ವಿಟ್ಲ ಟಿ.ಎ.ಜೆ ಮೋಟರ್ಸ್ , ಉಪ್ಪಿನಂಗಡಿಯ ಜೆ.ವಿ ಮೋಟರ್ಸ್ ನಲ್ಲಿ ಯಮಹಾ ದ್ವಿಚಕ್ರ ವಾಹನಗಳ ಪ್ರತಿ ಖರೀದಿಗೆ ವಿಶೇಷ ಕೊಡುಗೆಗಳು

0

ವಿಟ್ಲ: ಯಮಹಾ ದ್ವಿಚಕ್ರ ವಾಹನಗಳ ಬಂಟ್ವಾಳ ತಾಲೂಕಿನ  ಅಧಿಕೃತ ಡೀಲರ್ ಆಗಿರುವ ವಿಟ್ಲ – ಮಂಗಳೂರು ರಸ್ತೆಯ ಸರೋಜಿನಿ ಆನಂದ ಆರ್ಕೇಡ್ ನಲ್ಲಿರುವ ಟಿ.ಎ.ಜೆ. ಮೋಟರ್ಸ್ ಹಾಗೂ ಪುತ್ತೂರು ತಾಲೂಕಿನ ಅಧಿಕೃತ ಡೀಲರ್ ಆಗಿರುವ ಉಪ್ಪಿನಂಗಡಿಯ ೩೪ನೇ ನೆಕ್ಕಿಲಾಡಿಯ ಕಾರ್ ಕ್ಲಬ್ ಬಳಿ ಇರುವ ಜೆ.ವಿ. ಮೋಟರ್ಸ್ ನಲ್ಲಿ ಯಮಹಾ ಕಂಪೆನಿಯ  ದ್ವಿಚಕ್ರ ವಾಹನಗಳ ಖರೀದಿಗೆ  ೨೦೦೦ ರೂಪಾಯಿ ವರೆಗಿನ ವಿಶೇಷ ಕೊಡುಗೆಗಳನ್ನು ಸಮರ್ಪಿಸುತ್ತಿದ್ದು ನಿಮ್ಮ ಮನದಿಚ್ಚೆಯ ಯಮಹಾ ದ್ವಿಚಕ್ರ ವಾಹನದೊಂದಿಗೆ ಸವಾರಿ ಮಾಡುವ ಸದಾವಕಾಶವನ್ನು ನೀಡುತ್ತಿದೆ.

ಕಡಿಮೆ ದಾಖಲಾತಿಯೊಂದಿಗೆ ತಮ್ಮ ಮನದಿಚ್ಚೆಯ ವಾಹನವನ್ನು ಖರೀದಿಸುವ ಸದವಕಾಶವನ್ನು ಗ್ರಾಹಕರಿಗಾಗಿ ಸಂಸ್ಥೆ ನೀಡುತ್ತಿದ್ದು, ವಾಹನಗಳ ಖರೀದಿಗೆ ರೂ.2000 ಬೆಲೆಯ ಕೊಡುಗೆಗಳನ್ನು ನೀಡುತ್ತಿದೆ ಮಾತ್ರವಲ್ಲದೆ ಪ್ರತಿ ಖರೀದಿಗೆ ಗಿಫ್ಟ್ ನೀಡಲಾಗುತ್ತದೆ. ಜೊತೆಗೆ ಯಾವುದೇ ಕಂಪನಿಯ ಹಳೆಯ ವಾಹನಗಳ ಎಕ್ಸ್‌ಚೇಂಜ್‌ಗೆ ಬೋನಸ್ ನೀಡಲಾಗುತ್ತದೆ. ನಿಮ್ಮ ನೆಚ್ಚಿನ ವಾಹನದೊಂದಿಗೆ ಮನೆಗೆ
ಸವಾರಿ ಮಾಡುವ ಸುವರ್ಣಾವಕಾಶವನ್ನು ನೀಡುತ್ತಿದೆ.

ಕಡಿಮೆ ಮುಂಗಡ ಪಾವತಿ;
ನಿಮ್ಮ ಮನದಿಚ್ಚೆಯ ಯಮಹಾ ದ್ವಿಚಕ್ರ ವಾಹನ ಖರೀದಿಸಲು ಇದು ಸಕಾಲ. ಕೇವಲ ರೂ.13333 ರೂಪಾಯಿ ಪಾವತಿಸಿ ಹೊಚ್ಚ ಹೊಸ ಯಮಹಾ ಎಫ್.ಝೆಡ್ ಎಸ್  ವಾಹನದೊಂದಿಗೆ ಸವಾರಿ ಮಾಡಬಹುದಾಗಿದೆ. ಅತೀ ಕಡಿಮೆ ಮುಂಗಡ ಪಾವತಿಯೊಂದಿಗೆ ವಾಹನವನ್ನು ನಿಮ್ಮದಾಗಿಸುವ ಅವಕಾಶವನ್ನು ಸಂಸ್ಥೆ ನೀಡುತ್ತಿದೆ.

ಸ್ಪಾಟ್ ಬುಕ್ಕಿಂಗ್, ಸ್ಪಾಟ್ ಡೆಲಿವರಿ :
ಕಡಿಮೆ ಹಾಗೂ ಸುಲಭ ಮಾಸಿಕ ಕಂತುಗಳ ಯೋಜನೆಯ ಸರಳ ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಸರಳ ದಾಖಲೆಯೊಂದಿಗೆ ಕಡಿಮೆ ಬಡ್ಡಿ ದರದಲ್ಲಿ ಲಭ್ಯ. ಸ್ಥಳದಲ್ಲೇ ಫೈನಾನ್ಸ್ ಎಕ್ಸ್‌ಚೇಂಜ್, ಬುಕ್ಕಿಂಗ್ ಹಾಗೂ ವಿತರಣಾ ಸೌಲಭ್ಯ ನೀಡಲಾಗುತ್ತಿದೆ. ಗ್ರಾಹಕರು ಆದಾರ್, ಪಾನ್, ಬ್ಯಾಂಕ್ ಪಾಸ್ ಪುಸ್ತಕ,  ಕರೆಂಟ್ ಬಿಲ್ ಪ್ರತಿ ಅಥವಾ ಮನೆತೆರಿಗೆ ಪ್ರತಿ, ಮೂರು ಭಾವಚಿತ್ರ ಅಗತ್ಯವಿದೆ. ಹೆಚ್ಚಿನ ಮಾಹಿತಿಗಾಗಿ ವಿಟ್ಲ ಟಿ.ಎ.ಜೆ ಮೋಟರ್ಸ್ ನ ದೂರವಾಣಿ ಸಂಖ್ಯೆ 6364911481, 6374911482 ಹಾಗೂ ಉಪ್ಪಿನಂಗಡಿಯ ಜೆ.ವಿ ಮೋಟರ್ಸ್ ನ ದೂರವಾಣಿ ಸಂಖ್ಯೆ 8951522976, 8951522978ಯನ್ನು ಸಂಪರ್ಕಿಸ ಬಹುದಾಗಿದೆ.

LEAVE A REPLY

Please enter your comment!
Please enter your name here