ಮುಳಿಯ ಗಾನರಥ – ಕರೋಕೆ ಹಾಡುಗಳ ಗಾಯನ ಸ್ಪರ್ಧೆ 5ನೇ ಸುತ್ತಿನ ಆಡಿಷನ್ ಫೆ.19ರಂದು ಈಶ್ವರಮಂಗಲದಲ್ಲಿ

0

ಪುತ್ತೂರು : ಅಮೃತ ಮಹೋತ್ಸವ ಸಂಭ್ರಮದಲ್ಲಿರುವ ನಾಡಿನ ಹೆಸರಾಂತ ಚಿನ್ನಾಭರಣಗಳ ಮಳಿಗೆ ಮುಳಿಯ ಜ್ಯುವೆಲ್ಸ್ ಕಲೆ-ಸಂಸ್ಕೃತಿಗಳಿಗೆ ಬೆಂಬಲ ನೀಡುವ ಮತ್ತು ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ನೀಡುವ ಸಲುವಾಗಿ ಆಯೋಜಿಸುತ್ತಿರುವ “ಮುಳಿಯ ಗಾನರಥ” ಕರೋಕೆ ಹಾಡುಗಳ ಗಾಯನ ಸರ್ಧೆಯ ಐದನೇ ಆಡಿಷನ್ ರೌಂಡ್  ಫೆ.19ರಂದು ಈಶ್ವರಮಂಗಲದಲ್ಲಿ ನಡೆಯಲಿದೆ.

ಈಶ್ವರಮಂಗಲದ ಆರೋಗ್ಯವರ್ಧಿನೀ ಚಿಕಿತ್ಸಾಲಯದ ಆವರಣದಲ್ಲಿ ಸಂಜೆ 4.30ಕ್ಕೆ ಈ ಕಾರ್ಯಕ್ರಮ ನಡೆಯಲಿದೆ. 12 ರಿಂದ 21 ವರ್ಷದೊಳಗಿನವರು ಮೊದಲ ವಿಭಾಗದಲ್ಲಿ ಹಾಗೂ 21 ವರ್ಷಕ್ಕೆ ಮೇಲ್ಪಟ್ಟವರು ಸಾರ್ವಜನಿಕರ ವಿಭಾಗದಲ್ಲಿ ಸ್ಪರ್ಧಿಸಬಹುದಾಗಿದೆ. ಕನ್ನಡ, ಹಿಂದಿ ತುಳು ಹಾಗೂ ಮಲಯಾಳಂ ಸೇರಿದಂತೆ 4 ಭಾಷೆಗಳ ಹಾಡುಗಳಿಗೆ ಅವಕಾಶ ಕಲ್ಪಿಸಲಾಗಿದೆ. ಆಡಿಷನ್ ನೋಂದಾವಣೆಗಾಗಿ 9743175916ಗೆ ಕರೆ ಮಾಡಬಹುದಾಗಿದೆ. ಈ ಕಾರ್ಯಕ್ರಮವನ್ನು ಮುಳಿಯ ಜ್ಯುವೆಲ್ಸ್‌ನ ಫೇಸ್‌ಬುಕ್ ಮುಖಾಂತರವೂ ವೀಕ್ಷಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಸ್ಪರ್ಧೆಯ ನಿಬಂಧನೆಗಳು: ಮುಳಿಯ ಗಾನರಥ ಇದೊಂದು ಪುತ್ತೂರು ತಾಲೂಕಿನ ಉದಯೋನ್ಮುಖ ಗಾಯಕ – ಗಾಯಕಿಯವರಿಗೆ ವೇದಿಕೆ ಸೃಷ್ಟಿ ಮಾಡುವ ಅಪೂರ್ವ ಕಾರ್ಯಕ್ರಮವಾಗಿದೆ. ಇದರ ನಿಬಂಧನೆಗಳು ಹೀಗಿವೆ.

