ಮುದ್ದಾಗಿ ಸಾಕಿದ್ದ ಪಾರಿವಾಳ ಕಳವು – ಮರಳಿ ಒದಗಿಸುವಂತೆ ಬಾಲಕನಿಂದ ಪೊಲೀಸರಿಗೆ ಮೊರೆ..!!!

0

ಉಪ್ಪಿನಂಗಡಿ: ಮನೆಯಲ್ಲಿ ಮುದ್ದಾಗಿ ಸಾಕಿದ್ದ ನಾಲ್ಕು ಜೊತೆ ಬಣ್ಣ ಬಣ್ಣದ ಪಾರಿವಾಳಗಳನ್ನು ಕಳ್ಳನೋರ್ವ ಕದ್ದೊಯ್ದಿದ್ದಾನೆ ಎಂದು ಬಾಲಕನೋರ್ವ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಸಾಂದರ್ಭಿಕ ಚಿತ್ರ

ಇಲ್ಲಿನ ರಾಮನಗರ ನಿವಾಸಿ, 9ನೇ ತರಗತಿ ವಿದ್ಯಾರ್ಥಿ ಶಾಹಿಲ್ ಪೊಲೀಸರಿಗೆ ದೂರು ನೀಡಿದ್ದು, “ತನ್ನ ಸಹೋದರ ಹಾಗೂ ಗೆಳೆಯನೊಡನೆ ಸೇರಿಕೊಂಡು ಬಣ್ಣ ಬಣ್ಣದ ಪಾರಿವಾಳಗಳನ್ನು ಸಾಕುವ ಹವ್ಯಾಸದೊಂದಿಗೆ ಸುರಕ್ಷಿತವಾಗಿ ಮನೆಯ ಸ್ಲ್ಯಾಬ್ ಛಾವಣಿಯಲ್ಲಿ ಗೂಡಿನಲ್ಲಿರಿಸಲಾಗಿತ್ತು. ಇದನ್ನು ಸ್ಥಳೀಯ ನಿವಾಸಿ ಪಿಂಕಿ ಯಾನೆ ಅಭಿಜಿತ್ ಎಂಬಾತ ಕದ್ದೊಯ್ದಿದ್ದಾನೆಂದೂ, ತಮ್ಮ ಪ್ರೀತಿಯ ಪರಿವಾಳಗಳನ್ನು ನಮಗೆ ಮರಳಿ ಒದಗಿಸಬೇಕೆಂದು” ದೂರಿನಲ್ಲಿ ವಿನಂತಿಸಿದ್ದಾರೆ.

ಪಾರಿವಾಳಗಳನ್ನು ಕದ್ದೊಯ್ದ ಅಭಿಜಿತ್ ಮನೆಯಂಗಳದಲ್ಲಿ ಇರಿಸಲಾಗಿದ್ದ ತೆಂಗಿನ ಕಾಯಿಗಳನ್ನು ಹಾಗೂ ನೆರೆ ಮನೆಯ ರವಿ ಎಂಬವರ ಮನೆ ಅಂಗಳದಲ್ಲಿ ಇರಿಸಲಾಗಿದ್ದ ಅಡಕೆಯನ್ನು ಕದ್ದೊಯ್ದಿದ್ದು ಈ ಕಳ್ಳನಿಂದ ನಮಗೆ ರಕ್ಷಣೆ ಒದಗಿಸಬೇಕೆಂದು ಪೊಲೀಸ್ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here