ಕಲ್ಲೇಗ ದೈವಸ್ಥಾನದಲ್ಲಿ ಕಲ್ಕುಡ, ಕಲ್ಲುರ್ಟಿ ದೈವ ನರ್ತಕರಿಗೆ ಸನ್ಮಾನ

0

ಪುತ್ತೂರು:ಹಲವು ವರ್ಷಗಳಿಂದ ಕಳೆದ ವರ್ಷದ ತನಕ ಕಲ್ಲೇಗ ಶ್ರೀ ಕಲ್ಕುಡ ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವದಲ್ಲಿ ದೈವ ನರ್ತಕರಾಗಿ ಸೇವೆ ಸಲ್ಲಿಸುತ್ತಾ ಬಂದಿರುವ ಹಿರಿಯರಿಬ್ಬರನ್ನು ದೈವಸ್ಥಾನ ಮತ್ತು ಗ್ರಾಮಸ್ಥರ ಪರವಾಗಿ ದೈವಸ್ಥಾನದ ನಡೆಯಲ್ಲಿ ಗೌರವ ಸನ್ಮಾನ ಮಾಡಿ ಅವರಿಂದ ಕಿರಿಯರಿಗೆ ನರ್ತನ ಸೇವೆ ಮಾಡಲು ದೈವಸ್ಥಾನದಲ್ಲಿ ಪ್ರಾರ್ಥನೆ ಮಾಡಲಾಯಿತು.


28 ವರ್ಷಗಳಿಂದ ಕಲ್ಕುಡ ದೈವದ ನರ್ತಕ ಸೇವಾಕರ್ತರಾಗಿರುವ ವಸಂತ ನಲಿಕೆ, 39 ವರ್ಷಗಳಿಂದ ಕಲ್ಲುರ್ಟಿ ದೈವ ನರ್ತಕ ಸೇವಕರ್ತರಾಗಿರುವ ಚೋಮ ನಲಿಕೆ ಅವರನ್ನು ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅಜಿತ್ ಕುಮಾರ್ ಜೈನ್, ಸದಸ್ಯರು ಮತ್ತು ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಹಾಗು ಕಲ್ಲೇಗ ರೂರಲ್ ಡೆವಲಪ್‌ಮೆಂಟ್ ಟ್ರಸ್ಟ್‌ನ ಅಧ್ಯಕ್ಷ ಸಂಜೀವ ನಾಯಕ್ ಕಲ್ಲೇಗ ಅವರು ಸನ್ಮಾನಿಸಿದರು.ಇದೇ ಸಂದರ್ಭದಲ್ಲಿ ಚೋಮ ಅವರ ಮಗ ರೋಹಿತ್ ಅವರು ಕಲ್ಲುರ್ಟಿ ದೈವ ಮತ್ತು ವಸಂತ ಅವರ ಸಹೋದರ ಹೊನ್ನಪ್ಪ ಕಲ್ಕುಡ ದೈವದ ನರ್ತನ ಸೇವೆ ಆರಂಭಿಸಿದರು.

LEAVE A REPLY

Please enter your comment!
Please enter your name here