ಮದರ್ ಡ್ರೀಮ್ಸ್ ರೂರಲ್ &ಅರ್ಬನ್ ಎಜ್ಯುಕೇಶನ್ ಡೆವಲಪ್ಮೆಂಟ್ ಸೊಸೈಟಿ ವತಿಯಿಂದ ಸರ್ಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ಉಚಿತ ಸಂಜೆ ಪಾಠಶಾಲೆ

0

 

ಮದರ್ ಡ್ರೀಮ್ಸ್ ರೂರಲ್& ಅರ್ಬನ್ ಎಜುಕೇಶನ್ ಡೆವಲಪ್ಮೆಂಟ್ ಸೊಸೈಟಿ ವತಿಯಿಂದ ಉಚಿತ ಸಂಜೆ ಪಾಠ ಸುಳ್ಯ ತಾಲೂಕಿನ ಐವರ್ನಾಡಿನ ದೇವಕಾನ ಸರ್ಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ದೇವರಕಾನದಲ್ಲಿ ನಡೆಯಿತು.
ಸ್ವಾಮಿ ವಿವೇಕಾನಂದರ ಸಂದೇಶವನ್ನು ಶಾಲಾ ಮಕ್ಕಳಾದ ಸುಪ್ರೀತಾ ಮತ್ತು ತಂಡದವರು ಓದುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಅಧ್ಯಕ್ಷತೇಯನ್ನು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ನವೀನ್ ಸಾರಕೇರೆ ರವರು ವಹಿಸಿದ್ದರು.ಅವರು ಮಾತನಾಡಿ ಸಂಸ್ಥೆಯ ಉದ್ದೇಶ ಮಕ್ಕಳ ಜೀವನವನ್ನು ರೂಪಿಸುವಲ್ಲಿ ಬಹಳ ಯಶಸ್ವಿಯಾಗಲಿ ಎಂದು ಹಾರೈಸಿದರು.
ಅಥಿತಿಯಾಗಿ ಶಾಲಾ ಮುಖ್ಯೋಪಾಧ್ಯಾರಾದ ಶ್ರೀಮತಿ ಪ್ರಮಿಳಾ ರವರು ಮಾತನಾಡಿ ಈ ಸಂಸ್ಥೆಯ ಯೋಜನೆಗೆ ಪೂರ್ಣ ಬೆಂಬಲ ವ್ಯಕ್ತಪಡಿಸಿದರು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾದ ಮಹಾಂತೇಶ್ ಡಿ.ಮಾತನಾಡಿ ಎ ಪಿ ಜೆ.ಅಬ್ದುಲ್ ಕಲಾಂ,ಕುವೆಂಪು,ಸ್ವಾಮಿ ವಿವೇಕಾನಂದ ಆಗೆ ಮಕ್ಕಳು ಬೆಳೆಯಲಿ ಎಂದು ನುಡಿದರು.
ಸಂಸ್ಥೆಯ ಪದಾಧಿಕಾರಿಗಳು ಮತ್ತು ಸದಸ್ಯರಾದ.ಸೋಮಪ್ರಸಾದ್ ರೈ ಗೂಡಂಬೆ ಮರ್ಕಂಜ,ಚಂದ್ರಶೇಖರ ಕೆ.ಪಲ್ಲತ್ತಡ್ಕ,ಮಧುಸೂದನ ಕಾಟಿಪಳ್ಳ,
,ರಘು ಕರಿಯಮೂಲೆ,ಮತ್ತು ಸಹಶಿಕ್ಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here