ಸುಬ್ರಹ್ಮಣ್ಯ : ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣಾ ತರಬೇತಿ ಕಾರ್ಯಾಗಾರ ಉದ್ಘಾಟನೆ

0

 

ಕರ್ನಾಟಕ ಸರಕಾರದ ಮುಜರಾಯಿ ಇಲಾಖೆ ಗೆ ಒಳಪಟ್ಟ ಅಧಿಸೂಚಿತ ದೇವಸ್ಥಾನಗಳಲ್ಲಿ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣಾ ಯೋಜನೆಯನ್ನು ಸಮರ್ಥವಾಗಿ ನಿರ್ವಹಿಸಲು 2ದಿನಗಳ ತರಬೇತಿ ಕಾರ್ಯಾಗಾರ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಭಾಂಗಣದಲ್ಲಿ ಸೆ.21 ರಂದು ಉದ್ಘಾಟನೆಗೊಂಡಿತು. ಕಾರ್ಯಾಗಾರವನ್ನು ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ ಉದ್ಘಾಟಿಸಿದರು .

ವೇದಿಕೆಯಲ್ಲಿ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಶ್ರೀ ವತ್ಸ , ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯರಾದ ಶೇಖರ ನಾರಾವಿ ,ರವೀಂದ್ರ ನಾಥ ಶೆಟ್ಟಿ ,ಪುತ್ತೂರು ದೇವಳದ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಕಾರ್ಯನಿರ್ವಹಣಾ ಅಧಿಕಾರಿ ಮಹೇಶ್ , ಪಣೋಲಿಬೈಲು ಕಲ್ಲುರ್ಟಿ ದೈವಸ್ಥಾನದ ಕಾರ್ಯನಿರ್ವಾಣಾಧಿಕಾರಿ ಪ್ರವೀಣ್ ,ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ರವಿ ಕೊಟ್ಟಾರಿ ಗಸ್ತಿ, ದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ ಸ್ವಚ್ಛ ಭಾರತ್ ಮಿಷನ್ ಮಾಹಿತಿ ಶಿಕ್ಷಣ ಮತ್ತು ಸಂವಹನ ಅಧಿಕಾರಿ ದೊಂಬಯ್ಯ ಇಡ್ಕಿದು, ಬೆಂಗಳೂರು ಮುಜರಾಯಿ ಆಯುಕ್ತ ಕಚೇರಿಯ ಯೋಜನಾ ನಿರ್ವಹಣಾ ಘಟಕದ ಟೀಮ್ ಲೀಡರ್ ಮಹೇಶ್ ಭಟ್, ಯೋಜನಾ ನಿರ್ವಹಣಾ ಘಟಕದ ಪ್ರಮುಖರಾದ ಪ್ರತಿಭಾ ಡಿ ರೈ, ಸಪೋರ್ಟ್ ಇಂಜಿನಿಯರ್ ಪ್ರಶಾಂತ್, ಹೇಮಾಂಬಿಕ, ಇಂಜಿನಿಯರ್ ಪ್ರದೀಪ್, ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಪುಷ್ಪಲತಾ ,ದೇವಳದ ಅಭಿಯಂತರ ಉದಯಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು .ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆರೋಗ್ಯ ನಿರೀಕ್ಷಕ ಯೋಗೀಶ್ ಸ್ವಾಗತಿಸಿದರು .ದೇವಳದ ಎಂಜಿನಿಯರ್ ಉದಯಕುಮಾರ್ ವಂದಿಸಿದರು ನಿವೃತ್ತ ಉಪನ್ಯಾಸಕ ವಿಶ್ವನಾಥ ನಡುತೋಟ ಕಾರ್ಯಕ್ರಮ ನಿರೂಪಿಸಿದರು .ತರಬೇತುದಾರರಾಗಿ ಬೆಂಗಳೂರು ಮುಜರಾಯಿ ಆಯುಕ್ತ ಕಚೇರಿಯ ಯೋಜನಾ ನಿರ್ವಹಣಾ ಘಟಕದ ಮುಖ್ಯಸ್ಥ ನಿತಿನ್. ಎಸ್., ವಿಘ್ನೇಶ್ ಭಟ್, ಪ್ರತಿಭಾ ಡಿ, ಪ್ರಶಾಂತ್, ಹೇಮಾಂಬಿಕ ಹಾಗೂ ಪ್ರದೀಪ್ ಕಾರ್ಯಾಗಾರ ತರಬೇತಿ ನಡೆಸಿಕೊಟ್ಟರು .

LEAVE A REPLY

Please enter your comment!
Please enter your name here