ದೇವಚಳ್ಳ ಶಾಲೆಯಲ್ಲಿ ಪೋಷಣ್ ಅಭಿಯಾನ ಕಾರ್ಯಕ್ರಮ

0

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದೇವಚಳ್ಳ ಇಲ್ಲಿ ದಿನಾಂಕ ಸೆ.16 ರಂದು ಪೋಷಣ್ ಅಭಿಯಾನ್ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳು ತರಕಾರಿ, ಹಣ್ಣುಗಳು, ಧಾನ್ಯಗಳು, ಸೊಪ್ಪು ತರಕಾರಿಗಳು, ಸಿರಿಧಾನ್ಯಗಳು ಮುಂತಾದುವುಗಳನ್ನು ತಂದಿದ್ದರು. ನಂತರ ಶಿಕ್ಷಕರ ನೆರವಿನಿಂದ ಅವುಗಳನ್ನು ಪ್ರೊಟೀನ್, ಕಾರ್ಬೋಹೈಡ್ರೇಟ್, ಲಿಪಿಡ್ಗಳು, ಹಾಗೂ ಖನಿಜ ಮತ್ತು ಲವಣಾಂಶಗಳೆಂದು ತರಕಾರಿಗಳನ್ನು ವಿಂಗಡಿಸಿದರು. ನಂತರ ಸಹ ಶಿಕ್ಷಕಿಯಾದ ಶ್ರೀಮತಿ ನಯನ ಕೆ ವಿದ್ಯಾರ್ಥಿಗಳಿಗೆ ಸಂತುಲಿತ ಆಹಾರ ಪ್ರೊಟೀನ್, ಕಾರ್ಬೋಹೈಡ್ರೇಟ್, ಲಿಪಿಡಗಳು ಹಾಗೂ ಖನಿಜ ಮತ್ತು ಲವಣಾಂಶಗಳ ಅವಶ್ಯಕತೆಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯಗುರುಗಳಾದ ಶ್ರೀಧರ ಗೌಡ ಕೆ ಹಾಗೂ ಎಲ್ಲಾ ಶಿಕ್ಷಕರು ಹಾಗೂ ಅಕ್ಷರ ದಾಸೋಹ ಸಿಬ್ಬಂದಿಗಳು ಕೂಡ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here