`ಭ್ರಷ್ಟಾಚಾರ ಗಮನಕ್ಕೆ ಬಂದರೆ ಕ್ರಮ’ – ಭ್ರಷ್ಟಾಚಾರ ವಿರುದ್ಧದ ಫಲಕ ಸ್ವೀಕರಿಸಿದ ಎಸಿ ಗಿರೀಶ್ ನಂದನ್

0

ಪುತ್ತೂರು: ಇತ್ತೀಚೆಗೆ ವಿಶ್ರಾಂತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅನಾವರಣಗೊಳಿಸಿದ್ದ ಸುದ್ದಿ ಜನಾಂದೋಲನ ವೇದಿಕೆಯ, ಲಂಚ ಭ್ರಷ್ಟಾಚಾರ ವಿರುದ್ಧದ ಆಂದೋಲನದ -ಲಕವನ್ನು ಸಹಾಯಕ ಆಯುಕ್ತ ಗಿರೀಶ್ ನಂದನ್ ಅವರಿಗೆ ನೀಡಲಾಯಿತು.

ಭ್ರಷ್ಟಾಚಾರ ವಿರುದ್ಧದ ಆಂದೋಲನದ ಫಲಕವನ್ನು ಸಹಾಯಕ ಆಯುಕ್ತರಿಗೆ ನೀಡಲಾಯಿತು.

ಫಲಕ ಸ್ವೀಕರಿಸಿ ಮಾತನಾಡಿದ ಸಹಾಯಕ ಆಯುಕ್ತ ಗಿರೀಶ್ ನಂದನ್ ಅವರು ಭ್ರಷ್ಟಾಚಾರ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಸರಕಾರ ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿದೆ. ಕಚೇರಿಗಳಲ್ಲಿ ಸಿಸಿಟಿವಿ ಅಳವಡಿಕೆ ಮಾಡಲಾಗಿದೆ. ಆರ್‌ಟಿಸಿ ಮೊದಲಾದ ದಾಖಲೆಗಳನ್ನು ಗಣಕೀಕರಣಗೊಳಿಸಲಾಗಿದೆ. ಹಲವು ಸೌಲಭ್ಯಗಳು ಆನ್‌ಲೈನ್‌ನಲ್ಲೇ ದೊರಕುತ್ತವೆ. ಹಿಂದೆ ಉಪನೋಂದಣಿ ಇಲಾಖೆ ಸೇರಿದಂತೆ ಹಲವು ದಾಖಲೆಗಳು ಮ್ಯಾನುವಲ್ ಆಗಿತ್ತು. ಇಂದು ಗಣಕೀಕರಣಗೊಂಡಿದ್ದು, ನಾಗರಿಕರಿಗೆ ಸೇವೆ ನೀಡಲು ಸುಲಭವಾಗಿದೆ. ಕಡತ ವಿಲೇವಾರಿಗೆ ವೇಗ ನೀಡಲು ನಿರ್ದೇಶನ ನೀಡಿದ್ದೇನೆ. ಭ್ರಷ್ಟಾಚಾರ ಪ್ರಕರಣ ಗಮನಕ್ಕೆ ಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

LEAVE A REPLY

Please enter your comment!
Please enter your name here