ಪೋಲಿಸ್ ಇಲಾಖೆಯ ಅಪರಾಧ ಸ್ಥಳ ಪರಿಶೀಲನಾಧಿಕಾರಿ ಹುದ್ದೆಗೆ ಮನಸ್ವಿನಿ ಬಡ್ಡಡ್ಕ ಆಯ್ಕೆ

0

 

 

ಪೋಲೀಸ್ ಇಲಾಖೆಯ ಅಪರಾಧ ಸ್ಥಳ ಪರಿಶೀಲನಾ ಅಧಿಕಾರಿ ( Scene Of Crime Officer) ಹುದ್ದೆಗೆ ಆಲೆಟ್ಟಿ ಗ್ರಾಮದ ಬಡ್ಡಡ್ಕದ ಯುವತಿ ಮನಸ್ವಿನಿ ಎನ್.ಕೆ. ಯವರು ಆಯ್ಕೆಯಾಗಿರುತ್ತಾರೆ.

ಇವರು ಸೆ.19 ರಂದು ಕರ್ತವ್ಯಕ್ಕೆ ಹಾಜರಾಗಿರುವುದಾಗಿ ತಿಳಿದು ಬಂದಿದೆ. ಪ್ರಾಥಮಿಕ ವಿದ್ಯಾಭ್ಯಾಸವನ್ನು
ಸುಳ್ಯದರೋಟರಿಯಲ್ಲಿ, ಉಜಿರೆಯ ಎಸ್.ಡಿ.ಎಂ.ಸಿ.ಯಲ್ಲಿ ಪ್ರೌಢ ಶಿಕ್ಷಣ ಪೂರೈಸಿ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪಿ.ಯು.ಸಿ ಹಾಗೂ ಬೆಂಗಳೂರಿನ ಜೈನ್ ಯುನಿವರ್ಸಿಟಿಯಲ್ಲಿ ಬಿ.ಎಸ್ಸಿ. ಪದವಿ ವ್ಯಾಸಂಗ ಪಡೆದು ಗುಜರಾತ್ ನ ಫೋರೆನ್ಸಿಕ್ ಯೂನಿವರ್ಸಿಟಿಯಲ್ಲಿ ಎಂ.ಎಸ್ಸಿ. ಪದವಿ ಶಿಕ್ಷಣ ಪೂರೈಸಿರುತ್ತಾರೆ. ಈಕೆ ಸುಳ್ಯದ ರಂಗೋಲಿ ಗಾರ್ಮೆಂಟ್ಸ್ ನ ಮಾಲಕಿ ಶ್ರೀಮತಿ ಪ್ರಶಾಂತಿ ಬಡ್ಡಡ್ಕ ರವರ ಪುತ್ರಿ. ಬಡ್ಡಡ್ಕ ರಾಮಕೃಷ್ಣ ಅನುದಾನಿತ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿ ಇಂದಿರಾ ಚಂಗಪ್ಪ ರವರ ಮೊಮ್ಮಗಳು.

LEAVE A REPLY

Please enter your comment!
Please enter your name here