ರಬ್ಬರ್ ಕೃಷಿ ಸಹಾಯಧನಕ್ಕಾಗಿ ಅರ್ಜಿ ಅಹ್ವಾನ

0

 

ರಬ್ಬರ್ ಕೃಷಿ ಅಭಿವೃದ್ಧಿ ಯೋಜನೆ ಅಡಿಯಲ್ಲಿ ‘ರಬ್ಬರ್ ಮರುನಾಟಿ ಹಾಗೂ ಹೊಸ ನಾಟಿ ಸಹಾಯ ಧನಕ್ಕಾಗಿ ರಬ್ಬರ್ ಮಂಡಳಿಯಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 2018, 2019, 2020 ಮತ್ತು 2021 ರಲ್ಲಿ ಕೃಷಿ ಮಾಡಿರುವ ರಬ್ಬರ್ ಕೃಷಿಕರು ಸಹಾಯಧನ ಪಡೆಯಲು ಅರ್ಜಿಗಳನ್ನು ಸಲ್ಲಿಸಬಹುದು ಅರ್ಜಿಯನ್ನು ಸಲ್ಲಿಸಲು 31.10.2022 ಕೊನೆಯ ದಿನವಾಗಿರುತ್ತದೆ.

ಅರ್ಜಿಯನ್ನು ಸಲ್ಲಿಸುವ ವಿಧಾನ: ಅರ್ಜಿಗಳನ್ನು ರಬ್ಬರ್ ಮಂಡಳಿಯ website:www.rubberboard.orm in ನ ಸರ್ವಿಸ್ ಪ್ಲಸ್ ಪೋರ್ಟಲ್ ನಲ್ಲಿ ಆನೈನ್ ಮೂಲಕ, ಜಾಗದ ಬೌಂಡರಿಯ ವಿವರಗಳನ್ನು ಒಳಗೊಂಡ ಅಂದಾಜು ನಕ್ಷೆ ಕೃಷಿಕರ ಆಧಾರ್ ಲಿಂಕ್ ಹೊಂದಿರುವ ಬ್ಯಾಂಕ್ ಖಾತೆಯ ಪಾಸ್ ಬುಕ್ಕಿನ ಜೆರಾಕ್ಸ್ ಪ್ರತಿ, ಆಧಾರ್ ಪ್ರತಿ ಹಿಡುವಳಿ ಪತ್ರ (ownership document /RTC )ಮತ್ತು ನಾಮಿನೇಷನ್ ಪ್ರತಿ (ಅಗತ್ಯವಿದ್ದಲ್ಲಿ ದಾಖಲೆಗಳನ್ನು ವೆಬ್‌ಸೈಟ್ ನಲ್ಲಿ ಅಪ್ಲೋಡ್ ಮಾಡಬೇಕು, ಅಪ್ಲೋಡ್ ಮಾಡಿದ ನಂತರ ಸ್ಥಳೀಯ ಪ್ರಾದೇಶಿಕ ಕಚೇರಿಗಳಿಗೆ ಸಲ್ಲಿಸಬೇಕು .

ಸಹಾಯಧನ ಪಡೆಯಲು ಅರ್ಹತೆ : ೦1೦ ಹೇಕ್ಟೇರ್ (25 ಸೆಂಟ್ಸ್ ಅಥವಾ 10 ಗುಂಟೆ ) ಯಿಂದ 5 ಹೇಕ್ರರ್ (12.5ಎಕರೆ) ಪ್ರದೇಶದವರೆಗೆ ಕೃಷಿ ಮಾಡಿರುವ ಕೃಷಿಕರು ಸಹಾಯ ಪಡೆಯಲು ಅರ್ಹರಾಗಿರುತ್ತಾರೆ, ಕರ್ನಾಟಕ ರಾಜ್ಯವು ಸೇರಿದಂತೆ ಅಸಾಂಪ್ರದಾಯಕ ರಬ್ಬರ್ ಪ್ರದೇಶ |Nannadtamid aaa) ಮತ್ತು ಈಶಾನ್ಯ ರಾಜ್ಯಗಳಲ್ಲಿ ಒಟ್ಟಾರೆಯಾಗಿ 5 ಹೇಕ್ಟರ್ ವರೆಗೆ ಹೊಸ ನಾಟಿ ಅಥವಾ ಮರುನಾಟಿ ಮಾಡಿರುವ ಕೃಷಿಕರು ಗರಿಷ್ಠ 2 ಹೇಕ್ಟರ್ ರಬ್ಬರ್ ಕೃಷಿಗೆ , ಪ್ರತಿ ಹೇಕ್ಟರಿಗೆ ರೂ.40000/ ದಂತ ಸಹಾಯಧನವನ್ನು ಪಡೆಯಲು ಅಹ್ರರಾಗಿರುತ್ತಾರೆ ಈ ಸಹಾಯಧನವನ್ನು ಒಂದೇ ಕಂತಿನಲ್ಲಿ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಕೃಷಿಕರು ರಬ್ಬರ್ ಮಂಡಳಿ ಪ್ರಾದೇಶಿಕ ಕಚೇರಿಗಳಾದ ಪುತ್ತೂರು (08251-295021).ಮಂಗಳೂರು (0824 2951329), ಶಿವಮೊಗ್ಗ (08182-296118) ಮತ್ತು ಕುಂದಾಪುರ (08254-200254) ಕಛೇರಿಗಳಿಗೆ ಸಂಪರ್ಕಿಸಬಹುದು

LEAVE A REPLY

Please enter your comment!
Please enter your name here