ಮಡಪ್ಪಾಡಿ ಪ್ರಾಥಮಿ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ

0

 

ಸದಸ್ಯರಿಗೆ ಶೇ.8.25 ಡಿವಿಡೆಂಡ್ ವಿತರಣೆ

ಮಡಪ್ಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2021-22ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ.24ರಂದು ಮಡಪ್ಪಾಡಿ ಯುವಕ ಮಂಡಲದ ಸಭಾಭವನದಲ್ಲಿ ಸಂಘದ ಅಧ್ಯಕ್ಷ ಪಿ.ಸಿ. ಜಯರಾಮರವರ ಅಧ್ಯಕ್ಷತೆಯಲ್ಲಿ ನಡೆಯಿತು.

ವಾರ್ಷಿಕ ವರದಿಯನ್ನು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಪೂಂಬಾಡಿ ಸಭೆಯಲ್ಲಿ ಮಂಡಿಸಿದರು.

ಇದೇ ಸಂದರ್ಭದಲ್ಲಿ 2021-22 ಸಾಲಿನಲ್ಲಿ ಸದಸ್ಯರಿಗೆ ಶೇ.8.25 ಡಿವಿಡೆಂಡ್ ನೀಡುವುದಾಗಿ ಸಂಘದ ಅಧ್ಯಕ್ಷರಾದ ಪಿ.ಸಿ.ಜಯರಾಮರವರು ಘೋಸಿಸಿದರು.

ಸಭೆಯಲ್ಲಿ ಪಿಯುಸಿ ಹಾಗೂ ಎಸ್ಸೆಸೆಲ್ಸಿಯಲ್ಲಿ ಶೇ.80ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.
ಹಾಗೂ ಕ್ಯಾಂಪ್ಕೋ ಸಂಸ್ಥೆಯ ಮೂಲಕ ಸಂಸ್ಥೆಯಲ್ಲಿ ಅತೀ ಹೆಚ್ಚು ಅಡಿಕೆ ಮಾರಾಟ ಮಾಡಿದವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಹಾಗೂ ವಿಶೇಷ ಸಾಧನೆ ಮಾಡಿದ ಸದಸ್ಯರ ಮಕ್ಕಳನ್ನು ಗೌರವಿಸಲಾಯಿತು.

 

ವೇದಿಕೆಯಲ್ಲಿ ಉಪಾಧ್ಯಕ್ಷ ಮಿತ್ರ ದೇವ ಮಡಪ್ಪಾಡಿ, ನಿರ್ದೇಶಕ ರಾದ ಸೋಮಶೇಖರ ಕೇವಳ, ಪ್ರಭಾಕರ ಕೇವಳ, ಅಜಯ್ ವಾಲ್ತಾಜೆ, ರಾಜಕುಮಾರ ಪೂಂಬಾಡಿ, ಶ್ರೀಮತಿ ಪ್ತವೀಣ ಯತೀಂದ್ರನಾಥ, ಶ್ರೀಮತಿ ತಾರಾ ಜಿ.ಸಿ., ಕುಂಞಕ್ಕ ಸಿ.ಯಚ್., ವಿಶ್ವನಾಥ ಸಿ.ಎಚ್., ಪೇರಪ್ಪ ಮಲೆ, ಶೇಖರ ಕಜೆ, ಉಪಸ್ಥಿತರಿದ್ದರು.

ಮಹಾಸಭೆಯ ಮೊದಲು ಮುಂಜಾನೆ ಮಡಪ್ಪಾಡಿ ಸಹಕಾರಿ ಸಂಘದಲ್ಲಿ ಮುಂಜಾನೆ ಹೊಸತು ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಹೊಸ ಅಕ್ಕಿ ಊಟ ನಡೆಯಿತು.

LEAVE A REPLY

Please enter your comment!
Please enter your name here