ಪ್ರಥಮ ವರ್ಷದ ಲೀಗ್ ಮಾದರಿಯ ಎಮ್ ಪಿ ಯಲ್ ಟ್ರೋಫಿ ಕ್ರಿಕೆಟ್ ಪಂದ್ಯಾಟ: ಅವೆಂಜರ್ಸ್ ಸವಣೂರು ಚಾಂಪಿಯನ್ ಇಲೆವೆನ್, ಸ್ಟೈಕರ್ಸ್ ಅನಡ್ಕ ರನ್ನರ್ಸ್

0

 

ಪುತ್ತೂರು : S’2NN ಸ್ಪೋರ್ಟ್ಸ್ ಕ್ಲಬ್ ಉರ್ಲಾಂಡಿ, ಪುತ್ತೂರು ಇದರ ಆಶ್ರಯದಲ್ಲಿ ಮೊಗೇರ ಪ್ರೀಮಿಯರ್ ಲೀಗ್ ಸೀಸನ್-1 ಎಂ.ಪಿ.ಎಲ್ ಕೊಂಬೆಟ್ಟು ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಿತು.

ಕಡಬ, ಸುಳ್ಯ ಹಾಗೂ ಪುತ್ತೂರು ತಾಲೂಕಿನ ಮೊಗೇರ ಸಮುದಾಯದ ಆಟಗಾರರಿಗೆ ಮಾತ್ರ ಸೀಮಿತಗೊಂಡಿದ್ದ ಪಂದ್ಯಾವಳಿಯು, ಮೊಗೇರ ಕ್ರಿಕೆಟ್  ಸುದ್ದಿ ಲೈವ್ ಚಾನೆಲ್ ಮುಖಾಂತರ ನೇರ ಪ್ರಸಾರಗೊಂಡಿತ್ತು.

20,000/- ಹಾಗೂ 10,000/- ನಗದು ಬಹುಮಾನ ಮೊತ್ತದ ಪಂದ್ಯಾಕೂಟದಲ್ಲಿ ಫೈಯರ್ ಅವೆಂಜರ್ಸ್ ಸ್ಕ್ವಾಡ್ ಸವಣೂರು, ಬದಿನಾರ್ ಸ್ಟೈಕರ್ಸ್, ಪ್ರಿನ್ಸ್ ಪುತ್ತೂರು, ವಿನಾಯಕ ಕುಂಬ್ರ, ಇಲೆವೆನ್ ಸ್ಟೈಕರ್ಸ್ ಆನಡ್ಕ, ಜೈ ಕೇಸರಿ ಉರ್ಲಾಂಡಿ, ಸ್ವಿಂಗರ್ಸ್ ಶಾಂತಿನಗರ ಮತ್ತು ಯಶಸ್ವಿ ಸ್ಟೈಕರ್ಸ್ ಕರ್ಗಲ್ ಇಷ್ಟು ತಂಡಗಳು ಭಾಗವಹಿಸಿದ್ದವು.

ಸಂಜೆ ನಡೆದ ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ  ಮೊಗೇರ ಸಮುದಾಯದ ಹಾಸ್ಯ ಕಲಾವಿದ, ನಾಟಕಕಾರ, ಚಲನಚಿತ್ರ ನಟ ರವಿ ರಾಮಕುಂಜ ಮತ್ತು ಮತ್ತೋರ್ವ ಮೊಗೇರ ಸಮುದಾಯದ ವಿದ್ಯಾರ್ಥಿನಿ ಶೈಕ್ಷಣಿಕ,ಸಂಗೀತ, ನೃತ್ಯ ಸಾಧಕಿ ಕು. ಭೂಮಿಕಾ ಪಂಜಳ ಇವರುಗಳನ್ನು ಸನ್ಮಾನಿಸಲಾಯಿತು.

