ಸೆ.30: ಬೆಳ್ಳಾರೆ ಸ್ನೇಹಾ ಇಲೆಕ್ಟ್ರಿಕಲ್ಸ್ ನಲ್ಲಿ ಆಯುಧ ಪೂಜೆ

0

ಬೆಳ್ಳಾರೆ ಮೇಲಿನ ಪೇಟೆಯ ಮಸೀದಿ ಕಾಂಪ್ಲೆಕ್ಸ್ ನಲ್ಲಿರುವ ಸ್ನೇಹಾ ಇಲೆಕ್ಟ್ರಿಕಲ್ಸ್, ಶ್ರೇಯಾ ಎಂಟರ್ಪ್ರೈಸಸ್, ಅಭಿಜ್ಞಾನ ಎಂಟರ್ಪ್ರೈಸಸ್ ಮತ್ತು ಸವಣೂರಿನ ಬಸದಿ ಕಾಂಪ್ಲೆಕ್ಸ್ ನಲ್ಲಿರುವ ಸ್ನೇಹಾ ಇಲೆಕ್ಟ್ರಿಕಲ್ಸ್ ನಲ್ಲಿ ಆಯುಧಪೂಜೆ ಸೆ. 30ರಂದು ಬ್ರಹ್ಮಶ್ರೀ ವೇ.ಮೂ. ಕುಂಟಾರು ವಾಸುದೇವ ತಂತ್ರಿ ಹಾಗೂ ಬ್ರಹ್ಮಶ್ರೀ ವೇ.ಮೂ. ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ಪೂ. 10.30ಕ್ಕೆ ನಡೆಯಲಿದೆ. ಈ ಶುಭ ಸಂದರ್ಭದಲ್ಲಿ ಸ್ನೇಹಾ ಇಲೆಕ್ಟ್ರಿಕಲ್ಸ್ 24ನೇ ವರ್ಷಕ್ಕೆ ಮತ್ತು ಶ್ರೇಯಾ ಎಂಟರ್ಪ್ರೈಸ್ 18ನೇ ವರ್ಷಕ್ಕೆ ಪಾದಾರ್ಪಣೆ ಮಾಡಲಿದೆ. ಸ್ನೇಹಾ ಇಲೆಕ್ಟ್ರಿಕಲ್ಸ್ ನಲ್ಲಿ ವಿವಿಧ ಬ್ರಾಂಡೆಡ್ ಕಂಪನಿಗಳ ಪಿ.ವಿ.ಸಿ. ಪೈಪ್ಸ್, ಫಿಟ್ಟಿಂಗ್ಸ್, ಸಬ್ ಮರ್ಸಿಬಲ್, ಮೋನೋ ಪಂಪ್ ಸೆಟ್‌ಗಳು, ಮೋಟಾರ್ ರಿವೈಂಡಿಂಗ್, ಇಲೆಕ್ಟ್ರಿಕಲ್ ಸಾಮಾಗ್ರಿಗಳು ದೊರೆಯುತ್ತದೆ. ಶ್ರೇಯಾ ಎಂಟರ್ಪ್ರೈಸಸ್ ನಲ್ಲಿ ಹಾರ್ಡ್ ವೇರ್ ಸಾಮಾಗ್ರಿಗಳು ಮತ್ತು ಅಭಿಜ್ಞಾನ ಎಂಟರ್ಪ್ರೈಸಸ್ ನಲ್ಲಿ ಪೈಂಟ್ಸ್ ಮತ್ತಿತರ ಸಾಮಾಗ್ರಿಗಳು ದೊರೆಯುತ್ತದೆ ಎಂದು ಮಾಲಕರು ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here