ಪ್ರಕಟಣೆ ಹೊರಡಿಸಿದಂತೆ ಎಲ್ಲ ಅಂಗಡಿ ಕೊಠಡಿಗಳನ್ನು ಏಲಂ ಮಾಡಿ

0

ಬಳ್ಪ ಗ್ರಾ.ಪಂ. ಗೆ ಗ್ರಾಮಸ್ಥರ ಒತ್ತಾಯ : ಪಂಚಾಯತ್ ತೀರ್ಮಾನಕ್ಕೆ ಅಸಮಾಧಾನ

ಪ್ರಕಟಣೆ ಹೊರಡಿಸಿದಂತೆ ಪಂಚಾಯತ್ ನ ಅಂಗಡಿ ಕೊಠಡಿಗಳನ್ನು ಏಲಂ ಮಾಡಬೇಕು ಎಂದು ಬಳ್ಪ ಗ್ರಾಮಸ್ಥರು ಪಂಚಾಯತ್ ನ್ನು ಒತ್ತಾಯಿಸಿದ್ದಾರೆ. ಹಾಗೂ ಪಂಚಾಯತ್ ಇದೀಗ ಕೈಗೊಂಡ ತೀರ್ಮಾನಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಳ್ಪ ಗ್ರಾ.ಪಂ. ಮುಂಭಾಗದ ಮುಖ್ಯ ರಸ್ತಗೆ ಹೊಂದಿಕೊಂಡಿರುವ ಅಂಗಡಿಕೋಣೆಗಳನ್ನು ಹರಾಜು ಮಾಡಲು ಪತ್ರಿಕಾ ಪ್ರಕಟಣೆ ನೀಡಿ, ಸೆ.20 ರಂದು ಮಧ್ಯಾಹ್ನ 2 ಗಂಟೆಗೆ ದಿನ ನಿಗದಿ ಮಾಡಿತ್ತು. ಏಲಂನಲ್ಲಿ ಭಾಗವಹಿಸಲು ಬಂದ ಗ್ರಾಮಸ್ಥರಿಂದ ಮುಂಗಡ ಪಡೆಯದೆ ಒಂದು ಕೋಣೆಯನ್ನು ಯಥಾಸ್ಥಿತಿಯಲ್ಲಿ ಮುಂದುವರಿಸುವ ಬಗ್ಗೆ ಪಂಚಾಯತ್ ಕಡೆಯಿಂದ ತೀರ್ಮಾನಿಸಿದರೆಂದೂ ಈ ವಿಚಾರ ತಿಳಿದ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹರಾಜು ಬಗ್ಗೆ ಪತ್ರಿಕೆಯಲ್ಲಿ ಪ್ರಕಟಣೆ ನೀಡಿರುವುದರಿಂದ ಹರಾಜಿನಲ್ಲಿ ಭಾಗವಹಿಸಲು ಅನೇಕ ಮಂದಿ ಆಗಮಿಸಿದ್ದಾರೆ. ಆದರೆ ಹರಾಜಿನಲ್ಲಿ ಭಾಗವಹಿಸಲು ಡೆಪಾಸಿಟ್ ನೀಡಿದರೆ ಅದನ್ನು ಸ್ವಿಕರಿಸದೆ ಒಂದು ಕೋಣೆಯನ್ನು ಯಥಾಸ್ಥಿತಿ ಮುಂದುವರಿಸುವ ಬಗ್ಗೆ ತೀರ್ಮಾನಿಸಿ ಸಾಮಾನ್ಯ ಸಭೆಯನ್ನು ನಡೆಸುತ್ತಿದ್ದಾರೆ. ಪಿ.ಡಿ.ಒರನ್ನು ವಿಚಾರಿಸಿದರೂ ಆ ಕೊಠಡಿಯನ್ನು ಹೊರತುಪಡಿಸಿ ಹರಾಜು ಮಾಡಲಾಗುವುದು ಎಂದಿದ್ದಾರೆ. ಪತ್ರಿಕೆಯಲ್ಲಿ ಪ್ರಕಟಣೆ ನೀಡಿದ ಮೇಲೆ ಈ ನಿರ್ಧಾರ ಸರಿಯಲ್ಲ ಎಂದು ಗ್ರಾಮಸ್ಥರು ಅಭಿಪ್ರಾಯ ಸುದ್ದಿಗೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here