ಕನಕಮಜಲು : ಕೋವಿ ತಪಾಸಣಾ ಕಾರ್ಯಕ್ರಮ

0

ಕನಕಮಜಲು ಯುವಜನ ವಿಕಾಸ ಕೇಂದ್ರ ಯುವಕ ಮಂಡಲದ ಆಶ್ರಯದಲ್ಲಿ ಕೋವಿ ತಪಾಸಣಾ ಕಾರ್ಯಕ್ರಮವು ಸುಳ್ಯ ಠಾಣಾ ಆರಕ್ಷಕರ ಸಮ್ಮುಖದಲ್ಲಿ ಸೆ. 25ರಂದು ಶ್ರೀ ಆತ್ಮಾರಾಮ ಭಜನಾ ಮಂದಿರ ಸಭಾಭವನದಲ್ಲಿ ನಡೆಯಿತು.


ಈ ಸಂಧರ್ಭದಲ್ಲಿ ಯುವಕ ಮಂಡಲ ಅಧ್ಯಕ್ಷ ಚಂದ್ರಶೇಖರ್ ನೆಡಿಲು, ಕನಕಮಜಲು ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಧರ್ ಕುತ್ಯಾಳ, ಆರಕ್ಷಕ ಠಾಣಾ ಎ ಎಸ್ ಐ ತಾರಾನಾಥ, ಕನಕಮಜಲು ಗ್ರಾಮ ಗುಸ್ತು ಭೇಟಿ ಪೋಲೀಸ್ ಜಾವೇದ್ ಪಟೇಲ್, ಕಾರ್ಯಕ್ರಮ ಸಂಯೋಜಕ ಕೀರ್ತಿ ಕನ್ನಡ್ಕ ಕಾರ್ಯದರ್ಶಿ ಅಶ್ವಥ್ ಅಡ್ಕಾರ್ ಉಪಸ್ಥಿತರಿದ್ದರು. ಈ ಸಂಧರ್ಭದಲ್ಲಿ ಕನಕಮಜಲು ಗ್ರಾಮದಲ್ಲಿ ಕೋವಿ ಹೊಂದಿರುವ ಸುಮಾರು 41 ಫಲಾನುಭವಿಗಳು ಈ ಸದುಪಯೋಗವನ್ನು ಪಡೆದುಕೊಂಡರು.

LEAVE A REPLY

Please enter your comment!
Please enter your name here