ನವ ರಾತ್ರಿಗೆ ನವ ಬಣ್ಣಗಳ ಮೆರುಗು: ಇಂದಿನ ಬಣ್ಣ ನೀಲಿ

0

ನವರಾತ್ರಿ ಸಂಭ್ರಮ. ಭಕ್ತಿ, ಶ್ರದ್ಧೆ, ಸಡಗರಗಳಿಂದ ನವರಾತ್ರಿಯನ್ನು ಕೊಂಡಾಡಲಾಗುತ್ತದೆ. ಸುದ್ದಿ ವೆಬ್‌ಸೈಟ್ ಈ ಬಾರಿಯೂ ನವರಾತ್ರಿಯನ್ನು ನವ ಬಣ್ಣಗಳ ಮೆರುಗಿನೊಂದಿಗೆ ಆಚರಿಸಲು ಸಿದ್ಧವಾಗಿದೆ.

9 ದಿನಗಳಲ್ಲಿ ಆಯಾ ದಿನದ ಬಣ್ಣಗಳಿಗೆ ಅನುಗುಣವಾಗಿ ಬಣ್ಣಗಳ ವಸ್ತ್ರ ಧರಿಸಿ ಸಂಭ್ರಮಿಸಿ ಇದರ ಆಕರ್ಷಕ ಪೋಟೋ ತೆಗೆದು ನಮಗೆ ಕಳುಹಿಸುವಂತೆ ಕೋರಲಾಗಿತ್ತು. ಬಂದ ಪೊಟೋಗಳಲ್ಲಿ ನಮ್ಮ ಸೂಚನೆಯನ್ನು ಪಾಲಿಸಿದ ಆಯ್ದ ಪೋಟೋಗಳನ್ನು ಇಲ್ಲಿ ಪ್ರಕಟಿಸಲಾಗಿದೆ.

ಫೊಟೋ ಕಳುಹಿಸುವವರು ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಆಯಾ ದಿನ ಪ್ರಕಟಿಸಲಾದ ಬಣ್ಣಗಳ ವಸ್ತ್ರಗಳನ್ನು ಧರಿಸಿ ಗುಂಪಿನ ಪೋಟೋ ಕಳುಹಿಸಬೇಕು. ಒಂದು ಪೋಟೋದಲ್ಲಿ ಕನಿಷ್ಠ ಮೂರು ಮಂದಿ ಇರಲೇ ಬೇಕು. ಪೋಟೋಗಳನ್ನು ಆಯಾ ದಿನ ಮಧ್ಯಾಹ್ನ ೧೨ ಗಂಟೆಯ ಒಳಗೆ ಕಳುಹಿಸಲೇಬೇಕು. ಆ ಬಳಿಕ ಬಂದವುಗಳನ್ನು ಗಮನಿಸಲಾಗುವುದಿಲ್ಲ. ಪೋಟೋದೊಂದಿಗೆ ಕನ್ನಡದಲ್ಲಿ ಟೈಪ್ ಮಾಡಿ, ಹೆಸರು, ವಿಳಾಸ, ಸಂಪರ್ಕ ಸಂಖ್ಯೆ ನಮೂದಿಸಬೇಕು.

ಒಬ್ಬರು ಒಂದು ಪೋಟೋವನ್ನಷ್ಟೇ ಕಳುಹಿಸಬೇಕು. ಒಂದಕ್ಕಿಂತ ಹೆಚ್ಚು ಪೋಟೋಗಳಿದ್ದರೆ ಗಮನಿಸಲಾಗುವುದಿಲ್ಲ. ಪೋಟೋ ಕಳುಹಿಸಲು ಪ್ರಾಯ ಭೇದವಿಲ್ಲ. ಮಹಿಳೆಯರು, ಪುರುಷರು ಪೋಟೋ ಕಳುಹಿಸಬಹುದು.ನವ ಬಣ್ಣಗಳ ಮೆರುಗಿಗೆಂದೇ ಪ್ರತ್ಯೇಕವಾಗಿ ಫೊಟೋ ತೆಗೆದು ಕಳುಹಿಸಿ. ಎಂದೋ ತೆಗೆದ ಫೊಟೋಗಳನ್ನು ಕಳುಹಿಸಬೇಡಿ. ಸೆಲ್ಫಿ ಪೊಟೋಗಳನ್ನೂ ಪರಿಗಣಿಸಲಾಗುವುದಿಲ್ಲ. ಫೊಟೋಗಳಲ್ಲಿರುವ ಎಲ್ಲರೂ ಕೂಡಾ ಆಯಾ ದಿನದ ಬಣ್ಣಗಳನ್ನು ಪ್ರತಿನಿಧಿಸುವಂತಿರಬೇಕು. ಆದುದರಿಂದ ಮಿಶ್ರ ಬಣ್ಣಗಳಿರುವ ಫೊಟೋಗಳನ್ನು ಕಳುಹಿಸಬೇಡಿ.

LEAVE A REPLY

Please enter your comment!
Please enter your name here