ಮಾನ್ಯ ಪಲ್ಲೋಡಿ ಯೋಗಾಸನದಲ್ಲಿ ನೊಬೆಲ್ ವಿಶ್ವ ದಾಖಲೆ

0

 

ದಾವಣಗೆರೆಯ ಸಪ್ತಋಷಿ ಯೋಗಾಸನ ಕ್ರೀಡಾ ಅಕಾಡೆಮಿ ವಾರ್ಷಿಕೋತ್ಸವದಂದು ನಡೆದ ಯೋಗಾಸನ ಸ್ಪರ್ಧೆಯಲ್ಲಿ ಭಾಗವಹಿಸಿದ್ದ 80 ವಿದ್ಯಾರ್ಥಿಗಳಲ್ಲಿ
ಪಂಜ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ 4ನೇ ತರಗತಿ ವಿದ್ಯಾರ್ಥಿ ಮಾನ್ಯ ಪಲ್ಲೋಡಿ ವೃಕ್ಷಾಸನ, ಉತ್ಕಟಾಸನ, ಧನುರ್ ಆಸನ, ಸರ್ವಾಂಗಾಸನದಲ್ಲಿ ನಿರಂತರ 120 ಸೆಕೆಂಡುಗಳ ಕಾಲ ಯೋಗ ಪ್ರದರ್ಶಿಸಿ ನೊಬೆಲ್ ವರ್ಲ್ಡ್ ರೆಕಾರ್ಡ್ ಬುಕ್ ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾಳೆ.
ನಿರಂತರ ಯೋಗ ಕೇಂದ್ರ ಪಂಜ ಇದರ ಯೋಗ ಶಿಕ್ಷಕ ಶರತ್ ಮರ್ಗಿಲಡ್ಕ ರವರ ಶಿಷ್ಯೆಯಾಗಿರುವ ,ಇವಳು ಪಂಜದ ಪಲ್ಲೋಡಿ ಚಂದ್ರಶೇಖರ ಮತ್ತು ಶ್ರೀಮತಿ ಲಿಖಿತಾ ರವರ ಪುತ್ರಿ.

LEAVE A REPLY

Please enter your comment!
Please enter your name here