ಅರಂಬೂರು : ಮೂಕಾಂಬಿಕಾ ಭಜನಾ ಮಂದಿರದಲ್ಲಿ ನವರಾತ್ರಿ ಪ್ರಯುಕ್ತ ದುರ್ಗಾಪೂಜೆ ಮತ್ತು ಆಯುಧ ಪೂಜೆ

0

 

 

ಅರಂಬೂರು ಶ್ರೀ ಮೂಕಾಂಬಿಕಾ ಭಜನಾ ಮಂದಿರದಲ್ಲಿ ಅ.30 ರಂದು ನವರಾತ್ರಿ ಉತ್ಸವದ ಪ್ರಯುಕ್ತ ವಿಶೇಷವಾಗಿ ಲಲಿತಾ ಪಂಚಮಿಯಂದು ದುರ್ಗಾಪೂಜೆಯು ನಡೆಯಿತು.

ಸಂಜೆ ಪುರೋಹಿತರ ನೇತೃತ್ವದಲ್ಲಿ ಪೂಜಾ ಕಾರ್ಯ ಆರಂಭಗೊಂಡಿತು. ಆಗಮಿಸಿದ ಭಕ್ತಾದಿಗಳು ಸೇವಾ ರೂಪದಲ್ಲಿ ಪೂಜೆಯನ್ನು ಮಾಡಿಸಿದರು. ರಾತ್ರಿ ಶ್ರೀ ದೇವಿಗೆ ಮಹಾ ಪೂಜೆಯಾಗಿ ಪ್ರಸಾದ ವಿತರಣೆಯಾಯಿತು. ಬಳಿಕ ಆಗಮಿಸಿದ ಸರ್ವರಿಗೂ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು. ವಿಜಯ ದಶಮಿ ಪ್ರಯುಕ್ತ ಅದೇ ದಿನ ವಿಶೇಷವಾಗಿ ಆಯುಧ ಪೂಜೆಯು ನಡೆಯಿತು. ಸ್ಥಳೀಯ ಭಕ್ತಾದಿಗಳು ತಮ್ಮ ವಾಹನದೊಂದಿಗೆ ಆಗಮಿಸಿ ಪೂಜೆಯನ್ನು ಮಾಡಿಸಿದರು. ಮಂದಿರದ ಗೌರವಾಧ್ಯಕ್ಷ ಶ್ರೀಪತಿ ಭಟ್ ಮಜಿಗುಂಡಿ, ಅಧ್ಯಕ್ಷ ರತ್ನಾಕರ ರೈ ಅರಂಬೂರು ಹಾಗೂ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಸಹಕರಿಸಿದರು. ಪರಿಸರದ ಭಕ್ತಾದಿಗಳು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

 

LEAVE A REPLY

Please enter your comment!
Please enter your name here