ಕೋಡಿಂಬಾಳ: ವಿಷದ ಹಾವು ಕಡಿದು ರೈತ ಸಾವು

0

ಕಡಬ: ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ರೈತರೋರ್ವರು ವಿಷದ ಹಾವು ಕಡಿದು ಸಾವನ್ನಪ್ಪಿದ ಘಟನೆ ಕಡಬ ಠಾಣಾ ವ್ಯಾಪ್ತಿಯ ಕೋಡಿಂಬಾಳ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.

 

ಮೃತಪಟ್ಟ ರೈತನನ್ನು ಕೋಡಿಂಬಾಳ ಗ್ರಾಮದ ಪೆಲೊತ್ತೊಡಿ ನಿವಾಸಿ ಧರ್ಮಪಾಲ ಗೌಡ( 58) ಎಂದು ಗುರುತಿಸಲಾಗಿದೆ. ಇವರು ತಮ್ಮ‌ಮನೆಯ ಹತ್ತಿರದ ಅಡಕೆ ತೋಟಕ್ಕೆ ಸ್ಪ್ರಿಂಕ್ಲ್ ರ್ ಅಳವಡಿಸಲು ಹೋದ ಸಂದರ್ಭದಲ್ಲಿ ಯಾವುದೋ ಕಾರ್ಕೋಟಕ ವಿಷದ ಹಾವೊಂದು ಅವರ ಕಾಲಿಗೆ ಕಡಿದಿದೆ. ಅವರು ತಕ್ಷಣ ಮನೆಯ ಹತ್ತಿರ ಬರುತ್ತಿದ್ದಂತೆ ಸ್ಮೃತಿ ತಪ್ಪಿ ನೆಲಕ್ಕೆ ಬಿದ್ದಿದ್ದಾರೆ. ತಕ್ಷಣ ಅವರನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಯಿತು. ಅಷ್ಟೊತ್ತಿಗಾಗಲೆ ಅವರ ಪ್ರಾಣಪಕ್ಷಿ ಹಾರಿಹೊಗಿತ್ತು. ವೈದ್ಯಾಧಿಕಾರಿಯವರು ತಪಾಸನೆ ನಡೆಸಿ ಮೃತಪಟ್ಟಿರುವುನ್ನು ದೃಢಪಡಿಸಿದರು. ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೃತರ ಪುತ್ರ ರಾಜೇಶ್ ನೀಡಿದ ದೂರಿನಂತೆ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರಿದ್ದಾರೆ.

LEAVE A REPLY

Please enter your comment!
Please enter your name here