ವಿಟ್ಲ ಘಟಕದ ಗೃಹರಕ್ಷಕರಾಗಿದ್ದ ದಿ. ಪ್ರಕಾಶ್ ಮನೆಗೆ ಡಾ. ಮುರಲೀ ಮೋಹನ್ ಚೂಂತಾರು ಭೇಟಿ

0

ಪುತ್ತೂರು: ಕರ್ತವ್ಯದ ವೇಳೆ ಅಪಘಾತಗೊಂದು ಮೃತಪಟ್ಟ ವಿಟ್ಲ ಘಟಕದ ಗೃಹರಕ್ಷಕರಾಗಿದ್ದ ದಿ. ಪ್ರಕಾಶ್ ಅವರ ಮನೆಗೆ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ. ಮುರಲೀ ಮೋಹನ್ ಚೂಂತಾರು ಅವರು ಭೇಟಿ ನೀಡಿ, ಅವರ ಕುಟುಂಬದವರಿಗೆ ಸಾಂತ್ವಾನ ಹೇಳಿದರು.

ಸರಕಾರದಿಂದ ಸಿಗುವ ಸೌಲಭ್ಯವನ್ನು ದೊರಕಿಸಿ ಕೊಡುವುದಾಗಿ ಆಶ್ವಾಸನೆ ನೀಡಿದರು. ಈ ಸಂದರ್ಭದಲ್ಲಿ ವಿಟ್ಲ ಘಟಕದ ಗೃಹರಕ್ಷಕರು ಸಂಗ್ರಹ ಮಾಡಿದ ಹಣವನ್ನು ದಿ. ಪ್ರಕಾಶ್ ಅವರ ಕುಟುಂಬಕ್ಕೆ ನೀಡಲಾಯಿತು. ಈ ಸಂದರ್ಭದಲ್ಲಿ ವಿಟ್ಲ ಘಟಕದ ಪ್ರಭಾರ ಘಟಕಾಧಿಕಾರಿ ಸಂಜೀವ, ವಿಟ್ಲ ಘಟಕದ ಗೃಹರಕ್ಷಕ ಗೃಹರಕ್ಷಕಿಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here