ಮರ್ಕಂಜ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ

0

ಸರಕಾರಿ ಪ್ರೌಢಶಾಲೆ ಮರ್ಕಂಜ ಇಲ್ಲಿಯ ವಿದ್ಯಾರ್ಥಿಗಳಿಗೆ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ ಸೆ.27ರಂದು ನಡೆಯಿತು. ದುಶ್ಚಟ ದುರಭ್ಯಾಸ ವಿರುದ್ಧ ಮಕ್ಕಳಲ್ಲಿ ಜಾಗೃತಿ ಮೂಡಿಸಲಾಯಿತು. ಅಪರಾಧ ಚಟುವಟಿಕೆಯಲ್ಲಿ ಭಾಗಿಯಾದಲ್ಲಿ ಸಿಗುವ ಶಿಕ್ಷೆಯ ಪ್ರಮಾಣ ಬಗ್ಗೆ, ಸ್ವಸ್ಥ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿಗಳ ಜವಾಬ್ದಾರಿ ಬಗ್ಗೆ ಹಿರಿಯ ನ್ಯಾಯವಾದಿಗಳಾದ ಎಂ ವೆಂಕಪ್ಪ ಗೌಡ ಮಾಹಿತಿ ಮಾರ್ಗದರ್ಶನ ನೀಡಿದರು.

ಸಂಪಾಜೆ ವಲಯ ಮೇಲ್ವಿಚಾರಕರಾದ ಸುಧೀರ್ ನೆಕ್ರಾಜೆ ಪ್ರಮಾಣ ವಚನ ಬೋಧಿಸಿದರು. ಈ ಸಂದರ್ಭ ಮುಖ್ಯೋಪಾಧ್ಯಯರಾದ ಶ್ರೀಮತಿ ವೀಣಾ, ಸೇವಾಪ್ರತಿನಿಧಿ ರೋಹಿಣಿ, ಒಕ್ಕೂಟ ಅಧ್ಯಕ್ಷರು ಗೋಪಾಲಕೃಷ್ಣ, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಶಿಕ್ಷಕರು, ಒಕ್ಕೂಟ ಪದಾಧಿಕಾರಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here