ಸುಳ್ಯ: ನಿರಾಶ್ರಿತ ವೃದ್ದನನ್ನು ಆಶ್ರಮಕ್ಕೆ ಸೇರಿಸಿದ ಆಶ್ರಯ ತಂಡ

0

ಅನಾಥ ವೃದ್ದನೋರ್ವರನ್ನು  ಸುಳ್ಯದ ಆಶ್ರಯ ತಂಡ ಆಶ್ರಮಕ್ಕೆ ಸೇರಿಸಿದ  ಘಟನೆ ನಡೆದಿದೆ.

ಕಳೆದ ಎರಡು ತಿಂಗಳ ಹಿಂದೆ ಪುತ್ತೂರು ಮತ್ತು ಸುಳ್ಯ ಭಾಗದಲ್ಲಿ ಅನಾಥ ವೃದ್ಧರೂರ್ವರು ರಸ್ತೆ ಮತ್ತು ಅಂಗಡಿ ಮುಂಗಟುಗಳಲ್ಲಿ ಆಶ್ರಯ ಪಡೆಯುತ್ತಿದ್ದು ಇವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಇವರ ಫೋಟೋ ಮತ್ತು ವಿಡಿಯೋ ಹರಿದಾಡುತ್ತಿದ್ದವು.
ಇವರು ಕಳೆದ ಎರಡು ತಿಂಗಳ ಹಿಂದೆ ಪುತ್ತೂರು ಕುಂಬ್ರ ಭಾಗದಲ್ಲಿ ಮಾಣಿ ಮೈಸೂರು ಹೆದ್ದಾರಿ ಬಳಿ ಮರದದಡಿಯಲ್ಲಿ ಗಾಳಿ ಮಳೆಗೆ ದಯನೀಯ ಸ್ಥಿತಿಯಲ್ಲಿ ತಂಗಿದ್ದರು. ಇವರನ್ನು ಕಂಡ ಸ್ಥಳೀಯ ಯುವಕರು ಅವರ ಮನೆ ವಿಳಾಸವನ್ನು ಕೇಳಿ ಸುಳ್ಯದ ನಾವೂರು ಪ್ರದೇಶಕ್ಕೆ ಕಳುಹಿಸಿಕೊಟ್ಟಿದ್ದರು. ಮಾನಸಿಕವಾಗಿ ಅಲ್ಪ ಸಮಸ್ಯೆಗೊಳಾಗಿದ್ದ ಅವರು ನೀಡುವ ಮಾಹಿತಿ ಸರಿ ಇಲ್ಲದೆ ಇದ್ದ ಕಾರಣ ಇವರಸರಿಯಾದ ವಿಳಾಸವನ್ನು ಕಂಡುಹಿಡಿಯಲು ಸಾಧ್ಯವಾಗುತ್ತಿರಲಿಲ್ಲ.
ನಂತರ ಕಳೆದ ಒಂದೂವರೆ ತಿಂಗಳಿನಿಂದ ಸುಳ್ಯದ ನಾವೂರು, ಗಾಂಧಿನಗರ ಭಾಗದಲ್ಲಿ ಅಂಗಡಿ ಮುಂಗಟ್ಟು ಅಥವಾ ಪ್ರಯಾಣಿಕರ ತಂಗುದಾಣದಲ್ಲಿ ಆಶ್ರಯ ಪಡೆದಿದ್ದ ಇವರು ಗಾಂಧಿನಗರ ಪ್ರಯಾಣಿಕರ ತಂಗುದಾಣದಲ್ಲಿ ಅಲ್ಲಿಯೇ ಉಳಿದಿದ್ದರು. ಒಂದು ಕಾಲಿನ ಬಲವನ್ನು ಕಳೆದುಕೊಂಡಿದ್ದ ಇವರು ಮಲಗಿದಲ್ಲಿಯೇ ಮಲಮೂತ್ರ ವಿಸರ್ಜನೆಯನ್ನು ಮಾಡಿ ಪರಿಸರ ದುರ್ನಾಥ ಬೀರತೊಡಗಿದವು.ತಂಗುದಾಣವನ್ನು ಬಳಸಲು ಸಾರ್ವಜನಿಕರಿಗೆ ಅಸಾಧ್ಯವಾದ ಸ್ಥಿತಿ ನಿರ್ಮಾಣಗೊಂಡಿದ್ದವು.
ವಿಷಯ ತಿಳಿದ ಸುಳ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಸಿ ಡಿ ಪಿ ಓ ರಶ್ಮಿ, ಹಾಗೂ ಕಚೇರಿಯ ಮುಖ್ಯಸ್ಥರಾದ ಶ್ರೀಮತಿ ಶೈಲಜಾ ಸ್ಥಳಕ್ಕೆ ಭೇಟಿ ನೀಡಿ ಆಶ್ರಮದವರಿಗೆ ದೂರವಾಣಿ ಮೂಲಕ ಕರೆ ಮಾಡಿ ವೃದ್ಧರನ್ನು ಆಶ್ರಮ ಸೇರಿಸಿಕೊಳ್ಳುವ ಬಗ್ಗೆ ಮಾತನಾಡಿದರು.
ಬಳಿಕ ಸುಳ್ಯ ಗಾಂಧಿನಗರ ಭಾಗದ ಆಶ್ರಯ ಫೌಂಡೇಶನ್ ಎಂಬ ಸಂಸ್ಥೆಯ ಮುಖ್ಯಸ್ಥ ಶರೀಫ್ ಕಂಠಿ ತಮ್ಮ ತಂಡದ ಸದಸ್ಯರ ಸಹಕಾರದೊಂದಿಗೆ ತಂಗುದಾಣಕ್ಕೆ ಭೇಟಿ ನೀಡಿ ಪರಿಸರ ಮತ್ತು ಅವರನ್ನು ಸ್ವಚ್ಛಗೊಳಿಸಿ ಸ್ವಚ್ಛ ಉಡುಪುಗಳನ್ನು ನೀಡಿ ಅವರನ್ನು ಬೆಳ್ತಂಗಡಿಯ ಶಿಯೋನ್ ಆಶ್ರಮಕ್ಕೆ ಸುಳ್ಯದ ಎಸ್ ಎಸ್ ಎಫ್ ಆಂಬುಲೆನ್ಸ್ ಮೂಲಕ ಕೊಂಡೋಗಿ ಬಿಡಲಾಯಿತು.
ಈ ಸಂದರ್ಭದಲ್ಲಿ ಆಶ್ರಯ ಫೌಂಡೇಶನ್ ತಂಡದ ಕಾರ್ಯದರ್ಶಿ ಮಸೂದ್ (ಅಚ್ಚು), ರಫೀಕ್ ಬಿ ಎಂ ಎ ಫ್ರೋಟ್ಸ್, ರೆಹಮಾನ್ ಬೋರುಗುಡ್ಡೆ, ಸ್ಥಳೀಯರಾದ ರಾಧಾಕೃಷ್ಣ, ಮುರಳಿಧರನ್, ವಿಠಲ್, ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅಂಬುಲೆನ್ಸಿನ ಚಾಲಕರಾಗಿ ಸಿದ್ದಿಕ್ ಗೂನಡ್ಕ, ಹಾಗೂ ಸಿದ್ದೀಕ್ ನಾವೂರು ಸಹಕರಿಸಿದರು.

 

LEAVE A REPLY

Please enter your comment!
Please enter your name here