ಉಪ್ಪಿನಂಗಡಿ ಲಾಡ್ಜ್‌ ನಲ್ಲಿ ನೇಣು ಬಿಗಿದು ಆತ್ಮಹತ್ಯೆ

0

ಉಪ್ಪಿನಂಗಡಿ: ಇಲ್ಲಿನ ಲಾಡ್ಜ್‌ ವೊಂದರ ಕೊಠಡಿಯಲ್ಲಿ ವ್ಯಕ್ತಿಯೋರ್ವ ನೇಣು ಬಿಗಿದು ಆತ್ಮತ್ಯೆ  ಮಾಡಿಕೊಂಡಿರುವ ಘಟನೆ ಬಗ್ಗೆ ವರದಿಯಾಗಿದೆ. ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ ವಿಟ್ಲ ಮಾಡ್ನೂರು ನಿವಾಸಿ ಮಹಮ್ಮದ್‌ ಶರೀಫ್(37‌ ವ) ಎಂಬವರಾಗಿರುತ್ತಾರೆ. ಇವರು ಮಂಗಳವಾರ ಬೆಳಿಗ್ಗೆ11.30ಕ್ಕೆ ರೂಮ್‌ ಪಡೆದಿದ್ದು ಜ.26ರಂದು ಮಧ್ಯಾಹ್ನ ತನಕ ರೂಂ ಖಾಲಿ ಮಾಡದಿರವುದರಿಂದ ಈ ಬಗ್ಗೆ ಹೋಟೆಲ್‌ ಮ್ಯಾನೇಜರ್‌ ಪೊಲೀಸರಿಗೆ ಮಾಹಿತಿ ನೀಡಿದರು. ಬಾಗಿಲು ತೆರೆದಾಗ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

LEAVE A REPLY

Please enter your comment!
Please enter your name here