ಪಂದ್ಯಾಕೂಟದ ವೀಕ್ಷಕ ವಿವರಣೆಗಾರರಾಗಿ ವಾಯ್ಸ್ ಆಫ್ ಬೆಳ್ಳಾರೆ ಖ್ಯಾತಿಯ ರಮೇಶ್ ಬೆಳ್ಳಾರೆ ಹಾಗೂ ಪರ್ವೀಝ್ ಪುತ್ತೂರು ಸಹಕರಿಸಿದರು. ತೀರ್ಪುಗಾರರಾಗಿ ಸಂತೋಷ್, ಪುಷ್ಪರಾಜ್, ಅಶೋಕ್ ಹಾಗೂ ರಿಯಾಝ್ ಇವರುಗಳು ಸಹಕರಿಸಿದರು. ಪ್ರಸನ್ನ ಪುತ್ತೂರು ಸ್ವಾಗತಿಸಿ, ಪುರುಷೋತ್ತಮ ಕುಂಡಡ್ಕ ಕಾರ್ಯಕ್ರಮ ನಿರೂಪಿಸಿದರು.

 ಕಾರ್ಯಕ್ರಮಕ್ಕೆ    S²NN spots club ಸಂಸ್ಥಾಪಕರು ಮತ್ತು ಮಾಲಕರು ಪ್ರಸನ್ನ ನಾಯರಡ್ಕ, (MPL)ಆಯೋಜಕರು,  ತಂಡದ ವ್ಯವಸ್ಥಾಪಕ ನಿರ್ದೇಶಕರು (MPL) ಆಯೋಜಕರು ಶೋಭರಾಜ್ ಶರತ್,  S²NN sports club ಅಧ್ಯಕ್ಷ ದೀಕ್ಷಿತ್, ಉಪಾಧ್ಯಕ್ಷ ಮಣಿಕಂಠ , ಕೋಶಾಧಿಕಾರಿ ಪ್ರಜ್ವಲ್ , ತಂಡದ ಸಂಘಟಕರು ನಿತಿನ್ ಹಾಗೂ ವಿನೋದ್ , ನಾಯಕ ಸುಹಾಸ್ ಸದಸ್ಯರು ಗಣೇಶ್, ಪ್ರಥಮ್,ಲೋಹಿತ್. ರೋಹಿತ್, ಶಿವಪ್ರಸಾದ್, ಪ್ರಶಾಂತ್, ಸುಜಿತ್, ವಿಠಲ,  ವಿನಾಯಕ ಪ್ರೆಂಡ್ಸ್ ಕುಂಬ್ರ ಮತ್ತು ಟೀಮ್ ಯುನೈಟೆಡ್ ಹೀಗಲ್ಸ್ ಪಡು    ಸದಸ್ಯರುಗಳು ಸಹಕರವನ್ನು ನೀಡಿದರು. 

ಪ್ರಥಮ ಸ್ಥಾನ: ಫೈಯರ್ ಅವೆಂಜರ್ಸ್ ಸ್ಕ್ವಾಡ್ ಸವಣೂರು, ದ್ವಿತೀಯ: ಇಲೆವೆನ್ ಸ್ಟೈಕರ್ಸ್ ಆನಡ್ಕ, ಉತ್ತಮ ದಾಂಡಿಗ: ನಿತಿನ್, ಫೈಯರ್ ಅವೆಂಜರ್ಸ್ ಸ್ಕ್ವಾಡ್ ಸವಣೂರು, ಉತ್ತಮ ದಾಳಿಗಾರ: ಯತೀಶ್, ಫೈಯರ್ ಅವೆಂಜರ್ಸ್ ಸ್ಕ್ವಾಡ್ ಸವಣೂರು,  ಉತ್ತಮ ಕ್ಷೇತ್ರ ರಕ್ಷಕ: ಆಶೋಕ್ ವಿನಾಯಕ ಕುಂಬ್ರ, ಫೈನಲ್ ಪಂದ್ಯದ ಪಂದ್ಯ ಶ್ರೇಷ್ಠ: ಯತೀಶ್, ಫೈಯರ್ ಅವೆಂಜರ್ಸ್ ಸ್ಕ್ವಾಡ್ ಸವಣೂರು, ಟೂರ್ನಿಯ ಸರಣಿ ಶ್ರೇಷ್ಠ: ಚಂದ್ರ, ಇಲೆವೆನ್ ಸ್ಟೈಕರ್ಸ್ ಆನಡ್ಕ

LEAVE A REPLY

Please enter your comment!
Please enter your name here