ಅಡ್ತಲೆ : ನಾಗರಿಕ ಹಿತ ರಕ್ಷಣಾ ವೇದಿಕೆಯ ವಾರ್ಷಿಕ ಮಹಾಸಭೆ

0

ನೂತನ ಅಧ್ಯಕ್ಷರಾಗಿ ಹರಿಪ್ರಸಾದ್ ಅಡ್ತಲೆ ಪುನರಾಯ್ಕೆ

ಅಡ್ತಲೆ ನಾಗರಿಕ ಹಿತ ರಕ್ಷಣಾ ವೇದಿಕೆಯ ವಾರ್ಷಿಕ ಮಹಾಸಭೆ ಸೆ.25 ರಂದು ಅಡ್ತಲೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ವೇದಿಕೆಯ ಅಧ್ಯಕ್ಷ ಹರಿಪ್ರಸಾದ್ ಅಡ್ತಲೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯ ಪ್ರಧಾನ ಕಾರ್ಯದರ್ಶಿ ಸ್ವಾತಿಕ್ ಕಿರ್ಲಾಯ ವಾರ್ಷಿಕ ವರದಿ ಮಂಡಿಸಿದರು. ವೇದಿಕೆ ಖಜಾಂಜಿ ಓಂ ಪ್ರಸಾದ್ ಪಿಂಡಿಮನೆ ಲೆಕ್ಕಪತ್ರವನ್ನು ಮಂಡಿಸಿದರು. ಸಭೆಯಲ್ಲಿ ಗೌರವ ಸಲಹೆಗಾರರು ಮುಂದಿನ ಹೋರಾಟದ ಕುರಿತು ಮಾತನಾಡಿದರು.

ಈ ಸಂದರ್ಭದಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಹರಿಪ್ರಸಾದ್ ಅಡ್ತಲೆ ಪುನರಾಯ್ಕೆಯಾದರು. ಉಪಾಧ್ಯಕ್ಷರಾಗಿ ವಿನಯ್ ಬೆದ್ರುಪಣೆ, ಲೋಹಿತ್ ಮೇಲಡ್ತಲೆ, ಸ್ವಾತಿಕ್ ಕಿರ್ಲಾಯ, ಪ್ರಧಾನ ಕಾರ್ಯದರ್ಶಿಯಾಗಿ ರಂಜಿತ್ ಅಡ್ತಲೆ, ಜತೆ ಕಾರ್ಯದರ್ಶಿಯಾಗಿ ಮೋಹನ್ ಕಿನಾಲ ಅಡ್ತಲೆ, ಖಜಾಂಜಿಯಾಗಿ ಓಂ ಪ್ರಸಾದ್ ಪಿಂಡಿಮನೆ ಆಯ್ಕೆಯಾದರು.


ಸದಸ್ಯರುಗಳಾಗಿ ಕೇಶವ ಮೇಲಡ್ತಲೆ, ದಯಾನಂದ ಬೆದ್ರುಪಣೆ, ಮೋಹನ್ ಪಂಜದ ಬೈಲು ಅಡ್ತಲೆ, ಸುನಿಲ್ ಪಿಂಡಿಮನೆ, ಗಿರೀಶ್ ಅಡ್ಕ, ರಕ್ಷಿತ್ ಚೀಮಾಡು, ರತನ್ ಕಿರ್ಲಾಯ, ತ್ಯಾಗರಾಜ್ ಜೋಡಿಪಣೆ, ದಾಮೋದರ ಪೂಜಾರಿ ಮನೆ, ಪುರುಷೋತ್ತಮ ಬೆದ್ರುಪಣೆ, ಅಶೋಕ ಬೆದ್ರುಪಣೆ, ಸಂತೋಷ್ ಪಿಂಡಿಮನೆ, ಸುನಿಲ್ ಆಡ್ತಲೆ, ಲಿಂಗಪ್ಪ ಪಡ್ಡಂಬೈಲು, ಹರೀಶ್ ಅಡ್ತಲೆ, ದುರ್ಗಾ ಪ್ರಸಾದ್ ಮೇಲಡ್ತಲೆ ಹಾಗೂ ನೂತನ ಮಹಿಳಾ ಸದಸ್ಯರಾಗಿ ಶ್ರೀಮತಿ ರೇಖಾ ಪಾನತ್ತಿಲ, ಶ್ರೀಮತಿ ಶ್ಯಾಮಲ ಅಡ್ತಲೆ, ಕುಮಾರಿ ಸುಶ್ಮಿತಾ ಬೆದ್ರುಪಣೆ, ಶ್ರೀಮತಿ ಸೌಮ್ಯಾ ಮೇಲಡ್ತಲೆ,ಶ್ರೀಮತಿ ಹರ್ಷಿತಾ ಬೆದ್ರುಪಣೆ, ಶ್ರೀಮತಿ ವೀಣಾ ಅಡ್ತಲೆ, ಶ್ರೀಮತಿ ಬೇಬಿ ಕಲ್ಲುಗದ್ದೆ, ಶ್ರೀಮತಿ ವಿದ್ಯಾ ಬೆದ್ರುಪಣೆ ಆಯ್ಕೆಯಾದರು.


ಗೌರವ ಸಲಹೆಗಾರರಾಗಿ ಭವಾನಿ ಶಂಕರ ಅಡ್ತಲೆ, ಶಶಿಕುಮಾರ್ ಉಳುವಾರು ಅಡ್ತಲೆ, ಹರಿಶ್ಚಂದ್ರ ಮೇಲಡ್ತಲೆ, ಗೋಪಾಲಕೃಷ್ಣ ಪಿಂಡಿಮನೆ, ಶ್ರೀಧರ ನಾರ್ಕೋಡು ಕಿರ್ಲಾಯ, ಚಂದ್ರಶೇಖರ ಚೋಡಿಪಣೆ, ಗಣೇಶ್ ಮಾಸ್ತರ್ ಅಡ್ತಲೆ, ಚಿದಾನಂದ ಮಾಸ್ತರ್ ಅಡ್ತಲೆ ಇವರು ಆಯ್ಕೆಯಾದರು.
ವೇದಿಕೆಯ ಜತೆ ಕಾರ್ಯದರ್ಶಿ ರಂಜಿತ್ ಅಡ್ತಲೆ ವಂದಿಸಿದರು.

LEAVE A REPLY

Please enter your comment!
Please enter your name here