ಅಕ್ರಮ ಮದ್ಯ ಮಾರಾಟ ವಿರೋಧಿ ಸಮಿತಿ ರಚನೆ ಮತ್ತು ಇಲಾಖೆಗಳಿಗೆ ಮನವಿ ಸಲ್ಲಿಕೆ

0

 

ಮಡಪ್ಪಾಡಿ, ಮರ್ಕಂಜ ಮತ್ತು ದೇವಚಳ್ಳ ಗ್ರಾಮಗಳ ಕೆಲವು ದಿನಸಿ ಅಂಗಡಿಗಳಲ್ಲಿ ಮತ್ತು ಮನೆಗಳಲ್ಲಿ ಅಕ್ರಮವಾಗಿ ಎಗ್ಗಿಲ್ಲದೆ ಮದ್ಯ ಮಾರಾಟ ನಡೆಯುತ್ತಿದ್ದು ಇದನ್ನು ವಿರೋದಿಸಿ, ಚೈತನ್ಯ ಗೆಳೆಯರ ಬಳಗ ಶೆಟ್ಟಿಮಜಲು ಇದರ ನೇತೃತ್ವದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ, ಶ್ರೀ ಕೃಷ್ಣ ಸಾಂಸ್ಕೃತಿಕ ಸೇವಾ ಸಮಿತಿ, ನವೋದಯ ಸಂಘ, ಮಹಿಳಾ ಸಂಘಟನೆಗಳು ಮತ್ತು ಮೂರು ಗ್ರಾಮಗಳ ನಾಗರೀಕರ ಸಹಕಾರದೊಂದಿಗೆ ಅಕ್ರಮ ಮದ್ಯ ಮಾರಾಟ ವಿರೋಧಿ ಸಮಿತಿಯನ್ನು ಸೆ.10ರಂದು ರಚಿಸಲಾಯಿತು.

 

ಇದರ ಅಧ್ಯಕ್ಷರಾಗಿ ಅವಿನಾಶ್ ಬಲ್ಕಜೆ, ಉಪಾಧ್ಯಕ್ಷರಾಗಿ ಶೇಸಪ್ಪ ಶೆಟ್ಟಿಮಜಲು, ಕಾರ್ಯದರ್ಶಿಯಾಗಿ ಅನಿತಾ ಕಟ್ಟದಮೂಲೆ, ಜತೆ ಕಾರ್ಯದರ್ಶಿಯಾಗಿ ಭವ್ಯ ಬಳ್ಳಿಗುಂಡಿ ಮತ್ತು ಗೌರವ ಸಲಹೆಗಾರರಾಗಿ ಹರೀಶ್ ಕಂಜಿಪಿಲಿ, ಗೋವಿಂದ ಅಳವುಪಾರೆ, ನರ್ಸಪ್ಪ ಕಜೆ, ಗೋಪಾಲಕೃಷ್ಣ ಪಾರೆಮಜಲು,ಚೋಮ ಅಂಗಡಿಮಜಲು, ಕಿರಣ್ ಕರಂಗಲಡ್ಕ,ದೇವಪ್ಪ ಕಜೆ ವಿಶ್ವನಾಥ ಮಡಪ್ಪಾಡಿ, ಸೌಮ್ಯ ಎಮ್ ಟಿ,ಪ್ರೇಮಾ ಶೀರಡ್ಕ, ಇವರುಗಳನ್ನು ಆಯ್ಕೆ ಮಾಡಲಾಯಿತು.

ಮತ್ತು ಸೆ.13ರಂದು ಮಡಪ್ಪಾಡಿ, ಮರ್ಕಂಜ ಮತ್ತು ದೇವಚಳ್ಳ ಗ್ರಾಮ ಪಂಚಾಯಿತಿಗೆ ಮತ್ತು ಸುಳ್ಯ ಅಬಕಾರಿ ಇಲಾಖೆ ಮತ್ತು ಸುಳ್ಯ ಆರಕ್ಷಕ ಠಾಣೆಗೆ, ಅಕ್ರಮ ಮದ್ಯ ಮಾರಾಟ ನಿಷೇಧ ಮಾಡುವಂತೆ ಆಗ್ರಹಿಸಿ ಮನವಿ ಸಲ್ಲಿಕೆ ಮಾಡಲಾಯಿತು.

LEAVE A REPLY

Please enter your comment!
Please enter your name here