ವೃದ್ಧೆಯನ್ನು ಆಶ್ರಮಕ್ಕೆ ದಾಖಲಿಸಿದ ಸಿಡಿಪಿಓ ಶ್ರೀಲತಾ

0

ಪುತ್ತೂರು: ಹತ್ತಿರದ ಸಂಬಂಧಿಕರು ಇದ್ದರೂ ಪುತ್ತೂರಿನ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಳೆದ ಮೂರು ತಿಂಗಳಿನಿಂದ ಅನಾಥ ಸ್ಥಿತಿಯಲ್ಲಿದ್ದ ಎಂಬತ್ತರ ಹರೆಯದ ವೃದ್ಧೆಯೋರ್ವರನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಲತಾರವರು ಕಡಬ ನೂಜಿಬಾಳ್ತಿಲದ ಮರಿಯಾಲಮ್ಮ ಆಶ್ರಮಕ್ಕೆ ದಾಖಲಿಸಿದ್ದಾರೆ. ಚಿಕ್ಕಮುಡ್ನೂರು ಸಮೀಪದ ಜಿಡೆಕಲ್ಲು ಎಂಬಲ್ಲಿಯ ಸಂಕಮ್ಮ‌ ಎಂಬ ವೃದ್ಧೆ ಇವರಾಗಿದ್ದು ಅನಾಥ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯ ವೈದ್ಯರ ಮಾಹಿತಿ ಮೇರೆಗೆ ಸಿಡಿಪಿಓ ಶ್ರೀಲತಾರವರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದರು. ಪುತ್ತೂರು ಮತ್ತು ಕಡಬ ವ್ಯಾಪ್ತಿಯಲ್ಲಿ ವೃದ್ಧೆಯನ್ನು ಆಶ್ರಮಕ್ಕೆ ದಾಖಲು ಮಾಡಲು ಸಿಡಿಪಿಓರವರು ಪ್ರಯತ್ನ ನಡೆಸಿದ್ದರು. ಆದರೆ, ಸರಕಾರದಿಂದ ಆಶ್ರಮದ ವ್ಯವಸ್ಥೆ ಇಲ್ಲದಿರುವುದರಿಂದ ವೃದ್ಧೆಯನ್ನು ಖಾಸಗಿ ಆಶ್ರಮಕ್ಕೆ ಸೇರಿಸಲು ಪ್ರಯತ್ನಿಸಲಾಗಿತ್ತು.‌ ಕೊನೆಗೆ ನೂಜಿಬಾಳ್ತಿಲದ ಆಶ್ರಮದವರು ತಮ್ಮಲ್ಲಿಗೆ ಸೇರಿಸಿಕೊಳ್ಳಲು ಮುಂದಾಗಿದ್ದರು. ಈ‌ ನಿಟ್ಟಿನಲ್ಲಿ ಶ್ರೀಲತಾರವರು ಅಲ್ಲಿ ವೃದ್ಧೆಯನ್ನು ದಾಖಲು‌ ಮಾಡಿದ್ದಾರೆ. ವೃದ್ಧೆಯ ಸಂಬಂಧಿಕರು ಯಾರಾದರೂ ಇದ್ದರೆ ಕೂಡಲೇ ಮಹಿಳಾ ಮತ್ತು ಮಕ್ಕಳ‌‌ ಕಲ್ಯಾಣ ಇಲಾಖೆಯ ಪುತ್ತೂರು ಕಛೇರಿಗೆ ಭೇಟಿ ನೀಡಬೇಕು ಎಂದು‌ ಸಿಡಿಪಿಓ‌ ಶ್ರೀಲತಾ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here