ವಯೋಮಿತಿ ಆಧಾರಕ್ಕಾಗಿ ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ ಕಡ್ಡಾಯ.; ಪ್ರೇಕ್ಷಕರಿಗೆ ಕಾರ್ಯಕ್ರಮ ವೀಕ್ಷಿಸಲು ಆನ್‌ಲೈನ್‌ನಲ್ಲಿ ವ್ಯವಸ್ಥೆ ಮಾಡಲಾಗುವುದು.; ಕರೋಕೆ ಗಾಯನದಲ್ಲಿ ಹಾಡುವಾಗ ಎಲ್ಲಿಯೂ ಕರೋಕೆ ತಪ್ಪದಂತೆ ಹಾಡಬೇಕು.; ಕರೋಕೆ ಗಾಯನ ಹಾಡುವವರು ಕರೋಕೆ ಇರುವ ಶೃತಿಯಲ್ಲಿ ಹಾಡಬೇಕು.; ಕರೋಕೆ ಗಾಯನದಲ್ಲಿ ತಾಳಬದ್ಧವಾಗಿ ಹಾಡಬೇಕು, ಸಾಹಿತ್ಯ ತಪ್ಪಾಗಿ ಇರಬಾರದು.; ಗೀತೆಯನ್ನು ಅಚ್ಚುಕಟ್ಟಾಗಿ ಪ್ರಸ್ತುತಪಡಿಸಬೇಕು.; ಚಿಕ್ಕಮಕ್ಕಳೊಂದಿಗೆ ಪೋಷಕರು ಹಾಜರಿರತಕ್ಕದ್ದು.; ವಯೋಮಿತಿ 12ವಯಸ್ಸಿನಿಂದ ೨೧ರವರೆಗೆ ಹಾಗೂ ಮೇಲ್ಪಟ್ಟ ವಯಸ್ಸಿನವರನ್ನು ಸಾರ್ವಜನಿಕ ವಿಭಾಗವೆಂದು 2 ವಿಭಾಗ ಮಾಡಲಾಗುವುದು.; ಆಡಿಷನ್‌ನಲ್ಲಿ 50 ಸ್ಪರ್ಧಿಗಳು ಮೇಲ್ಪಟ್ಟು ಇದ್ದಲ್ಲಿ ಹಾಡಿನ ಪಲ್ಲವಿ ಮತ್ತು ಪ್ರಥಮ ಚರಣ ಮಾತ್ರ ಹಾಡಲು ಅವಕಾಶ ನೀಡಲಾಗುವುದು.; ಕರೋಕೆ ಹಾಡುವ ಸರ್ಧಿಗಳು ಕನ್ನಡ, ಹಿಂದಿ, ತುಳು ಹಾಗೂ ಮಲಯಾಳಂ ಭಾಷೆಗಳ ಹಾಡುಗಳನ್ನು ಹಾಡಲು ಅವಕಾಶ ಇರುತ್ತದೆ.; ಆಡಿಷನ್‌ನಲ್ಲಿ ಭಾಗವಹಿಸಿದ ಪ್ರತಿಯೊಬ್ಬ ಸ್ಪರ್ಧಿಗೂ ಪ್ರಮಾಣ ಪತ್ರ ನೀಡಿ ಪುರಸ್ಕರಿಸಲಾಗುವುದು.; ಆಡಿಷನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸ್ಪಽಗಳಲ್ಲಿ ಆಯ್ಕೆಯಾದವರಿಗೆ ಸೆಮಿ ಫಿನಾಲೆ ಸುತ್ತಿನಲ್ಲಿ ಸ್ಪರ್ಧಿಸಲು ಅವಕಾಶವಿದೆ.; ಗ್ರ್ಯಾಂಡ್ ಫಿನಾಲೆಯ ವಿಜೇತರನ್ನು `ಪುತ್ತೂರು ಮುಳಿಯ ಗಾನ ಕೋಗಿಲೆ’ ಎಂಬ ಬಿರುದು ನೀಡಿ ಪುರಸ್ಕರಿಸಲಾಗುವುದು.; ನುರಿತ ಹಿನ್ನಲೆ ಸಂಗೀತ ತೀರ್ಪುಗಾರರು ಹಾಗೂ ಸಂಸ್ಥೆಯ ತೀರ್ಮಾನವೇ ಅಂತಿಮ.; ಕೋವಿಡ್ ನಿಯಮವನ್ನು ಪಾಲಿಸುವಲ್ಲಿ ಎಲ್ಲರೂ ಸಹಕರಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಕಾರ್ಯಕ್ರಮದ ಸಂಯೋಜಕರಾದ ಪ್ರವೀಣ್ ಮತ್ತು ಆನಂದ್ ಕುಲಾಲ್ ಅವರನ್ನು 9743175916 ಮತ್ತು 9844602916  ಸಂಖ್ಯೆಗಳಲ್ಲಿ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ. 

LEAVE A REPLY

Please enter your comment!
Please enter your name here