ಉಬರಡ್ಕ ಗ್ರಾ.ಪಂ. ಕ್ರಿಯಾ ಯೋಜನೆ ಬದಲಾವಣೆ ಸದಸ್ಯ ಅನಿಲ್ ಬಳಡ್ಕ ಆಕ್ಷೇಪ

0

 

 

ಉಬರಡ್ಕ ಗ್ರಾಮ ಪಂಚಾಯತ್‌ನ ೨೦೨೨-೨೩ನೇ ಸಾಲಿನ ೧೫ನೇ ಹಣಕಾಸು ನಿಧಿಯ ಕ್ರಿಯಾಯೋಜನೆಯನ್ನು ತಿರುಚಲಾಗಿದೆ ಎಂದು ಅನಿಲ್ ಬಳ್ಳಡ್ಕ ಆರೋಪಿಸಿದ್ದು, ಅವರು ಆಕ್ಷೇಪಣೆ ವ್ಯಕ್ತ ಪಡಿಸಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ಉಬರಡ್ಕ ಗ್ರಾಮ ಪಂಚಾಯತ್‌ನ ೨೦೨೨ -೨೩ನೇ ಸಾಲಿನ ೧೫ನೇ ಹಣಕಾಸು ನಿಧಿಯ ಅನುದಾನ ಹಂಚಿಕೆ ನಡೆಸಿ ಕ್ರಿಯಾಯೋಜನೆ ತಯಾರಿಸಲಾಗಿತ್ತು. ಅಧಿಕೃತಗೊಂಡಿದ್ದ ೨೦೨೨-೨೩ನೇ ಸಾಲಿನ ೧೫ನೇ ಹಣಕಾಸು ನಿಧಿಯ ಕ್ರಿಯಾಯೋಜನೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಇತರ ಸದಸ್ಯರ ಗಮನಕ್ಕೆ ತಾರದೆ ತಿದ್ದುಪಡಿಸಿದ್ದು ಇದೀಗ ಕ್ರಿಯಾಯೋಜನೆ ಗಮನಿಸಿದರೆ ಎರಡನೇ ವಾರ್ಡ್‌ಗೆ ಸಂಬಂಧಿಸಿದ ಕಾಮಗಾರಿಗಳ ಅನುದಾನವನ್ನು ಖಡಿತಗೊಳಿಸಲಾಗಿದೆ. ಹಾಗೂ ಈ ವಿಚಾರವನ್ನು ಎರಡನೇ ವಾರ್ಡ್‌ನ ಪ್ರತಿನಿಧಿಯಾಗಿರುವ ನನಗೆ, ಪಂಚಾಯತ್ ಅಧ್ಯಕ್ಷರಿಗೆ ಹಾಗೂ ಇತರ ಸದಸ್ಯರುಗಳ ಗಮನಕ್ಕೆ ತಾರದೇ ಹಂಚಿಕೆ ಮಾಡಿದ್ದ ಅನುದಾನವನ್ನು ಖಡಿತಗೊಳಿಸಿರುವುದನ್ನು ಹಾಗೂ ಕ್ರಿಯಾಯೋಜನೆ ತಿರುಚಿರುವುದನ್ನು ನಾನು ಆಕ್ಷೇಪಿಸುತ್ತಿzನೆ ಎಂದು ಅವರು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here