿರದಲ್ಲಿ ಜಾಥಾ ಪ್ರಮುಖರನ್ನು ಗೌರವಿಸಲಾಯಿತು. ಗಾಂಧಿಕಟ್ಟೆಗೆ ಆಗಮಿಸಿದ ಪ್ರಮುಖರು ಗಾಂಧಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.

ಕಾರ್ಯಕ್ರಮದಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಎಚ್ ಮಹಮ್ಮದಾಲಿ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಮಾಜಿ ಅಧ್ಯಕ್ಷ ಪ್ರವೀಣ್‌ಚಂದ್ರ ಆಳ್ವ, ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಬಲ್ನಾಡು ಚಂದಪ್ಪ ಪೂಜಾರಿ,ಇಂಠಕ್ ಅಧ್ಯಕ್ಷ ಜಯಪ್ರಕಾಶ್ ಬದಿನಾರು, ಸೇಸಪ್ಪ ನೆಕ್ಕಿಲು, ವೇದನಾಥ ಸುವರ್ಣ, ವಿಜಯಕುಮಾರ್ ಸೊರಕೆ, ಪ್ರಧಾನ ಕಾರ್ಯದರ್ಶಿ ಪೂರ್ಣೇಶ್ ಭಂಡಾರಿ, ಪ್ರಸಾದ್ ಕೌಶಲ್ ಶೆಟ್ಟಿ, ಎ ಕೆ ಜಯರಾಮ ರೈ,ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಮುರಳೀಧರ್ ಕೆಮ್ಮಾರ, ಒಳಮೊಗ್ರು ವಲಯ ಅಧ್ಯಕ್ಷ ಅಶೋಕ ಪೂಜಾರಿ, ಬಾಬು ರೈ ಪಾಣಾಜೆ, ಬಾಲಕೃಷ್ಣ ಕೆಮ್ಮಾರ, ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಶಾರದಾ ಅರಸ್, ಬ್ಲಾಕ್ ಉಪಾಧ್ಯಕ್ಷ ಆಲಿಕುಂಞಿ ಕೊರಿಂಗಿಲ, ಮನಮೋಹನ್ ರೈ , ಅಬ್ದುಲ್ ರಹಿಮಾನ್ ಡಿ ಕೆ, ಯಾಕೂಬ್ ಮುಲಾರ್, ಅಲ್ಪಸಂಖ್ಯಾತ ಘಟಕದ ಬ್ಲಾಕ್ ಅಧ್ಯಕ್ಷ ಶಕೂರ್ ಹಾಜಿ, ಮಹಿಳಾ ಕಾಂಗ್ರೆಸ್ ರಾಜ್ಯ ಕಾಯದರ್ಶಿ ಸಾಹಿರಾಬಾನು, ಬ್ಲಾಕ್ ಕಾರ್ಯದರ್ಶಿ ಹಬೀಬ್ ತಿಂಗಳಾಡಿ, ಹರೀಶ್ ನಿಡ್ಪಳ್ಳಿ ಹಿಂದುಳಿದ ವರ್ಗ ಬ್ಲಾಕ್ ಅಧ್ಯಕ್ಷರು, ಜಗನ್ಮೋಹನ್ ರೈ ಪಾಣಾಜೆ, ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಜಯಂತಿ ಬಲ್ನಾಡು, ಒಳಮೊಗ್ರು ಗ್ರಾಪಂ ಸದಸ್ಯರಾದ ಚಿತ್ರಾ ಬಿ ಸಿ, ಜಾನ್ ಸಿರಿಲ್ ಕಚೇರಿ ಕಾರ್ಯದರ್ಶಿ, ಬ್ಲಾಕ್ ಎಸ್ ಸಿ ಘಟಕದ ಅಧ್ಯಕ್ಷ ಕೇಶವ ಪಡೀಲ್, ಬ್ಲಾಕ್ ಉಪಾಧ್ಯಕ್ಷ ಇಬ್ರಾಹಿಂ ಮೈರೋಲು, ಬ್ಲಾಕ್ ಎಸ್ ಟಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ್, ಹನೀಫ್ ಮಾಡಾವು, ಅಸಂಘಟಿತ ಕಾರ್ಮಿಕ ಘಟಕದ ಅಧ್ಯಕ್ಷ ಮೆಲ್ವಿನ್ ಮೊಂತೆರೋ, ಬ್ಲಾಕ್ ಉಪಾಧ್ಯಕ್ಷ ಮೌರಿಸ್ ಮಸ್ಕರೇನಸ್, , ಸನಮ್, ಬ್ಲಾಕ್ ಕಾರ್ಯದರ್ಶಿ ಪವನ್ ದೊಡ್ಡಮನೆ, ನರಿಮೊಗರು ವಲಯ ಅಧ್ಯಕ್ಷ ಪ್ರಕಾಶ್, ರಾಮಚಂದ್ರ ಸೊರಕೆ, ರೋಶನ್ ರೈ ಬನ್ನೂರು, ಸನತ್ ಕುರಿಯ, ಶರೂನ್ ಸಿಕ್ವೆರಾ, ಶಿವರಾಂ ಆಳ್ವ, ಸುಪ್ರಿತ್ ಕಣ್ಣಾರಾಯ ಮುಂಡೂರು, ರಾಕೇಶ್ ರೈ ಕುದ್ಕಾಡಿ,ರಮನಾಥ್ ವಿಟ್ಲ, ಅಬ್ದುಲ್ ರಹಿಮಾನ್ ಯುನಿಕ್, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯರುಗಳಾದ ಡೀಕಯ್ಯ ಸುರುಳಿಮುಲೆ, ಲತಾವೇಣಿ, ಪದ್ಮಿನಿಸೇರಾಜೆ, ಅಶ್ರಫ್ ವಿ ಎ ,ಹಸೈನಾರ್ ನೆಲ್ಲಿಗುಡ್ಡೆ, ಮೋಹನ್ ಗುರ್ಜಿನಡ್ಕ, ಕಿಸಾನ್ ಘಟಕ ಅಧ್ಯಕ್ಷ ಎಲ್ಯಣ್ಣ ಪೂಜಾರಿ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕರೀಂ ಕುದ್ದುಪದವು, ಜಯರಾಂ ಬಲ್ಲಾಳ್, ಸಿದ್ದಿಕ್ ಪೆರುವಾಯಿ, ನೆಫೀಸಾ ಪೆರುವಾಯಿ, ಬಾಲಕೃಷ್ಣ ಪೂಜಾರಿ ಪೆರುವಾಯಿ, ಬಾಲಕೃಷ್ಣಪೂಜಾರಿ ಪುಣಚ, ಅನಿಲ್ ಅಮೀನ್ ಪುಣಚ, ಅಬ್ದುಲ್ ರಹಿಮಾನ್ ಕುರ್ಮಲ, ಅಶ್ರಫ್ ಬಸ್ತಿಕಾರ್ ಉಪ್ಪಿನಂಗಡಿ, ಮಿತ್ರದಾಸ್ ರೈ ಪೆರ್ನೆ, ರವೀಂದ್ರ ಗೌಡ ಹಿರೆಬಂಡಾಡಿ, ಸತೀಶ್ ಶೆಟ್ಟಿ ಹಿರೆಬಂಡಾಡಿ, ಗೀತಾ ದಾಸರಮೂಲೆ, ಸವಿತಾ ಹಿರೆಬಂಡಾಡಿ, ಭವಾನಿ ಹಿರೆಬಂಡಾಡಿ, ಜಗನ್ನಾಥ ಶೆಟ್ಟಿ ಕೋಡಿಂಬಾಡಿ, ನಝೀರ್ ಮಠ ಉಪ್ಪಿನಂಗಡಿ, ಇಬ್ರಾಹಿಂ ಪುಳಿತ್ತಡಿ, ಆದಂ ಮಠ, ಅಬ್ದುಲ್ ಶಾಫಿ ಪೆರ್ನೆ, ತನಿಯಪ್ಪ ಪೂಜಾರಿ ಪೆರ್ನೆ, ಮಿತ್ರದಾಸ ರೈ ಪೆರ್ನೆ, ಮಾಜಿ ಜಿಪಂ ಅಧ್ಯಕ್ಷ ಸೋಮನಾಥ ಉಪ್ಪಿನಂಗಡಿ,ಉಮೇಶ್ ಉಪ್ಪಿನಂಗಡಿ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here