ಕುಂತೂರುಪದವು ಹಾ.ಉ.ಸಹಕಾರ ಸಂಘದ ನೂತನ ಕಟ್ಟಡಕ್ಕೆ ಭೂಮಿ ಪೂಜೆ

0

ನೆಲ್ಯಾಡಿ: ಕುಂತೂರುಪದವು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜಾ ಕಾರ್ಯಕ್ರಮ ಜ.26ರಂದು ಕುಂತೂರುಪದವುನಲ್ಲಿ ನಡೆಯಿತು.


ಬಲ್ಯ ಶ್ರೀ ಉಮಾಮಹೇಶ್ವರಿ ದೇವಸ್ಥಾನ ಪ್ರಧಾನ ಅರ್ಚಕ ರವಿಪ್ರಸಾದ್ ಭಟ್‌ರವರು ಪೂಜಾ ವಿಧಿವಿಧಾನ ನೆರವೇರಿಸಿದರು. ಸಂಘದ ಅಧ್ಯಕ್ಷ ಸೋಮಪ್ಪ ಗೌಡ ಎರ್ಮಾಳ, ಕಟ್ಟಡ ಸಮಿತಿ ಅಧ್ಯಕ್ಷ ವಸಂತ ಕೆ., ಇಂಜಿನಿಯರ್ ಚಂದ್ರಹಾಸ ಪನ್ಯಾಡಿ, ಕಟ್ಟಡ ನಿರ್ಮಾಣ ಸಮಿತಿ ಉಪಾಧ್ಯಕ್ಷ ತೋಮಸ್ ವಿ.ಯಂ., ಸಮಿತಿ ಸದಸ್ಯರಾಗಿರುವ ಸುರೇಶ್ ಸಿ.ಎಚ್., ಬಾಬು ಗೌಡ ಕೆ.ಎಸ್., ಸಂಘದ ನಿರ್ದೇಶಕರುಗಳಾದ ಪದ್ಮನಾಭ ಗೌಡ ಎರ್ಮಾಳ, ಪುರುಷೋತ್ತಮ ಬನಾರಿ, ಕೇಶವ ಕಂಡತಡ್ಕ, ಶ್ರೀಮತಿ ವಿಜಯ ಇಡಾಳ, ಸಂಘದ ಮಾಜಿ ಕಾರ್ಯದರ್ಶಿ ಮಂಜಪ್ಪ ಕೆ., ಮಾಜಿ ನಿರ್ದೇಶಕ ವಾಸಪ್ಪ ಕೆ., ಸಂಘದ ಕಾರ್ಯದರ್ಶಿ ನೀಲಯ್ಯ ಗೌಡ, ಹಾಲು ಪರೀಕ್ಷಕ ಶ್ರೇಯಸ್, ಕೃಷ್ಣಪ್ಪ ಮೇಸ್ತ್ರಿ ಮತ್ತು ಸಂಘದ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here