ಕಾಣಿಯೂರು ಶ್ರೀ ಲಕ್ಷ್ಮೀ ನರಸಿಂಹ ಭಜನಾ ಮಂಡಳಿಯ ವತಿಯಿಂದ ಧನಸಹಾಯ ವಿತರಣೆ

0

ಕಾಣಿಯೂರು: ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಕೂಡುರಸ್ತೆ ಇದರ ವತಿಯಿಂದ ಆಂಬುಲೆನ್ಸ್ ನೀಡುವ ಯೋಜನೆಗೆ ಪೂರಕವಾಗಿ ಕಾಣಿಯೂರು ಶ್ರೀ ಲಕ್ಷ್ಮೀ ನರಸಿಂಹ ಭಜನಾ ಮಂಡಳಿಯ ವತಿಯಿಂದ ಧನಸಹಾಯದ ಚೆಕ್ ಅನ್ನು ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ನಡೆದ ಕಾಣಿಯೂರು ಪ್ರೀಮಿಯರ್ ಲೀಗ್ 2022 ರ ಸಮಾರೋಪ ಸಮಾರಂಭದಲ್ಲಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷರಾದ ನವೀನ್ ಕಟ್ಟತ್ತಾರುರವರಿಗೆ ನೀಡಲಾಯಿತು.

ಈ ಸಂದರ್ಭದಲ್ಲಿ ಕಾಣಿಯೂರು ಗ್ರಾಮಪಂಚಾಯತ್ ಉಪಾಧ್ಯಕ್ಷರಾದ ಗಣೇಶ್ ಉದುನಡ್ಕ,ಬೆಳ್ಳಾರೆ ಪೋಲಿಸ್ ಠಾಣೆಯ ಉಪನೀರಿಕ್ಷಕರಾದ ಆಂಜನೇಯ ರೆಡ್ಡಿ, ಅಗಳಿ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಉದಯ ರೈ ಮಾದೋಡಿ,ಜಾನುವಾರು ಸಂವರ್ಧನ ಮತ್ತು ತರಬೇತಿ ಕೇಂದ್ರ ಇದರ ಉಪನಿರ್ದೇಶಕ ಧರ್ಮಪಾಲ ಗೌಡ ಕರಂದ್ಲಾಜೆ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ನ ಗೌರವಾಧ್ಯಕ್ಷರಾದ ರಾಮಣ್ಣ ಗೌಡ ಮುಗರಂಜ, ಕಾರ್ಯದರ್ಶಿ ರಕ್ಷಿತ್ ಮುಗರಂಜ ,ಕಾಣಿಯೂರು ಶ್ರೀ ಲಕ್ಷ್ಮೀ ನರಸಿಂಹ ಭಜನಾ ಮಂಡಳಿಯ ಅಧ್ಯಕ್ಷರಾದ ವಾಸುದೇವ ನಾಯ್ಕ್ ತೋಟ, ಉಪಾಧ್ಯಕ್ಷರಾದ ಪುಟ್ಟಣ ಗೌಡ ಮುಗರಂಜ, ವಿಶ್ವನಾಥ ಓಡಬಾಯಿ, ಪ್ರಧಾನ ಕಾರ್ಯದರ್ಶಿ ಜಯಂತ ಅಬೀರ, ಕೋಶಾಧಿಕಾರಿ ಲಕ್ಷ್ಮಣ ಗೌಡ ಮುಗರಂಜ ಸದಸ್ಯರುಗಳಾದ ಪರಮೇಶ್ವರ ಗೌಡ ಅನಿಲ ಸುರೇಶ್ ಓಡಬಾಯಿ, ರಾಜೇಶ್ ಮೀಜೆ, ಪುನೀತ್ ಕಲ್ಪಡ,ಬಾಬು ಮಾದೋಡಿ, ಧರ್ಮಪಾಲ ಕಲ್ಪಡ,ವಸಂತ ಪೆರ್ಲೋಡಿ,ರಚನ್ ಬರಮೇಲು,ವಿನಯ್ ಎಲುವೆ,ಕೀರ್ತಿಕುಮಾರ್ ಎಲುವೆ, ದಿನೇಶ್ ಮುಗರಂಜ ದಿವಾಕರ ಬೆದ್ರಾಜೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here