ಮೂಲ್ಕಿಯಲ್ಲಿ ನಡೆದಿದ್ದ ಲತೀಫ್ ಮರ್ಡರ್ ಕೇಸ್: ಶಿವಪ್ರಸಾದ್ ಆಳ್ವ ವಿಶೇಷ ಸರಕಾರಿ ಅಭಿಯೋಜಕ

0

ಪುತ್ತೂರು: 2020ರ ಜೂನ್ 5ರಂದು ಮೂಲ್ಕಿಯಲ್ಲಿ ನಡೆದಿದ್ದ ಅಬ್ದುಲ್ ಲತೀಫ್(38ವ)ರವರ ಕೊಲೆ ಪ್ರಕರಣದ ವಿಚಾರಣೆ ನಡೆಸಲು ವಿಶೇಷ ಸರಕಾರಿ ಅಭಿಯೋಜಕರಾಗಿ ಹಿರಿಯ ಕಾನೂನು ಅಧಿಕಾರಿ ಕೆ. ಶಿವಪ್ರಸಾದ್ ಆಳ್ವ ನೇಮಕಗೊಂಂಡಿದ್ದಾರೆ.

 

ಶಿವಪ್ರಸಾದ್ ಆಳ್ವ

ಈ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಗೆ ಜಾಮೀನು‌ ಮಂಜೂರು ಮಾಡಿರುವ ಕರ್ನಾಟಕ ಹೈಕೋರ್ಟ್ ಆದೇಶವನ್ನು‌ ಪ್ರಶ್ನಿಸಿ ಕೊಲೆಗೀಡಾಗಿರುವ ಅಬ್ದುಲ್ ಲತೀಫ್ ಅವರ ಪತ್ನಿ, ಸುಳ್ಯ ಅಲೆಕ್ಕಾಡಿ ಮೂಲದವರಾಗಿದ್ದು ಮಂಗಳೂರಿನಲ್ಲಿ ವಕೀಲೆಯಾಗಿರುವ ಮುಬೀನಾರವರು ವಕೀಲ ಶೇಖರ್ ದೇವಸರವರ ಮೂಲಕ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ಜಾಮೀನು ರದ್ದುಗೊಳಿಸಿ ಆದೇಶಿಸಿದ್ದರು. ಈ ಮಧ್ಯೆ ಕೊಲೆ‌ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಇತರ ಆರು ಮಂದಿಗೆ ಮಂಗಳೂರು ಸೆಷೆನ್ಸ್ ನ್ಯಾಯಾಲಯ ಮಂಜೂರು ಮಾಡಿದ್ದ ಜಾಮೀನನ್ನು ಹೈಕೋರ್ಟ್ ರದ್ದು ಪಡಿಸಿತ್ತು. ಇದೀಗ ಈ ಪ್ರಕರಣದಲ್ಲಿಯೂ ಪ್ರಾಸಿಕ್ಯೂಶನ್ ಪರ ವಾದ ಮಂಡಿಸಲು ಹಿರಿಯ ಕಾನೂನು ಅಧಿಕಾರಿ ಕೆ. ಶಿವಪ್ರಸಾದ್ ಆಳ್ವ ನೇಮಕಗೊಂಡಿದ್ದಾರೆ. ಬೆಳಗಾವಿ ನ್ಯಾಯಾಲಯದಲ್ಲಿ ಪ್ರಸ್ತುತ ಭೂಗತ ಪಾತಕಿ ಬನ್ನಂಜೆ ರಾಜನ ವಿರುದ್ಧದ ಪ್ರಕರಣದ ವಿಚಾರಣೆಯಲ್ಲಿಯೂ ಸರಕಾರದ ಪರ ವಾದಿಸುತ್ತಿರುವ ವಿಶೇಷ ಸರಕಾರಿ ಅಭಿಯೋಜಕರ ತಂಡದಲ್ಲಿಯೂ ಶಿವಪ್ರಸಾದ್ ಆಳ್ವ ಕಾರ್ಯ ನಿರ್ವಹಿಸುತ್ತಿದ್ದಾರೆ.‌

ನೀರಬಿದಿರೆ ನಾರಾಯಣ ರೈ ಶ್ರದ್ಧಾಂಜಲಿ ಕಾರ್ಯಕ್ರಮ

LEAVE A REPLY

Please enter your comment!
Please enter your name here