ಇಚ್ಲಂಪಾಡಿ: ಉಳ್ಳಾಕ್ಲು ಮಾಡದ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕೋತ್ಸವ-ಹೊರೆಕಾಣಿಕೆ ಸಮರ್ಪಣೆ

0

ನೆಲ್ಯಾಡಿ: ಕಡಬ ತಾಲೂಕಿನ ಇಚ್ಲಂಪಾಡಿ ಬೀಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಶ್ರೀ ಉಳ್ಳಾಕ್ಲು ಮಾಡದ ಪ್ರತಿಷ್ಟಾ ಬ್ರಹ್ಮಕಲಶಾಭಿಷೇಕೋತ್ಸವದ ಅಂಗವಾಗಿ ಗ್ರಾಮಸ್ಥರಿಂದ ಹೊರೆಕಾಣಿಕೆ ಸಮರ್ಪಣೆ ಫೆ.2ರಂದು ಬೆಳಿಗ್ಗೆ ನಡೆಯಿತು.


ಬೆಳಿಗ್ಗೆ ೯.೩೨ಕ್ಕೆ ಉಗ್ರಾಣ ಮುಹೂರ್ತ ನಡೆಯಿತು. ಬಳಿಕ ಇಚ್ಲಂಪಾಡಿ,ಬಲ್ಯ, ನೂಜಿಬಾಳ್ತಿಲ, ರೆಂಜಿಲಾಡಿ ಗ್ರಾಮಸ್ಥರಿಂದ ಹೊರೆಕಾಣಿಕೆ ಸಮರ್ಪಣೆಯಾಯಿತು. ಕಾರ್ಯಕ್ರಮದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರರೂ, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷರೂ ಆದ ಶುಭಾಕರ ಹೆಗ್ಗಡೆ, ಪ್ರಧಾನ ಅರ್ಚಕ ಹರೀಶ್ ಭಟ್, ಆಡಳಿತ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಗೌಡ ಕೆರ್ನಡ್ಕ, ಪ್ರಧಾನ ಕಾರ್ಯದರ್ಶಿ ಗಿರೀಶ್ ಸಾಲಿಯಾನ್ ಬದನೆ, ಕೋಶಾಧಿಕಾರಿ ಕೇಶವ ಗೌಡ ಅಲೆಕ್ಕಿ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಮಾಯಿಲಪ್ಪ ಶೆಟ್ಟಿ ಹೊಸಮನೆ, ಅಧ್ಯಕ್ಷ ಭಾಸ್ಕರ ಎಸ್.ಗೌಡ ಒಡ್ಯೆತ್ತಡ್ಕ, ಪ್ರಧಾನ ಕಾರ್ಯದರ್ಶಿ ದಿನೇಶ್ ಗೌಡ ಕಲ್ಯ, ಕೋಶಾಧಿಕಾರಿ ನಾರಾಯಣ ಪೂಜಾರಿ ಬರಮೇಲು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಾರಾಯಣ ಪೂಜಾರಿ ಬರಮೇಲು, ಕೋಶಾಧಿಕಾರಿ ಅನಿಲ್‌ಕುಮಾರ್ ಉಮೆಸಾಗು, ಶ್ರೀ ಉಳ್ಳಾಕ್ಲು ಸೇವಾ ಸಮಿತಿ ಅಧ್ಯಕ್ಷ ಹರೀಶ ಗೌಡ ನೇರ್ಲ, ಪ್ರಧಾನ ಕಾರ್ಯದರ್ಶಿ ಆನಂದ ಶೆಟ್ಟಿ ಕಂಚಿನಡ್ಕ, ಕೋಶಾಧಿಕಾರಿ ಮಾಯಿಲಪ್ಪ ಗೌಡ ಪಾದೆ, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಅಧ್ಯಕ್ಷ ಜಾಣಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿ ಶಾಂತರಾಮ ಕುಡಾಲ, ಕೋಶಾಧಿಕಾರಿ ಈಶ್ವರ ಶೆಟ್ಟಿ ಕಂಚಿನಡ್ಕ ಸೇರಿದಂತೆ ವಿವಿಧ ಸಮಿತಿಯ ಸದಸ್ಯರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here