ಹರಿಹರ ಪಲ್ಲತಡ್ಕ:  ಮದ್ಯ ಮಾರಾಟ ಮುಕ್ತ ಗ್ರಾಮ ಹೋರಾಟ ಸಮಿತಿ ಸಭೆ

0

 

ಸೆ.29ರಂದು ಹರಿಹರದಲ್ಲಿ ಮದ್ಯ ಮಾರಾಟ ಮುಕ್ತಕ್ಕಾಗಿ ಬೃಹತ್ ಪ್ರತಿಭಟನೆ

ಹರಿಹರ ಪಲ್ಲತಡ್ಕದ ಮಧ್ಯ ಮುಕ್ತ ಹೋರಾಟ ಸಮಿತಿ ವತಿಯಿಂದ
ಹರಿಹರೇಶ್ವರ ದೇವಸ್ಥಾನದಲ್ಲಿ ಸೆ.24 ರಂದು ಸಭೆ ನಡೆಸಲಾಗಿದ್ದು. ಹರಿಹರದಲ್ಲಿ ಸೆ.29ರಂದು ಮದ್ಯ ಮಾರಾಟ ಮುಕ್ತಕ್ಕಾಗಿ ಬೃಹತ್ ಪ್ರತಿಭಟನೆ ನಡೆಸಲು ನಿರ್ದರಿಸುವುದಾಗಿ ತಿಳಿದುಬಂದಿದೆ.


ಹರಿಹರದಲ್ಲಿ ಆರಂಭವಾಗುತ್ತದೆ ಎನ್ನಲಾದ ಬಾರ್ ಅನ್ನು ತಡೆಯುವ ಉದ್ದೇಶದಿಂದ ಮದ್ಯ ಮುಕ್ತ ಹೋರಾಟ ಸಮಿತಿ ಸಭೆ ನಡೆಸಿತ್ತು. ಈ ಸಭೆಯ ನಿರ್ಣಯದಂತೆ ಹರಿಹರದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಸುವುದಾಗಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿವಿಧ ಸಮಿತಿಗಳು ಹಾಗೂ ಸ್ಥಳೀಯ ಸಂಘಟನೆಗಳು ಈ ಹೋರಾಟದಲ್ಲಿ ಸೇರಿಕೊಳ್ಳಲಿವೆ ಎಂದು ತಿಳಿದು ಬಂದಿದೆ. ಸಭೆಯಲ್ಲಿ ಮಧ್ಯ ಮುಕ್ತ ಹೋರಾಟ ಸಮಿತಿಯ ಅಧ್ಯಕ್ಷ ಹಿಮ್ಮತ್ ಕೆ ಸಿ, ಸಮಿತಿಯ ಸದಸ್ಯರುಗಳಾದ ಪ್ರದೀಪ್ ಕುಮಾರ್ ಕೆ ಎಲ್, ಸತೀಶ್ ಟಿ ಎನ್, ಅನಂತ ಅಂಙಣ, ಮಧುಸೂದನ ಕಾಪಿಕಾಡು, ಸೀತಾರಾಮ ಹರಿಹರ, ಮೋಹನದಾಸ ದೊಡ್ಡಕಜೆ, ಬಾಲಸುಬ್ರಹ್ಮಣ್ಯ, ಹರ್ಷ ಪಾಲ್ತಾಡು, ಬಿಂದು ಪಿ, ಜಯಂತ ಬಾಳುಗೋಡು, ಪದ್ಮಾವತಿ ಕಲ್ಲೇಮಠ, ಶಿಲ್ಪ ಕೊತ್ನಡ್ಕ, ವಿಜಯ್ ಅಂಙಣ ಮತ್ತಿತರರು ಉಪಸ್ಥಿತರಿದ್ದರು .

LEAVE A REPLY

Please enter your comment!
Please enter your name here