ವಿದ್ಯುತ್ ದುರಸ್ಥಿ ಕಾರ್ಯದ ಸಮಯ ಬದಲಾವಣೆ ಮಾಡುವಂತೆ ಪುತ್ತೂರು ವಾಣಿಜ್ಯ ಕೈಗಾರಿಕಾ ಸಂಘದಿಂದ ಮೆಸ್ಕಾಂಗೆ ಮನವಿ

0

ಪುತ್ತೂರು : ವಿದ್ಯುತ್ ದುರಸ್ಥಿ ಕಾರ್ಯನಿಮಿತ್ತ ವಿದ್ಯುತ್ ನಿಲುಗಡೆ ಸಮಯವನ್ನು ಬೆಳಿಗ್ಗೆ 9ರ ಬದಲು 10ರ ಬಳಿಕ ಸ್ಥಗಿತಗೊಳಿಸುವಂತೆ ಸಮಯ ಬದಲಾವಣೆ ಮಾಡುವಂತೆ ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಪುತ್ತೂರು ಮೆಸ್ಕಾಂ ಸಹಾಯಕ ಅಭಿಯಂತರರವರಿಗೆ ಮನವಿ ಸಲ್ಲಿಸಿದ್ದಾರೆ.

ಬೆಳಿಗ್ಗೆ 9ಗಂಟೆಯ ಸಮಯ ಅಂಗಡಿಗಳ ಬಾಗಿಲು ತೆರೆಯುವ, ಶಾಲೆಗೆ ಹಾಗೂ ಕಛೇರಿಗೆ ಹೊರಡುವ ಸಮಯವಾಗಿದೆ. ಅವಶ್ಯಕ ಇತರ ಕೆಲಸ ಮಾಡಲು ಸಂಜೆಯ ತನಕ ಕಾಯಬೇಕಾಗುತ್ತದೆ. ಆದುದರಿಂದ ತಾವು ಸಮಯ ಬದಲಾವಣೆ ಮಾಡಿ ಬೆಳಿಗ್ಗೆ 10 ರಬಳಿಕ ದುರಸ್ಥಿ ಕಾರ್ಯ ಮುಂದುವರೆಸುವಂತೆ ಮನವಿಯಲ್ಲಿ ತಿಳಿಸಲಾಗಿದೆ. ಮನವಿ ನೀಡುವ ಸಂದರ್ಭದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪ್ರಧಾನ ಕಾರ್ಯದರ್ಶಿ ಅರವಿಂದ ಭಗವಾನ್, ಉಲ್ಲಾಸ್ ಪೈ ಉಪಸ್ಥಿತರಿದ್ದರು.

ಮನವಿ ಸ್ವೀಕರಿಸಿದ ಮೆಸ್ಕಾಂನ ಎಕ್ಸಿಕ್ಯೂಟಿವ್ ಇಂಜಿನಿಯರ್ ನರಸಿಂಹರವರು ಸ್ಪಂದಿಸಿ ಮಂಗಳೂರು ಮೆಸ್ಕಾಂ ಕಛೇರಿಗೆ ಇಮೇಲ್ ಮಾಡಿ ಸಮಯ ಬದಲಾವಣೆಗೆ ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here