ಆಲೆಟ್ಟಿ ಸದಾಶಿವ ದೇವಳದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ನಿರಂತರ ಭಜನಾ ಕಾರ್ಯಕ್ರಮ ಹಾಗೂ ದುರ್ಗಾಪೂಜೆ

0

 

 

ಆಲೆಟ್ಟಿ ಶ್ರೀ ಸದಾಶಿವ ದೇವಳದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಸೆ.26 ರಿಂದ 9 ದಿನಗಳ ಕಾಲ ನಿರಂತರವಾಗಿ ಪ್ರತಿದಿನ ಸ್ಥಳೀಯ ಭಜಕರಿಂದ ಭಜನಾ ಕಾರ್ಯಕ್ರಮ ಹಾಗೂ ವಿಶೇಷವಾಗಿ ದುರ್ಗಾಪೂಜೆಯು ಪ್ರಧಾನ ಅರ್ಚಕ ಹರ್ಷಿತ್ ಬನ್ನಿಂತಾಯ ಹಾಗೂ ಸಹ ಅರ್ಚಕ ರಾದ ಸುಬ್ರಾಯ ಭಟ್, ಸುಂದರ ಹೊಳ್ಳ ರವರ ನೇತೃತ್ವದಲ್ಲಿ ನಡೆಯಿತು.

ಪ್ರತಿದಿನ ಸ್ಥಳೀಯ ಭಕ್ತಾದಿಗಳು ಆಗಮಿಸಿ ಭಜನಾ ಸಂಕೀರ್ತನೆ ಯಲ್ಲಿ ಪಾಲ್ಗೊಂಡರು. ಸೇವಾ ರೂಪದಲ್ಲಿ ಭಜನಾ ಸೇವೆ ಹಾಗೂ ದುರ್ಗಾಪೂಜೆ ಯು ಸೇವಾ ರೂಪದಲ್ಲಿ ನಡೆಯಿತು. ರಾತ್ರಿ ಮಹಾ ಮಂಗಳಾರತಿಯಾಗಿ ಪ್ರಸಾದ ವಿತರಿಸಲಾಯಿತು. ಈ‌ ಸಂದರ್ಭದಲ್ಲಿ ವ್ಯ.ಸ.ಅಧ್ಯಕ್ಷ ತೀರ್ಥ ಕುಮಾರ್ ಕುಂಚಡ್ಕ ಹಾಗೂ ಸಮಿತಿ ಸದಸ್ಯರು ,ಭಜನಾ ಸಂಘ ದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು. ಸ್ಥಳೀಯ ಗ್ರಾಮದ ಭಕ್ತಾದಿಗಳು ಆಗಮಿಸಿ ಉತ್ಸವದಲ್ಲಿ ಪಾಲ್ಗೊಂಡರು.
ಅ‌.4 ರಂದು ಸಂಜೆ 4.00 ಗಂಟೆಗೆ ದೇವಳದಲ್ಲಿ ಸಾರ್ವಜನಿಕ ಆಯುಧ ಪೂಜೆಯು (ವಾಹನ ಪೂಜೆ) ನಡೆಯಲಿರುವುದಾಗಿ ಸಮಿತಿ ಅಧ್ಯಕ್ಷರು ತಿಳಿಸಿದರು.

 

LEAVE A REPLY

Please enter your comment!
Please enter your name here