ಬೆಂಗಳೂರಿನಲ್ಲಿ ಬೈಕ್ ಅಪಘಾತ- ಆಲಂಕಾರಿನ ಯವಕ ದುರ್ಮರಣ, ಸಹ ಸವಾರನಿಗೆ ಗಾಯ

0

ಕಡಬ: ಬೆಂಗಳೂರಿನಲ್ಲಿ ಬೈಕ್ ಅಪಘಾತದಲ್ಲಿ ಆಲಂಕಾರಿನ ಯುವಕನೊಬ್ಬ ಮೃತಪಟ್ಟು ಸಹ ಸವಾರ ಗಾಯಗೊಂಡ ಘಟನೆ ಜ.31ರಂದು ನಡೆದಿದೆ.
ಆಲಂಕಾರು ಗ್ರಾಮದ ಶರವೂರು ನಿವಾಸಿ ರಾಜೀವಿ ಎಂಬವರ ಪುತ್ರ ನಂದಿಪ್ (21) ಎಂದು ತಿಳಿದು ಬಂದಿದೆ. 


ಇವರು ಬೆಂಗಳೂರಿನ ಜಿಗನಿಯಲ್ಲಿ ಕಂಪೆನಿಯೊಂದರಲ್ಲಿ ಉದ್ಯೋಗ ದಲ್ಲಿದ್ದು ಬೆಳಿಗ್ಗೆ ಕೆಲಸಕ್ಕೆಂದು ಹಳೆನೇರಂಕಿಯ ನಿವಾಸಿ ಸ್ನೇಹಿತನೊಂದಿಗೆ ಬೈಕ್ ನಲ್ಲಿ ಹೋಗುತ್ತಿದ್ದರು ಎನ್ನಲಾಗಿದ್ದು, ಈ ಸಂದರ್ಭದಲ್ಲಿ ಅಟೋ ರಿಕ್ಷವೊಂದು ಹಠತ್ತಾಗಿ ಬಲಕ್ಕೆ ತಿರುಗಿದಾಗ ಅದಕ್ಕೆ ಡಿಕ್ಕಿ ಹೊಡೆದು ರಸ್ತೆಗೆ ಬಿದ್ದಿದ್ದು ಈ ಸಂದರ್ಭದಲ್ಲಿ ಹಿಂದಿನಿಂದ ಬಂದ ಲಾರಿ ಯುವಕನ ತಲೆ ಮೇಲೆಯೇ ಸಂಚರಿಸಿದ ಪರಿಣಾಮ ನಂದಿಪ್ ಸ್ಥಳದಲ್ಲಿ ಯೇ ಮೃತಪಟ್ಟಿದ್ದರು. ಸಹ ಸವಾರ ಹಳೆನೆರಂಕಿ ನಿವಾಸಿ ಯುವಕ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಮೃತ ನಂದಿಪ್ ಅವರು ತಾಯಿ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here