ಸುಬ್ರಹ್ಮಣ್ಯ: ಉಚಿತ ವೈದ್ಯಕೀಯ ಶಿಬಿರ

0

 

ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ವತಿಯಿಂದ ಸುಬ್ರಹ್ಮಣ್ಯದ ವಾಲ್ಮೀಕಿ ವಸತಿ ಶಾಲೆಯಲ್ಲಿ ಉಚಿತ ವೈದ್ಯಕೀಯ ಶಿಬಿರ ಸೆ.16ರಂದು ನಡೆಯಿತು .


ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ। ತ್ರಿಮೂರ್ತಿ ಅವರು ರೋಗ ಬರುವ ಮೊದಲು ಮುಂಜಾಗ್ರತಾ ಕ್ರಮ ವಹಿಸುವುದು ಅತ್ಯವಶ್ಯ ಹಾಗೂ ಎಳವೆಯಲ್ಲಿಯೇ ಆರೋಗ್ಯ ತಪಾಸಣೆ ಮಾಡುವುದು ತುಂಬಾ ಒಳ್ಳೆಯದು .ಮಕ್ಕಳಲ್ಲಿರುವ ನ್ಯೂನ್ಯತೆಗಳನ್ನು ಸರಿಪಡಿಸಲು ಇದು ಸಕಾಲ ಎಂದು ನುಡಿದರು .ಸಭಾಧ್ಯಕ್ಷತೆ ವಹಿಸಿ ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರೊ। ಕೆ .ಆರ್. ಶೆಟ್ಟಿಗಾರ್ ವಹಿಸಿದ್ದರು. ಕಡಬದ ಕೃಪಾ ಡೆಂಟಲ್ ಕ್ಲಿನಿಕ್ ನ ಡಾ ಸಿದ್ಧಲಿಂಗ ಹಾಗೂ ಸುಬ್ರಹ್ಮಣ್ಯ ಸದಾನಂದ ಆಸ್ಪತ್ರೆಯ ದಂತ ವೈದ್ಯಾಧಿಕಾರಿ ಡಾ।ಚರಣ್ ಶೆಟ್ಟಿ ಅವರು ದಂತ ಸುರಕ್ಷತೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು . ವೇದಿಕೆಯಲ್ಲಿ ವಾಲ್ಮೀಕಿ ವಸತಿ ಶಾಲೆಯ ಮುಖ್ಯೋಪಾಧ್ಯಾಯ ಕೃಷ್ಣಪ್ಪ ಗೌಡ ಹಾಗೂ ಸುಳ್ಯ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರವಿಕುಮಾರ್ ಉಪಸ್ಥಿತರಿದ್ದರು .ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ಬಿನ ಕಾರ್ಯದರ್ಶಿ ಸತೀಶ್ ಕೂಜುಗೋಡು ಸ್ವಾಗತಿಸಿ ಕೋಶಾಧಿಕಾರಿ ರಾಮಚಂದ್ರ ಗೌಡ ಪಳಂಗಾಯ ವಂದಿಸಿದರು .ಲ। ವಿಮಲಾ ರಂಗಯ್ಯ ಕಾರ್ಯಕ್ರಮ ನಿರೂಪಿಸಿದರು .ಉದ್ಘಾಟನೆ ನಂತರ ವಸತಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ದಂತ ತಪಾಸಣೆ ಹಾಗೂ ಆರೋಗ್ಯ ತಪಾಸಣೆಯನ್ನು ನೆರವೇರಿಸಲಾಯಿತು .

LEAVE A REPLY

Please enter your comment!
Please enter your name here